ಭೂಮಿ ಹಕ್ಕಿಗೆ ಹೊಸ ಭೂಮಿ ಹಕ್ಕು ನೀತಿ ಜಾರಿಗೆ ಆಗ್ರಹ; ರವೀಂದ್ರ ನಾಯ್ಕ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಶಿರಸಿ

ರಾಜ್ಯಾದ್ಯಂತ ಅರಣ್ಯ, ಕಂದಾಯ ಮತ್ತು ವಿವಿಧ ವರ್ಗದಲ್ಲಿ ಭೂಮಿಯಲ್ಲಿ ಅವಲಂಭಿತವಾಗಿರುವವರಿಗೆ ಹಕ್ಕನ್ನು ಕೊಡುವಲ್ಲಿ ಭೂಮಿ ಹಕ್ಕಿನ ನೀತಿ ಪ್ರಕಟಿಸಬೇಕು. ಭೂಮಿ ಹಕ್ಕಿಗಾಗಿ ರಾಜ್ಯಾದ್ಯಂತ ಭೂಮಿ ಹಿಡುವಳಿದಾರರು ಜನಾಂದೋಲನಕ್ಕೆ ಸನ್ನದ್ಧರಾಗಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಅವರು ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ವಸತಿ ಮತ್ತು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಶ್ರಯದಲ್ಲಿ, ಹಿರಿಯ ಭೂಮಿಯ ಹೋರಾಟಗಾರ ನಾಗರಾಜ ಸಿರಿವಂತೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಭೂಮಿ ಹೋರಾಟದ 41 ಸಂಘಟನೆಗಳ ಉಪಸ್ಥಿತರಿರುವ ಭೂಮಿ ಹಕ್ಕು, ಹೋರಾಟ-ಚಿಂತನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

CHETAN KENDULI

ಸಮಗ್ರವಾಗಿ ಜನಾಂದೋಲನ ರೂಪದಲ್ಲಿ ಏಕಕಾಲದಲ್ಲಿ ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಧರಣಿ ಮಾಡುವ ಮೂಲಕ ಹೋರಾಟಕ್ಕೆ ತೀವ್ರತೆ ನೀಡಬೇಕು. ವಿಧಾನ ಸಭೆ ಅಧಿವೇಶನದಲ್ಲಿ ಇಂತಹ ಸಮಸ್ಯೆಗಳ ಕುರಿತು ಚರ್ಚಿಸಿ ನಿರ್ಣಯಿಸಲು ವಿಶೇಷ ಅಧಿವೇಶನ ಕರೆಯಲು ಅವರು ಅಗ್ರಹಿಸಿದರು.60 ಲಕ್ಷ ನಿರಾಶ್ರಿತರು: ರಾಜ್ಯಾದ್ಯಂತ ಅರಣ್ಯ, ಕಂದಾಯ, ಹಾಡಿ ಬೆಟ್ಟ, ಕಾನು ಮುಂತಾದ ವಿವಿಧ ವರ್ಗದ ಭೂಮಿ ಅನಧೀಕೃತವಾಗಿ ಮಂಜೂರಿ ಇಲ್ಲದೇ 60 ಲಕ್ಷಕ್ಕಿಂತ ಮಿಕ್ಕಿ ಕುಟುಂಬಗಳು ಜೀವನ ನಡೆಸುತ್ತಿದ್ದು ಕಾನೂನಿನ ಅಡಿಯಲ್ಲಿ ಮಂಜೂರಿಗೆ ಅನರ್ಹ ಎಂದು ಘೋಷಿಸಲ್ಪಟ್ಟರೇ ಇವರೆಲ್ಲ ನಿರಾಶ್ರಿತರಾಗುವುದರಲ್ಲಿ ಸಂಶಯವಿಲ್ಲ ಎಂದು ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Be the first to comment

Leave a Reply

Your email address will not be published.


*