ಮುಧೋಳ್ ನಗರ ಸಭೆ ಅಧ್ಯಕ್ಷ ಶ್ರೀ ಸಿದ್ದನಾಥ (ಸಂಜು) ದಾದಾಸಾಬೇಬ‌ ಮಾನೆ ಅವರ ನಿಧನಕ್ಕೆ ಡಿಸಿಎಂ ಸಂತಾಪ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:(ಮುಧೋಳ)

ನಗರಸಭೆ ಅಧ್ಯಕ್ಷರಾದ ಶ್ರೀ ಸಿದ್ದನಾಥ(ಸಂಜು) ದಾದಾಸಾಹೇಬ ಮಾನೆ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಶ್ರೀ ಸಿದ್ದನಾಥ (ಸಂಜು) ದಾದಾ ಸಾಹೇಬ ಮಾನೆ ಅವರು ಯುವ ಹಾಗೂ ಕ್ರೀಯಶೀಲ ಜನಪ್ರತಿನಿಧಿಯಾಗಿದ್ದರು. ಅತ್ಯುತ್ತಮ ಕುಸ್ತಿಪಟುವಾಗಿದ್ದು, ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಗಳಿಗೆ ಬಾಜನರಾಗಿದ್ದಾರೆ. ಯುವಕರನ್ನು ಕ್ರೀಟಾ ಚಟುವಟಿಗಳಿಗೆ ಉತ್ತೇಜಿಸುತ್ತಿದ್ದರು. ಜನರ ಆಶಯಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತಿದ್ದರು. ಅವರ ನಿಧನದಿಂದ ಭತಿಸಲಾರದ ನಷ್ಟ ಉಂಟಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬವರ್ಗದವರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದ್ದಾರೆ.

Be the first to comment

Leave a Reply

Your email address will not be published.


*