ಉತ್ತರ ಕನ್ನಡ ಜಿಲ್ಲೆ ಅರಣ್ಯವಾಸಿಗಳ ಹೋರಾಟ ; ರಾಷ್ಟ್ರಮಟ್ಟದಲ್ಲಿಯೇ ಮಾದರಿ ಹೋರಾಟ- ಕಾಗೋಡ ತಿಮ್ಮಪ್ಪ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

 

ಸಿದ್ಧಾಪುರ

CHETAN KENDULI

ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಭೂಮಿ ಹಕ್ಕಿನ ಹೋರಾಟ ರಾಷ್ಟ್ರದಲ್ಲಿಯೇ ಮಾದರಿ ಹೋರಾಟ. ಹೋರಾಟದ ಹಕ್ಕು ಸಿಗುವವರೆಗೂ ಹೋರಾಟದ ಕಿಚ್ಚು ತಗ್ಗಿಸಬಾರದು. ನಮ್ಮ ಅಧಿಕಾರ ಅವಧಿಯಲ್ಲಿ ಮೂರು ಎಕರೆ ಅರಣ್ಯ ಭೂಮಿ ಮಂಜೂರಿಗೆ ನೀಡಿದ ನಿರ್ದೇಶನದ ಸುತ್ತೋಲೆಯಂತೆ ಇಂದಿನ ಸರಕಾರ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡಿ ಭೂಮಿ ಹಕ್ಕು ನೀಡಲು ಕಾರ್ಯಪ್ರವೃತ್ತರಾಗಬೇಕೆಂದು ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ನುಡಿದರು.

ಸಾಗರ ತಾಲೂಕಿನ ಕಾಗೋಡ ತಿಮ್ಮಪ್ಪ ಅವರ ನಿವಾಸಕ್ಕೆ ಭೂಮಿ ಹಕ್ಕು ಹೋರಾಟದ ವೇದಿಕೆ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಭೂಮಿ ಹೋರಾಟ 30 ವರ್ಷದ ಸ್ಮರಣ ಸಂಚಿಕೆ ಅರ್ಪಿಸಿದ ಸಂದರ್ಭದಲ್ಲಿ ಕಾಗೋಡ ತಿಮ್ಮಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಾಮಾಜಿಕ ಕಳಕಳಿಯ ನಿರಂತರ 30 ವರ್ಷದ ಹೋರಾಟ ಮೆಚ್ಚತಕ್ಕದ್ದು ನಿರಂತರ ಹೋರಾಟದಿಂದ ಸರಕಾರಕ್ಕೆ ಮಣ್ಣಿಸಲು ಸಾಧ್ಯ ಎಂದು ಅವರು ಹೇಳುತ್ತಾ ಭೂಮಿ ಹಕ್ಕಿನಿಂದ ವಂಚಿತರಾಗುವ ಅರಣ್ಯವಾಸಿಗಳಪರ ಕಾನೂನಾತ್ಮಕ ಹೋರಾಟವು ಜರುಗಿಸುವುದು ಅನಿವಾರ್ಯ ಎಂದರು.

ಮೂರು ಎಕರೆ ಹಕ್ಕಿಗೆ ಬದ್ಧತೆ :ಮಾರ್ಚ 2015 ರ ಕರ್ನಾಟಕ ವಿದಾನ ಮಂಡಳವು ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಮೂರು ಎಕರೆ ಪ್ರದೇಶ ಬದ್ಧತೆಯನ್ನು ಪ್ರದರ್ಶಿಸಿ, ಮೂರು ಎಕರೆಕ್ಕಿಂತ ಕಡಿಮೆ ಇರುವ ಅರಣ್ಯ ಭೂಮಿಯನ್ನ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಬಾರದು ಹಾಗೂ ಎಪ್ರೀಲ್ 78 ರ ನಂತರದ ಮೂರು ಎಕರೆ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಸರಕಾರ ಹಂತದಲ್ಲಿ ಪರಿಶಿಲಿಸುವ ಸುತ್ತೋಲೆಗೆ ಇಂದಿನ ಶಾಸಕಾಂಗ ಬದ್ಧತೆ ತೋರಿಸಬೇಕೆಂದು ಕಾಗೋಡ ತಿಮ್ಮಪ್ಪ ಅವರು ಹೇಳಿದರು.

Be the first to comment

Leave a Reply

Your email address will not be published.


*