ರಾಜ್ಯ ಸುದ್ದಿಗಳು
ಮಸ್ಕಿ
ತಾಲೂಕಿನ ಗುಡುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇರನಾಳ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಏರ್ರಾ ಬಿರ್ರಿಯಾಗಿ ಒಂದೊಂದು ಕಡೇ ಬಾಗಿದ್ದರಿಂದ ವಿದ್ಯುತ್ ತಂತಿಗಳು ಕೆಳಗಡೆ ಜೋತು ಬಿದ್ದಿವೆ. ಇದರಿಂದ ಸ್ಥಳೀಯರಿಗೆ, ಟ್ರಾಕ್ಟರ್,ಲಾರಿ ಸವಾರರಿಗೆ ಹಾಗೂ ಆಂಬುಲೆನ್ಸ್ ಸೇವೆಗೆ ತುಂಬಾ ತೊಂದರೆಯನ್ನುಂಟು ಮಾಡುತ್ತಿದೆ.ಯಾವ ಸಮಯದಲ್ಲಿ ಏನೂ ತೊಂದರೆ ಯಾಗಿ ಪ್ರಾಣ ಹಾನಿ ಆಗುತ್ತದೆ ಎಂಬ ಜೀವ ಭಯದಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುತ್ತಿರುವ ಮೇರನಾಳ ಗ್ರಾಮದ ಜನತೆ. ಒಟ್ಟಿನಲ್ಲಿ ಈಗ ಮಳೆಗಾಲ ಆರಂಭವಾಗಿದ್ದರಿಂದ ಯಾವ ಸಂದರ್ಭದಲ್ಲಿಏನೇನುಅನಾಹುತಸಂಭವಿಸಲಿದೆಯೋ ಏನೋ ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ಜೆಸ್ಕಾಂ ಇಲಾಖೆಗೆ ಎಷ್ಟು ಬಾರಿ ಗಮನಕ್ಕೆ ತಂದರೂ ಕ್ಯಾರೇ ಎನ್ನದ ಜೆಸ್ಕಾಂ ಇಲಾಖೆ ಮುಂದೆ ಸಂಭವಿಸುವ ಅನಾಹುತಗಳಿಗೆ ಹೊಣೆ ಯಾರು.? ಎನ್ನುವಂತಹದು ಗ್ರಾಮದ ನಿವಾಸಿಗಳ ಯಜ್ಞ ಪ್ರಶ್ನೆ ಯಾಗಿದೆ ಎಂದು ಮೌನೇಶ್ ಮೇರನಾಳ ತಾಲೂಕಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ( ವಿದ್ಯಾರ್ಥಿ ಒಕ್ಕೂಟ ಮಸ್ಕಿ) ಪತ್ರಿಕಾ ಹೇಳಿಕೆ ನೀಡುವ ಮೂಲಕ ಮೇರನಾಳ ಗ್ರಾಮದ ಸಮಸ್ಯೆ ಸರಿಪಡಿಸಿ ಇಲ್ಲವಾದರೇ ಮುಂದಿನ ದಿನಮಾನಗಳಲ್ಲಿ ನಿಮ್ಮ ಕಛೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
Be the first to comment