ಭಟ್ಕಳ
ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ವಕೀಲ ಸಾವೇರ್ ಲೂಯಿಸ್ ಅವರು ದಿನಾಂಕ 5/5/22 ರಂದು ತನ್ನ ಮೇಲೆ ಭಟ್ಕಳದ ಮುಂಡಲ್ಲಿಯ ರಿಯಲ್ ಎಸ್ಟೇಟ್ ದಲ್ಲಾಳಿ ಅರುಣ್ ಯಾನೆ ಹೊನ್ನಪ್ಪ ಜಟ್ಟಪ್ಪ ನಾಯ್ಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಭಟ್ಕಳದ ಮಿನಿ ವಿಧಾನಸೌಧದ 2 ಮಹಡಿಯಲ್ಲಿರುವ ಸರ್ವೆ ಕಚೇರಿ ಎದುರುಗಡೆ ವಕೀಲ ಸಾವೇರ್ ತಾನು ತನ್ನ ಕಕ್ಷಿದಾರ ಪರವಾಗಿ ಭಟ್ಕಳ ದ ಕೈಕಿಣಿ ಸರ್ವೆ ನಂಬರ್ 78/1 ರ ಜಾಗದ ವಿಚಾರವಾಗಿ ಅರುಣ್ ಜಟ್ಟಪ್ಪ ನಾಯ್ಕ ಹತ್ತಿರ ವಿಚಾರಣೆ ಗೆ ಹೋಗಿದಾಗ , ತನ್ನ ಮೇಲೆ ಹಲ್ಲೆ ನಡೆಸಿ , ಜೀವ ಬೆದರಿಕೆ ಹಾಕಿದ್ದಾರೆ ಎಂದು ಭಟ್ಕಳ ನಗರ ಠಾಣೆಯಲ್ಲಿ ವಕೀಲ ಸಾವೇರ್ ಲೂಯಿಸ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಭಟ್ಕಳ ನಗರ ಠಾಣೆಯ ಪೊಲೀಸ್ ಅಧಿಕಾರಿ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Be the first to comment