ಭಟ್ಕಳದ ಹೇಬಳೆಯಲ್ಲಿ ಕಸ ವಿಲೇವಾರಿ ವಿಚಾರವಾಗಿ ವೆಲ್ಫರ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ

ವರದಿ:ಕುಮಾರ ನಾಯ್ಕ

ಭಟ್ಕಳ

ಭಟ್ಕಳದ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಕಳದೆ ಹಲವಾರು ವರ್ಷಗಳಿಂದ ಇದ್ದು ಇದರ ಈ ಸಮಸ್ಯೆ ಬಗ್ಗೆ ಕಳೆದ 6 ತಿಂಗಳ ಹಿಂದೆ ಇಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ತಾತ್ಕಾಲಿಕವಾಗಿ ಕಸ ತೆಗೆಯಲಗತಿತ್ತು ಆದರೆ ಸಮಸ್ಯಯ ಶಾಶ್ವತ ಪರಿಹಾರ ಇನ್ನು ತನಕ ಸ್ಥಳೀಯ ಆಡಳಿತ ಮಾಡಿಲ್ಲ,ಅದ ಕಾರಣ ಇಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ಸದಸ್ಯರು ಹೇಬಳೆ ಸ್ಥಳೀಯ ನಾಗರಿಕರ ಜೋತೆ ಸೇರಿ ರಸ್ತೆ ತಡೆ ಮಾಡಿ ಪ್ರತಿಬಟನೆ ಮಾಡಲು ಮುಂದಾಗಿದ್ದರು, ಈ ವಿಷಯವನ್ನು ತಿಳಿದ ಕೂಡಲೇ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಸಿಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು ಮತ್ತು 10ದಿನದ ಒಳಗೆ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದ್ದು, ಪ್ರತಿಭಟನಾಕಾರ ಮನವೊಲಿಸಿ ರಸ್ತೆ ತಡೆ ಮಾಡದಂತೆ ಮನವರಿಕೆ ಮಾಡಿದರು.

CHETAN KENDULI

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆಸಿಫ್ ಶೇಕ್ ಜಂಟಿ ಕಾರ್ಯದರ್ಶಿಯಾದ ಅಸ್ಲಾಂ ಶೇಕ್ ಮುಖಂಡರಾದ ಜಬ್ಬಾರ್ ಅಸದಿ ಹಾಗೂ ಊರ ನಾಗರಿಕರು ಮುಂತಾದವರಿದ್ದರು.

Be the first to comment

Leave a Reply

Your email address will not be published.


*