ಜಿಲ್ಲಾ ಸುದ್ದಿಗಳು
ಕುಂದಾಪುರ
ಕುಂದಾಪುರ ಮತ್ತು ಬೈಂದೂರ್ ತಾಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲೂ ಆಯುರ್ವೇದಿಕ್ ಡಾಕ್ಟರ್ ಗಳು ರಾಜಾರೋಷವಾಗಿ ಅಲೋಪಥಿ ಮೆಡಿಸಿನ್ ಕೊಟ್ಟು ಬಡಜನರಿಂದ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿರುವ ಬಗ್ಗೆ ಸಂಭಂದಪಟ್ಟ ಆರೋಗ್ಯ ಇಲಾಖೆ ಹಾಗೂ ಸರಕಾರ ಕ್ಕೆ ಶಾಸಕ ಸಂಸದರಿಗೆ ಗೊತ್ತಿದ್ದೇ ನಡೆಯುವಂತಹದ್ದು. ಗ್ರಾಮೀಣ ಭಾಗದಲ್ಲಿ ಹಾಗೂ ಪಟ್ಟಣ ,ನಗರ ಪ್ರದೇಶ ದಲ್ಲಿ ಕಾರ್ಯಾಚರಿಸುತ್ತಿರುವ ಅದೆಷ್ಟೋ ಖಾಸಗಿ ಕ್ಲಿನಿಕ್ ಗಳು ನೊಂದಣಿಯಾಗದೆ ತಮ್ಮ ತಮ್ಮ ಭರ್ಜರಿ ವ್ಯಾಪಾರ ನಡೆಸುತ್ತಲೇ ಇದೇ.ಈ ಬಗ್ಗೆ ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಅಂತಹ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಾಗ, ಸಾರ್ವಜನಿಕ ರ ಮೌಖಿಕ ಹಾಗೂ ಲಿಖಿತ ದೂರು ನಮ್ಮಲ್ಲಿ ಬಂದಾಗ, ಸಾಕ್ಷ್ಯಾಧಾರ ಸಮೇತ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಂತಹ ಕಾನೂನು ಬಾಹಿರ ಚಟುವಟಿಕೆಯ ವರದಿ ಮಾಡಿ ಕ್ರಮ ತೆಗೆದುಕೊಳ್ಳಲು ಒತ್ತಾಯ ಮಾಡುವುದು ಮಾಧ್ಯಮದ ಜವಾಬ್ದಾರಿ.
ಅನೇಕ ಪತ್ರಕರ್ತರು ಸಾರ್ವಜನಿಕ ದೂರಿನ ಮೇರೆಗೆ ಕೆಲವು ಕ್ಲಿನಿಕ್ ಗೆ ಗೌಪ್ಯವಾಗಿ ತೆರಳಿ ಸ್ಟಿಂಗ್ ಆಪರೇಷನ್ ನಡೆಸಿ ಅಲ್ಲಿ ನಡೆಯುವ ಅಕ್ರಮ ಮೆಡಿಸಿನ್ ಮಾಫಿಯಾದ ಬಗ್ಗೆ ದಾಖಲೆ ಸಮೇತ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದು ಈಗಾಗಲೇ 11 ಜನ BAMS ಡಾಕ್ಟರ್ ಗಳ ವಿರುದ್ಧ ಜಿಲ್ಲಾಧಿಕಾರಿಗಳು FIR ಮಾಡಿದ್ದಾರೆ. ಅಲ್ಲದೇ ADC ನಾಗರಾಜ್ ರವರು ಕೆಲವೊಂದು ಡಿಸ್ಟ್ರಿಬ್ಯೂಟರ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.ದಿನಾಂಕ 18/04/2022ರ ಬೆಳಗ್ಗೆ ಸುಮಾರು.11.30 ಗಂಟೆಗೆ ಡಾ.