ಎಸ್.ಎಸ್.ಎಲ್.ಸಿ ಬೋರ್ಡ್ ಅವಾಂತರ ವಿದ್ಯಾರ್ಥಿನಿಗೆ ಶಾಕ್: ಉತ್ತರ ಪತ್ರಿಕೆ ನಕಲು ಪ್ರತಿಯಲ್ಲಿ 80 ಅಂಕ:ಆದರೆ ಅಂಕಪಟ್ಟಿಯಲ್ಲಿ ಕೇವಲ 29

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗ

ಸಮಾಜ ವಿಜ್ಞಾನ ವಿಷಯದಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಬಿಸನಾಳ ಗ್ರಾಮದ ವಿದ್ಯಾರ್ಥಿನಿ ಅಮೃತಾ ಉಳ್ಳಾಗಡ್ಡಿ ಪಡೆದಿದ್ದು 80 ಕ್ಕೆ 80 ಅಂಕ. ಆದರೆ ಅಂಕಪಟ್ಟಿಯಲ್ಲಿ ನಮೂದಾಗಿದ್ದು ಕೇವಲ 29 ಅಂಕ.

ಬಾಗಲಕೋಟೆ: ಇತ್ತೀಚೆಗೆ ಎಸ್‌ಎಸ್‌ಎಲ್ಸಿ ಫಲಿತಾಂಶ ಬಂದಿದ್ದು 145 ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ಗಳಿಸಿದ್ದಾರೆ.ಕೆಲವರು ಅವರವರ ಅರ್ಹತೆಗೆ ಅನುಗುಣವಾಗಿ ಅಂಕ ಪಡೆದು ಸಂಭ್ರಮಿಸಿದ್ದಾರೆ. ಆದರೆ ಫಲಿತಾಂಶದ ವೇಳೆ ಎಸ್‌ಎಸ್‌ಎಲ್ಸಿ ಪರೀಕ್ಷಾ ಬೋರ್ಡ್ ನಿಂದ ಆದ ಯಡವಟ್ಟು ಓರ್ವ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕಂಟಕ ತಂದೊಡ್ಡಿದೆ.

ಸಮಾಜ ವಿಜ್ಞಾನ ವಿಷಯದಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಬಿಸನಾಳ ಗ್ರಾಮದ ವಿದ್ಯಾರ್ಥಿನಿ ಅಮೃತಾ ಉಳ್ಳಾಗಡ್ಡಿ ಪಡೆದಿದ್ದು 80 ಕ್ಕೆ 80 ಅಂಕ. ಆದರೆ ಅಂಕಪಟ್ಟಿಯಲ್ಲಿ ನಮೂದಾಗಿದ್ದು ಕೇವಲ 29 ಅಂಕ. ಇದರಿಂದ ವಿದ್ಯಾರ್ಥಿನಿಗೆ ಬಾರಿ ಆಘಾತವಾಗಿದ್ದು, ಇಷ್ಟೊಂದು ಕಡಿಮೆ ಅಂಕ ಬರೋಕೆ ಸಾಧ್ಯನೆ ಇಲ್ಲ. ನಾನು 80 ಅಂಕ ಬರೆದಿದ್ದೇನೆ ಎಂದು ಉತ್ತರ ಪತ್ರಿಕೆ ನಕಲು ಪ್ರತಿ ತರಿಸಿದಾಗ ಉತ್ತರಪತ್ರಿಕೆಯಲ್ಲಿ 80 ಅಂಕ ಬಿದ್ದಿರೋದು ಕಂಡು ಬಂದಿದೆ.

Be the first to comment

Leave a Reply

Your email address will not be published.


*