ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಾಮಕಾವಸ್ಥೇ : ಸಾರ್ವಜನಿಕರ ಗುಂಪು ಚರ್ಚೆ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

CHETAN KENDULI

ತಾಲ್ಲೂಕಿನ ಬಳಗಾನೂರ ಹೋಬಳಿಯ ಗೌಡನಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಿಗನೂರ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಎಂಬ ಒಂದು ದಿನದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು  ದಂಡಾಧಿಕಾರಿಗಳಾದ ಕವಿತಾ.ಆರ್ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.ನಂತರ ಮಾತನಾಡಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮದ  ಎಲ್ಲಾ ರೈತರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಸರಕಾರದ ಸವಲತ್ತು ಮನೆಬಾಗಿಲಿಗೆ ಎಂಬ ಮಾತು ಕೇಳುತ್ತಲೇ ಸಾರ್ವಜನಿಕರು ಗುಸು ಗುಸು ಮಾತುಗಳನ್ನಾಡುತ್ತಾ ಜಿಲ್ಲಾಧಿಕಾರಿಯೇ ಇಲ್ಲದೇ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಹೇಗೆ ಬಗೆಹರಿಸುವರು ಎನ್ನುವ ಗುಂಪು ಮಾತುಗಳು ಕೇಳಿಬಂದವು.

ಒಟ್ಟಿನಲ್ಲಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ”ಎಂಬ ಕಾರ್ಯಕ್ರಮವು ಸರಕಾರದ ವೆಚ್ಚ ಭರಿಸುವ ಹಾಗೂ ನಾಮಕಾವಸ್ಥೆ ಕಾರ್ಯಕ್ರಮ ಮಾಡಲು ಮಾತ್ರ ಸೀಮಿತವಾಗಿದೆ ಎಂದು ಕೆಲ ಸಾರ್ವಜನಿಕರು ಗುಂಪು ಚರ್ಚೆ ಮಾಡುತ್ತಾ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು.ಬೆಳ್ಳಿಗನೂರ ಗ್ರಾಮವು ಗೌಡನಭಾವಿ ಗ್ರಾಪಂ ಸೇರಿದ್ದು , ಈ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು  ಇಲಾಖೆಗಳಿಂದ ದೊರೆಯುವ ಸವಲತ್ತು ಹಾಗೂ ಸಾರ್ವಜನಿಕರ ಕುಂದು ಕೊರತೆಗಳು, ಬಹುತೇಕ ರೈತರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಯಾ ಇಲಾಖೆಯ ಕೌಂಟರ್ ಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿ ಸಂಖ್ಯೆ ಪಡೆದರು. ಬೆಳ್ಳಿಗನೂರು ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಕಂದಾಯ ಇಲಾಖೆಗೆ ಸಂಭಂದಿಸಿದ ಅರ್ಜಿಗಳು:-14, ಪಟ್ಟಣ ಪಂಚಾಯತ್:-1, ಆಹಾರ ಇಲಾಖೆ:- ಇಡೀ ಗ್ರಾಮದ ಪಡಿತರ ಚೀಟಿ ಸಮಸ್ಯೆ,ನೀರಾವರಿ ಇಲಾಖೆ:-ಕಾಲುವೆ ಮೇಲ್ದರ್ಜೆ:-1,ಶಾಸಕರ ಅನುದಾನ:-2, ಕೆಕೆಆರ್ಟಿಸಿ:-3, ತಾಲೂಕಾ ಪಂಚಾಯತ್:-3, ಶಿಕ್ಷಣ ಇಲಾಖೆ:-2, ಕೆಇಬಿ:-2 ಇನ್ನಿತರೇ ಸೇರಿ ಒಟ್ಟು 34 ಅರ್ಜಿಗಳನ್ನು ಸಲ್ಲಿಸಿದರೂ. ಅರ್ಜಿ ಸ್ವೀಕರಿಸಿ ತಕ್ಷಣ ಅಧಿಕಾರಿಯ ಗಮನಕ್ಕೆ ತಂದು ಸ್ಥಳದಲ್ಲಿಯೇ  ರೈತರಿಗೆ ಪರಿಹಾರ ಒದಗಿಸುವ ಭರವಸೆ ನೀಡಲಾಯಿತು.

 

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗೌಡನಭಾವಿ ಗ್ರಾಪಂ ಅಧ್ಯಕ್ಷೆ ಹನುಮಮ್ಮ, ಉಪಾಧ್ಯಕ್ಷ ಮಾಲಿಂಗಪ್ಪ, ಕಾರ್ಯ ನಿರ್ವಹಣಾಧಿಕಾರಿ ಅನ್ನಪೂರ್ಣ, ಮಹಾತ್ಮ ಗಾಂಧಿ ನರೇಗಾ ಯೋಜನೆ ಅಧಿಕಾರಿ ಶಿವಾನಂದ ರೆಡ್ಡಿ, ಸೈಯ್ಯದ್ ಅಖ್ತರ್ ಅಲಿ ಶಿರಸ್ತೇದಾರರು ಕಂದಾಯ ಇಲಾಖೆ, ಆರೋಗ್ಯ ಅಧಿಕಾರಿ ದಾವಲ್ ಸಾಬ ಬಳಗನೂರ, ಕೃಷಿ ಅಧಿಕಾರಿ ಶಿವು ದತ್ತು, ಉಪ ತಹಶೀಲ್ದಾರನಾಗಲಿಂಗಪ್ಪ ಪತ್ತಾರ, ಕಂದಾಯ ನಿರೀಕ್ಷಕ ಕರಿಬಸವ, ಲೋಕೋಪಯೋಗಿ ಇಲಾಖೆ ಸಿ.ಎನ್ ಪಾಟೀಲ್, ಭೂದಾಖಲೆಗಳ ಇಲಾಖೆ ಅಧಿಕಾರಿ ಶಿವಕುಮಾರ್, ಪಿಡಿಒ ಲಕ್ಷ್ಮಿಕಾಂತ ರೆಡ್ಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಿಡಿಪಿಒ ಅಶೋಕ್ , ನಾಗರಾಜು ಹೆಚ್, ಜೆಸ್ಕಾಂ ಇಂಜಿನಿಯರ್ ಬಸವನಗೌಡ , ಪೋಲಿಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ವೀರೇಶ, ಅಬಕಾರಿ ಇಲಾಖೆ ಅಧಿಕಾರಿ ಯಮನೂರ್ ತಳವಾರ ಸಿಂಧನೂರ,ಬೆಳ್ಳಿಗನೂರ ಗ್ರಾಮಸ್ಥರು, ಹಾಗೂ ರೈತರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*