ಜಿಲ್ಲಾ ಸುದ್ದಿಗಳು
ಹರಿಹರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ವತಿಯಿಂದ, ಬೈಪಾಸ್ ಹೈವೆಲಿ ಓಡಾಡುವ ವಾಹನ ಚಾಲಕರಿಗೆ ಉಚಿತ ಆಹಾರ ವಿತರಿಸಲಾಯಿತು.
ಬಿಸಿಲನ್ನು ಲೆಕ್ಕಿಸದೇ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಸಿಬ್ಬಂದಿಗಳು, ಬೈಪಾಸಲ್ಲಿ ಜಿಲ್ಲೆಯಿಂದ ಜಿಲ್ಲೆಗೆ, ಹಾಗೂ ರಾಜ್ಯದಿಂದ ರಾಜ್ಯಕ್ಕೆ ಹೋಗುವ ವಾಹನಗಳ ಚಾಲಕರಿಗೆ ಅಹಾರ ಒದಗಿಸಿ ಧರ್ಮಸ್ಥಳ ಸಂಘದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ನ ಜಿಲ್ಲಾ ನಿರ್ದೇಶಕರಾದ ಜಯಂತ್ ಪೂಜಾರ್ ಮಾತನಾಡಿ ಹಸಿದಾಗ ಅನ್ನ ನೀಡುವುದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ, ಇಂತಹ ಸೇವೆಯನ್ನು ಮಾಡಲು ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರು ಸದಾ ಮುಂಚೂಣಿಯಲ್ಲಿರುವ ಮಹಾನ್ ವ್ಯಕ್ತಿ ಎಂದು ಹೇಳಿದರು.
ಯೋಜನಾ ಅಧಿಕಾರಿಯಾದ ಗಣಪತಿ ಮಾಲಂಜಿಯವರು ಮಾತನಾಡಿ ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ವಾಹನ ಚಾಲಕರಿಗೆ ಊಟದ ವ್ಯವಸ್ಥೆ ಸೂಕ್ತವಾಗಿದೆ.
ಲಾಕ್ ಡೌನ್ ಆಗಿರುವ ಕಾರಣ ಊಟ ಸಿಗುವುದು ತುಂಬಾ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪರಮಪೂಜ್ಯರ ಆಶಿರ್ವಾದದೊಂದಿಗೆ ಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ ಎಂದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
Be the first to comment