ರಾಜ್ಯ ಸುದ್ದಿಗಳು
ಮಸ್ಕಿ:
ತಾಲೂಕಿನ ಗುಂಡಾ ಗ್ರಾಮದಲ್ಲಿ 2018-19 ನೇ ಸಾಲಿನ ಎಮ್. ಐ ಯೋಜನಾ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಸರಿ ಸುಮಾರು 2 ರಿಂದ 3 ಕೋಟಿ ರೂಪಾಯಿ ಮೊತ್ತದ ಬೃಹತ್ ಮಟ್ಟದ ಮೇಲ್ಸೇತುವೆಯ ಕಾಮಗಾರಿಯು ತೀರಾ ಕಳಪೆ ಮಟ್ಟದ್ದಾಗಿದೆ.
2018-19 ನೇ ಸಾಲಿನ (ಎಮ್. ಐ) ನೀರಾವರಿ ಇಲಾಖೆ ಕುಷ್ಟಗಿ ವ್ಯಾಪ್ತಿಗೆ ಒಳಪಡುವ ಕಾಮಗಾರಿಯಾಗಿದ್ದು, ತೀರಾ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದು ಯಂಕಣ್ಣ ಸಾಹುಕಾರ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಹಾಗೆಯೇ ನಿರ್ಲಕ್ಷ್ಯ ದೋರಣೆ ಮಾಡುತ್ತಿದ್ದಾರೆ. ಕಾಮಗಾರಿ ಹಂತದಲ್ಲಿ ಇರುವಾಗಲೇ ಒಂದು ಭಾಗದ ಮೇಲ್ಸೇತುವೆ
ಕುಸಿದಿದ್ದು ಅದನ್ನು ಮರು ನಿರ್ಮಾಣ ಮಾಡುತ್ತಿದ್ದಾರೆ ಅಂದರೇ ಎಷ್ಟರ ಮಟ್ಟಿನ ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬುದು ನೀವು ನೋಡಬಹುದು. ಆದ್ದರಿಂದ ಸಂಭಂದಪಟ್ಟ ಅಧಿಕಾರಿಗಳು ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪ್ರಥಮ ದರ್ಜೆ ಗುತ್ತಿಗೆದಾರರಾದ ವೀರೇಶ ಕುಮಾರ ಹೆಬ್ಬಾಳ ಎಂಬುವವರ ಲೈಸೆನ್ಸ್ ಅನ್ನು ರದ್ದು ಪಡಿಸಬೇಕು ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ , ಕಾರ್ಯನಿರ್ವಾಹಕ
ಇಂಜಿನಿಯರ್,ಸಹಾಯಕ ಇಂಜಿನಿಯರ್ ಇವರುಗಳನ್ನು ನಿರ್ಧಾಕ್ಷಿಣ್ಯವಾಗಿ ಸಸ್ಪೆಂಡ್ ಮಾಡಬೇಕು ಎಂದು ಯಂಕಣ್ಣ ಸಾಹುಕಾರ ಗುಂಡಾ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಾಯಲ್ಟಿ ಇಲ್ಲದ ಮರಳನ್ನು ಒಂದೇ ಕಡೆ ಸಂಗ್ರಹ ಮಾಡಿದ್ದು,ಕಾಮಗಾರಿ ಹಂತದಲ್ಲಿ ಇರುವಾಗಲೇ ಒಂದು ಭಾಗದ ಮೇಲ್ಸೇತುವೆ ಕುಸಿದಿದೆ ಈ ವಿಚಾರ ಗೊತ್ತಾಗುತ್ತಲೇ ಅದನ್ನು ಸರಿಪಡಿಸುವ ಕಾರ್ಯ ಮುಂದುವರಿಸಿದ್ದಾರೆ. ಹಾಗೆಯೇ ಅಂದಾಜು ಮೊತ್ತದ ಪಟ್ಟಿಯನ್ನು ಕೇಳಿದರೆ ಬೆಂಗಳೂರಿಗೆ ಬನ್ನಿ, ಬಳ್ಳಾರಿಗೆ ಬನ್ನಿ ಅಲ್ಲೇ ಸಿಗುತ್ತೆ ಎಂದು ಅಧಿಕಾರಿಗಳೂ ಹಾರಿಕೆಯ ಉತ್ತರವನ್ನು ನೀಡುತ್ತಾರೆ. “
– ಶ್ರೀ ಯಂಕಣ್ಣ ಸಾಹುಕಾರ ಗುಂಡಾ, ನಾಮನಿರ್ದೇಶಿತ ಸದಸ್ಯರು, ಬಗರ್ ಹುಕ್ಕುಂ ಆಕ್ರಮ ಸಕ್ರಮ ಸಾಗುವಳಿ ಸಮಿತಿಯ.
“ಮರುಳು ಸಂಗ್ರಹಕ್ಕೆ ರಾಯಾಲ್ಟಿ ಇಲ್ಲಾ ಎಂದು ಲಿಂಗಸುಗೂರು ಸಹಾಯಕ ಆಯುಕ್ತರಲ್ಲಿ ದೂರು ನೀಡಿದ್ದರು.ಆ ದೂರಿನ ಮೇರೆಗೆ ನಾನು ಮತ್ತು ನಮ್ಮ ಆರ್ ಐ ವಿಜಯಾ ಮೇಡಂ ಇಲ್ಲಿ ಬಂದು ಮರಳಿನ ರಾಯಲ್ಟಿ ಯ ದಾಖಲಾತಿಯನ್ನು ಕೇಳಿದೆವು ಸರಿ ಸುಮಾರು ಎರಡು ಮೂರು ಗಂಟೆಗಳ ಕಾಲ ಕಾದು ಕೊನೆಗೆ ದಾಖಲಾತಿಯನ್ನು ಕೇಳಿದರೆ ನಾಳೆ ಕೊಡುತ್ತೇವೆ ಎಂದು ಗುತ್ತಿಗೆದಾರರು ಕರೆಯ ಮೂಲಕ ತಿಳಿಸಿದರು. ಇದ್ಯಾಕೋ ನಮಗೆ ಅನುಮಾನ ಮೂಡಿತು ತತ್ ಕ್ಷಣವೇ ಗುಂಡಾ ಗ್ರಾಮ ವ್ಯಾಪ್ತಿಗೆ ಒಳಪಡುವ ತುರುವಿಹಾಳ ಪೋಲೀಸ್ ಠಾಣೆಯು ಜಪ್ತಿ ಮಾಡಿಕೊಳ್ಳಲು ಹಾಗೂ ಮುಂದಿನ ಕ್ರಮಕ್ಕಾಗಿ ಪೋಲಿಸ್ ಠಾಣೆಗೆ ಒಪ್ಪಿಸಲಾಯಿತು.”
-ಶ್ರೀ ರಮೇಶ ಗುಂಡಾ, ಗ್ರಾಮ ಲೆಕ್ಕಾಧಿಕಾರಿ
Be the first to comment