ಜಿಲ್ಲಾ ಸುದ್ದಿಗಳು
ಮಸ್ಕಿ:
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮಸ್ಕಿ ವತಿಯಿಂದ ಕಸಾಪ ಸಂಸ್ಥಾಪನಾ ದಿನಾಚರಣೆಯನ್ನು ಪಟ್ಟಣದ ಪ್ರಭವಿತುಂ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಕಾಲೇಜಿನ ಉಪಾಧ್ಯಕ್ಷ ರಾದ ಶ್ರೀ ಸುರೇಶ್ ಹರಸೂರು ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಸ್ಕಿಯ ಹಿರಿಯ ನಾಯಕರು,ರಾಯಚೂರು ಜಿಲ್ಲಾ ಪರಿಷತ್ ನ ಮಾಜಿ ಸದಸ್ಯರೂ, ಹಾಗೂ ಕಸಾಪ ದ ಅತ್ಯಂತ ಹಿರಿಯ ಸದಸ್ಯರಾದ ಶ್ರೀ ವೀರನಗೌಡ ಕಾರಲಕುಂಟಿಯವರು ವೇದಿಕೆಯ ಮೇಲೆ ಹಾಸಿನರಾಗಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ವೀರನಗೌಡ ಅವರು ಸುಮಾರು ಐವತ್ತರ ದಶಕದಲ್ಲಿ ತಾವು ಮತ್ತು ತಮ್ಮೊಂದಿಗೆ ಗುಂಡಯ್ಯ ಶ್ರೇಷ್ಟಿಯವರು ಹೀಗೆ ಕೇವಲ ಇಬ್ಬರು ಮಾತ್ರ ಸದಸ್ಯರಾಗಿದ್ದೆವು. ನಾಲ್ವಡಿ ಕೃಷ್ಣರಾಜ ಒಡೆಯರ್,
ಸರ್. ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ನಂತಹ ಮಹನೀಯರು ಒಂದು ನೂರ ಎಂಟು ವರ್ಷಗಳ ಹಿಂದೆ ಕಟ್ಟಿದ ಈ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದದ್ದು ಬಹಳ ಸಂತೋಷ.
ಇಂದಿನ ಯುವಕರು ಇಂಗ್ಲೀಷ್ ವ್ಯಾಮೋಹ ಕ್ಕೆ ಒಳಗಾಗದೇ ಕನ್ನಡ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡುದರು . ಈ ಸಂದರ್ಭದಲ್ಲಿ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಶ್ರೀ ಅಬ್ದುಲ್ ಅಜೀಜ್ ಅವರನ್ನು ಹಾಗೂ ಕಸಾಪ ದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಘನಮಠದಯ್ಯ ಸಾಲಿಮಠ ಅವರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಜಯ್ ಗಿಡದ ಸ್ವಾಗತಿಸಿದರು. ಕಸಾಪ ದ ಗೌರವ ಕಾರ್ಯದರ್ಶಿ ಶ್ರೀ ಪರಶುರಾಮ ಕೋಡಗುಂಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಸಾಪ ದ ಮತ್ತೋರ್ವ ಸದಸ್ಯರೂ, ಸರಾಕಾರಿ ಪದವಿ ಮಹಾವಿದ್ಯಾಲಯ ದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶ್ರೀನಿವಾಸ ಯಾಳಗಿ ಅವರು
ಕನ್ನಡ ಮನಸ್ಸುಗಳ ಮೇಲೆ ಪರಿಷತ್ತು ಬೀರಿದ ಪ್ರಭಾವ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಸಾಪ ಮಸ್ಕಿ ಘಟಕದ ಅಧ್ಯಕ್ಷರಾದ ಆದಪ್ಪ ಹೆಂಬಾ ಮಸ್ಕಿ ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮ ದಲ್ಲಿ ಸೌಹಾರ್ದ ಚಿಂತಕ ಅಬ್ದುಲ್ ಗನಿ, ಅಭಿಜಿತ್ ಸಿಂಗ್ ಮಾಲಿಪಾಟೀಲ್, ಗುಂಡೂರಾವ್ ದೇಸಾಯಿ, H.ಮಹಾಂತೇಶ್, ಮುಂತಾದ ಹಿರಿಯರಲ್ಲದೇ ಪ್ರಭವಿತುಂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕುಮಾರಿ ಸ್ಪೂರ್ತಿ ಮತ್ತು ಸ್ಪೂರ್ತಿ ದ್ವಯರು ಕಾರ್ಯಕ್ರಮ ವನ್ನು ಸೊಗಸಾಗಿ ನಿರೂಪಿಸಿದರೆ ಕೊನೆಯಲ್ಲಿ ಶ್ರೀಮತಿ ಮಾಜಾನ ಅವರು ವಂದಿಸಿದರು.
Be the first to comment