ಈ ಗ್ರಾಮದ ಜನರೆಲ್ಲಾ ಬಳಲುತ್ತಿದ್ದಾರೆ ಜ್ವರದಿಂದ… ಆತಂಕದಲ್ಲಿ ಜನ

ವರದಿ:ಅಂಬಿಗ ನ್ಯೂಸ್ ತಂಡ

ಜಿಲ್ಲಾ ಸುದ್ದಿಗಳು

CHETAN KENDULI

ಗದಗ:

ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾ ಆಲೂರು ಗ್ರಾಮದಲ್ಲಿ ಕೊರೊನಾ ಆತಂಕ ಬೀ.ಡು ಬಿಟ್ಟಿದೆ. ಇಲ್ಲಿ ಊರಿತತ್ವಗೆ ಊರೇ ರೋಗಗ್ರಸ್ಥವಾಗಿ ನರಳುತ್ತಿದೆ.

ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಜನ ಜ್ವರದಿಂದ ಬಳಲುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ಒಂದಿಬ್ಬರಾದರೂ ಜ್ವರದಿಂದ ಬಳಲುತ್ತಿದ್ದಾರೆ. 9 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಸದ್ಯ 700ಕ್ಕೂ ಹೆಚ್ಚು ಜನರಲ್ಲಿ ಈ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ.

ಈ ನಿಟ್ಟಿನಲ್ಲಿ ಈ ಗ್ರಾಮದ ಜನರು ಸದ್ಯ ಕೊರೊನಾ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಲವರು ಏನೂ ಆಗಲ್ಲ ಎಂಬ ಧೈರ್ಯದ ಮಾತುಗಳನ್ನು ಹೇಳುತ್ತಿದ್ದಾರೆಯಾದರೂ ಭಯ ಇಡೀ ಊರನ್ನೇ ಆವರಿಸಿ ಬಿಟ್ಟಿದೆ.

ಈಗಾಗಲೇ ಈ ನಿಗೂಢ ಜ್ವರಕ್ಕೆ ಮೂರು ದಿನಗಳ ಅಂತರದಲ್ಲಿ ಏಳು ಜನ ಬಲಿಯಾಗಿದ್ದಾರೆ.ಕೊರೊನಾ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಿಂದ ಗ್ರಾಮಕ್ಕೆ ಹಲವು ಕಾರ್ಮಿಕರು ಆಗಮಿಸಿದ್ದರು. ಅವರಿಂದಲೇ ಈ ಗ್ರಾಮದೊಳಗೆ ಕೊರೊನಾ ಹೊಕ್ಕಿತೇ ಎಂಬ ಆತಂಕ ಮನೆ ಮಾಡುತ್ತಿದೆ.

ಲಾಕ್ ಡೌನ್ ಹಾಗೂ ಜನತಾ ಕರ್ಫ್ಯೂ ಇದ್ದ ಕಾರಣ ಇಲ್ಲಿಯ ಗ್ರಾಮಸ್ಥರು ಆಸ್ಪತ್ರೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ, ದಿನದಿಂದ ದಿನಕ್ಕೆ ಮಾತ್ರ ಇಡೀ ಗ್ರಾಮ ಜ್ವರದಿಂದ ಆವರಿಸುತ್ತಿದೆ. ದಿನದಿಂದ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಗ್ರಾಮದ ಜನರು ವೈದ್ಯರಿಗೆ ಮನವಿ ಮಾಡುತ್ತಿದ್ದಾರೆ. ಕೂಡಲೇ ಬಂದು ಇಡೀ ಗ್ರಾಮವನ್ನೇ ಚೆಕ್ ಮಾಡಿ. ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ.

Be the first to comment

Leave a Reply

Your email address will not be published.


*