ರಾಜೇಶ್, ಮಿತ್ರ ಕ್ಲಿನಿಕ್ ಕೋಟೇಶ್ವರ ಇವರ ಮೆಡಿಕಲ್ ನಲ್ಲಿ ಅರ್ಹತೆ ಇಲ್ಲದ ವ್ಯಕ್ತಿ ಔಷಧ ನೀಡುವುದು ಸಾರ್ವಜನಿಕರು ನನ್ನ ಗಮನಕ್ಕೆ ತಂದಾಗ DHO, KPME ನೋಡಲ್ ಅಧಿಕಾರಿ, DRUG ಕಂಟ್ರೋಲರ್ ಗಮನಕ್ಕೆ ತಂದಿರುತ್ತೇನೆ. THOರವರಿಗೆ ಫೋನ್ ಮಾಡಿದಾಗ ಎಲ್ಲ ಸ್ಟಿಂಗ್ ಸಮಯದಲ್ಲೂ ಫೋನ್ ಕರೆಗೆ ಉತ್ತರ ನೀಡಲ್ಲ ಇವರು. ಅಲ್ಲಿನ ಮಾಹಿತಿ ಸಂಗ್ರಹಿಸುವ ಸಮಯದಲ್ಲಿ ನನ್ನ ಗುರುತು ಪತ್ತೆ ಹಚ್ಚಿದ ಡಾ ರಾಜೇಶ್, ತನ್ನ ಮಿತ್ರ ಡಾ ರವೀಂದ್ರ ತಲ್ಲೂರು ಇವರಿಗೆ ಕರೆ ಮಾಡಿ ಬರಹೇಳಿ, ಅವರು ತನ್ನ ವೈದ್ಯತಂಡ ಹಾಗೂ ಕೆಲವು ಸಹಚರರ ಮಿತ್ರ ಕ್ಲಿನಿಕ್ ಕೋಟೇಶ್ವರ ಇಲ್ಲಿಗೆ ಬಂದು ನನ್ನೊಡನೆ ಮಾತನಾಡಿ, ನಂತರ ಆಕ್ಷೇಪಣೆ ಮಾಡಿ, ನನ್ನನ್ನು ಬಲವಂತವಾಗಿ ಹೊರದಬ್ಬುವ ಪ್ರಯತ್ನ ಮಾಡಿ, ನೀನು ನಿವಾಳಿಸು ಎಂದು ಜೋರಾಗಿ ಗದರಿಸಿ, ಸರಿ ಸುಮಾರು 100ಕ್ಕೂ ಮಿಕ್ಕಿ ಜನ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದ್ದರು. ಅಲ್ಲದೇ ತದಾನಂತರ ಅವರ ಕ್ಲಿನಿಕ್ ಸಿಬ್ಬಂದಿ ಓರ್ವರು ತೆಗೆದ ವಿಡಿಯೋ ತುಣುಕನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ತನ್ನ ಸಾಮಾಜಿಕ ಜವಾಬ್ದಾರಿ ಮರೆತಿದ್ದಾರೆ. ಅಲ್ಲದೇ ಪತ್ರಕರ್ತ ನನ್ನಲ್ಲಿ ಹಣ ಕೇಳಿದ್ದಾರೆ ಎಂದು ಸುಳ್ಳು ಅರೋಪ ಮಾಡಿದಲ್ಲದೆ ಅವಾಚ್ಯ ಶಬ್ಬಗಳ ಬಳಕೆ ಮಾಡಿ ತನ್ನ ಈ ಗೂಂಡಾ ಪ್ರವೃತ್ತಿ ಯನ್ನು ಅನುಸರಿಸಲು ತಾನೇ ಅಧ್ಯಕ್ಷ ಎಂದು ಆಯುರ್ವೇದ ವೈದ್ಯರ ಸಂಘ ಎ ಎಫ್ ಐ ಕುಂದಾಪುರ ಇದರ ಸದಸ್ಯ ರಿಗೆ ತನ್ನ ಕ್ರಿಮಿನಲ್ ಬುದ್ಧಿವಂತಿಕೆ ಯನ್ನು ಪ್ರದರ್ಶನ ಮಾಡಿದ್ದಾರೆ.
ಇಷ್ಟೆಲ್ಲ ನಡೆದ ನಕಲಿ ಅಲೋಪತಿ ವೈದ್ಯರ ರಾಜೇಶ್ ಪತ್ರಕರ್ತ ಕಿರಣ್ ಮೇಲೆ ಪೊಲೀಸ್ ಸ್ಟೇಷನ್ ದೂರಿನಲ್ಲಿ ಕ್ಲಿನಿಕ್ ಒಳಗಡೆ ಡಾ. ರಾಜೇಶ್ ಶೆಟ್ಟಿ ರವರಿಗೆ, ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ದೀಪಾ ಎಂಬುವವರಿಗೂ ಸಹ ಬೆದರಿಕೆ ಹಾಕಿ, ಸೆಟಲ್ಮೆಂಟ್ ಮಾಡಿಕೊಳ್ಳದಿದ್ದರೆ ಗತಿ ನೆಟ್ಟಗಾಗುವುದಿಲ್ಲವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಳ್ಳು ದೂರಿನಲ್ಲಿ ಹೇಳಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾಗಿದ್ದು, ಹಾಗಿದ್ದಲ್ಲಿ ನಕಲಿ ಅಲೋಪತಿ ಡಾ. ರಾಜೇಶ್ ಶೆಟ್ಟಿ, ಡಾ. ರವೀಂದ್ರ ಗೊಲ್ಲ ಹಾಗೂ ಮಿತ್ರ ಮೆಡಿಕಲ್ ಸಿಬ್ಬಂದಿ ದೀಪಾರವರು ಕರಾವಳಿ ಧಾರ್ಮಿಕ ಕ್ಷೇತ್ರ ಶಂಕರನಾರಾಯಣ ಕಲ್ಕುಡ್ಕ ಕ್ಷೇತ್ರ, ಧರ್ಮಸ್ಥಳ ಮಂಜುನಾಥ ಕ್ಷೇತ್ರ, ಕೊಲ್ಲೂರು ಮೂಕಾಂಬಿಕೆ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ಥಾನದಲ್ಲಿ ಬಂದು ನಾನ್ ಹೇಳಿದ್ದಲ್ಲ ಸತ್ಯ ಎಂದು ಪ್ರಮಾಣ ಮಾಡುವುದಾದರೆ ಕಿರಣ ಪೂಜಾರಿ ಆದ ನಾನು ಸಹ ಈ ಎಲ್ಲಾ ಆಣೆ ಪ್ರಮಾಣಕ್ಕೆ ಬದ್ಧನಾಗಿರುತ್ತೇನೆ. ನಿಜವಾಗಲೂ ನಿಮಗೆ ನೈತಿಕತೆ ಇದ್ದದ್ದೇ ಹೌದಾದರೆ ಕರಾವಳಿ ಯಾವುದೇ ಧಾರ್ಮಿಕ ಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ನಾನು ಸಿದ್ಧನಿದ್ದೇನೆ. ನೀವು ಬನ್ನಿ ಸತ್ಯ, ಅಸತ್ಯ ಏನೆಂದು ಕರಾವಳಿಯ ಕಾರ್ಮಿಕ ದೈವಗಳ ಮುಂದೆ ನಿರ್ಧಾರವಾಗಲಿ. ಅಲ್ಲದೇ ಸೂಕ್ತ ದಾಖಲೆಗಳೊಂದಿಗೆ ಕಾನೂನು ಹೋರಾಟಕ್ಕೂ ಸಹ ಸಿದ್ದನಿದ್ದೇನೆ ಈಗಾಗಲೇ ಹಲವಾರು ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆಎಲ್ಲ ಪ್ರಕರಣದಲ್ಲಿ ವೈದ್ಯರ ವಿರುದ್ಧ ಸಾರ್ವಜನಿಕರ ಆಗಲಿ ಪತ್ರಕರ್ತರಾಗಲಿ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದಾಗ ಇದನ್ನು ನೀವು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತನ್ನಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಅದೇ ಈ ನಕಲಿ ಅಲೋಪತಿ ಡಾಕ್ಟರ್ಗಳು ಹೋಗಿ ದೂರು ನೀಡಿದಲ್ಲಿ ತಕ್ಷಣ FIR ಮಾಡುತ್ತಾರೆ. ಈಗಾಗಲೇ ಜಿಲ್ಲಾಧಿಕಾರಿಗಳು 11 ಜನ ನಕಲಿ ಅಲೋಪತಿ ಡಾಕ್ಟರುಗಳ ವಿರುದ್ಧ FIR ಅನ್ನು ಸುಮ್ಮನೆ ದಾಖಲಿಸಿಲ್ಲ ಸಾಕ್ಷ್ಯಾಧಾರಗಳನ್ನು ನೀಡಿದಮೇಲೆ ಅದನ್ನು ಪರಿಶೀಲಿಸಿ 5 ಜನರ ತನಿಖೆ ತಂಡವನ್ನು ಮಾಡಿದ್ದಾರೆ. ದುರಂತ ಅಂದ್ರೆ ಇದು ಸ್ವಾಮಿ ಅಲ್ಲಿದ್ದವರೆಲ್ಲ ಹೆಚ್ಚಿನವರು ಡಾಕ್ಟರ್ ಮತ್ತು ಅವರ ಸಹಚರರು ಆದರೆ ಸಾರ್ವಜನಿಕ ತರಾಟೆ ಎಂದು ವೈರಲ್ ಮಾಡಿ, ಸಾರ್ವಜನಿಕರು ಆಯುರ್ವೇದ ಹೆಸರಲ್ಲಿ ಅಲೋಪತಿ ಔಷಧ ಕೊಡುವ ಡಾಕ್ಟರ್ ತರಾಟೆಗೆ ತೆಗೆದುಕೊಳ್ಳ ಬೇಕಿತ್ತು.. ಅದರ ಬದಲು ಅಕ್ರಮ ಬೆಳಕಿಗೆ ತರಲು ಪ್ರಯತ್ನಿಸಿದ ಪತ್ರಕರ್ತನ ಸಹಾಯಕ್ಕೆ ಬಾರದೆ ಇದ್ದಿದ್ದು ಚೆನ್ನಾಗಿದೆ.. ಅದಕ್ಕೆ ಅಕ್ರಮ ಎಗ್ಗಿಲ್ಲದೆ ನಡೆಯಲು ಅವಕಾಶ ಆಗುತ್ತಿದೆ.
Be the first to comment