ದಲಿತ ಸಂಘಟನೆಗಳು ಜಾತ್ಯಾತೀತವಾಗಿ ಹೋರಾಟ ಮಾಡಿದ್ದು ಇತಿಹಾಸದ ಪುಟದಲ್ಲಿರುವುದನ್ನು ಅರಿತುಕೊಳ್ಳುವು ಅಗತ್ಯವಿದೆ…!!! ಪಿಎಸ್ಐ ಬಿರಾದಾರ ಅಮಾನತ್ತಿಗೆ ಆಗ್ರಹ…!!!

ವರದಿ: ಚೇತನ ಕೆಂದೂಳಿ, ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ತಾಲೂಕಿನ ಹುನಕುಂಟಿ ಹಾಗೂ ಬಿಜ್ಜೂರ ಗ್ರಾಮದ ದಲಿತರ ಮೇಲೆ ಜಾತಿ ನಿಂದನೆ ಮಾಡಿದವರಿಂದಲೇ ದಲಿತರ ವಿರುದ್ಧವಾಗಿ ಅಪರಾಧದ ಸುಳ್ಳು ಪ್ರಕರಣ ದಾಖಲಿಸಿದ್ದ ಪಿಎಸ್‌ಐ ಎಂ.ಬಿ.ಬಿರಾದಾರ ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿಟ್ಟು ಸುಳ್ಳು ಪ್ರಕರಣಗಳ ಬಗ್ಗೆ ಉನ್ನತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಗುರುವಾರ ದಲಿತ ಹಾಗೂ ಪ್ರಗತಿಪರ ಸಂಗಟನೆ ಪದಾಧಿಕಾರಿಗಳು ಪ್ರತಿಭಟನಾ ರ್‍ಯಾಲಿ ಮಾಡುವ ಮೂಲಕ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕೇವಲ ಸ್ವಜಾತಿ ಎಂಬ ಕಾರಣಕ್ಕಾಗಿ ಪಿಎಸ್‌ಐ ಎಂ.ಬಿ.ಬಿರಾದಾರ ಅವರ ವರ್ಗಾವಣೆಯನ್ನು ಖಂಡನೆ ಮಾಡಿ ದಲಿತ ಸಂಘಟನೆಯ ಹೋರಾಟದ ವಿರುದ್ಧ ಮಾತನಾಡಿದ ರವಿ ಬಿರಾದಾರ ಎಂಬ ಯುವಕ ಮೊದಲು ತನ್ನ ಮೂಲವನ್ನು ತಿಳಿದುಕೊಳ್ಳಲಿ. ಅದಲ್ಲದೇ ಆರ್.ಎಸ್.ಎಸ್. ಎಂದು ಹೇಳಿಕೊಳ್ಳುವ ಯುವಕ ರವಿ ಮೊದಲು ಆರ್.ಎಸ್.ಎಸ್. ಸಿದ್ಧಾಂತಗಳನ್ನು ಅರಿತುಕೊಳ್ಳಲಿ. ದಲಿತರು ಜಾತ್ಯಾತೀತವಾಗಿ ಹೋರಾಟ ಮಾಡಿದ್ದು ಇತಿಹಾಸದ ಪುಟದಲ್ಲಿದೆ. ಮೊದಲು ಇದನ್ನು ತಿಳಿದುಕೊಳ್ಳಲಿ. ಅಲ್ಲದೇ ನಾವೂ ಕೂಡಲಾ ಯುವಕ ರವಿ ಹೇಳಿದಂತೆ ಎಂ.ಬಿ.ಬಿರಾದಾರ ಅವರ ವರ್ಗಾವಣೆಯನ್ನು ಖಂಡಿಸುತ್ತೇವೆ. ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿಟ್ಟು ಉನ್ನತ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಅವರು ಯಾವುದೇ ಅಪರಾಧ ಮಾಡಿಲ್ಲ ಎಂದರೆ ಇಲಾಖೆ ಮೇಲಾಧಿಕಾರಿಗಳು ಅವರ ಪರವಾದ ಕ್ರಮ ಕೈಗೊಳ್ಳಲಿ. ಅವರ ಅಪರಾಧ ಸಾಭಿತಾದರೆ ಅವರನ್ನು ಗಡಿಪಾರಿಗೆ ಆಗ್ರಹಿಸುತ್ತೇವೆ.
-ಹರೀಶ ನಾಟೇಕಾರ, ದಲಿತ ಮುಖಂಡ, ಮುದ್ದೇಬಿಹಾಳ.



ಕಳೆದ ಎರಡು ತಿಂಗಳಿಂದ ಪಿಎಸ್‌ಐ ಎಂ.ಬಿ.ಬಿರಾದಾರ ಅವರ ವಿರುದ್ಧ ದಲಿತ ಸಂಘಟನೆಗಳ ಹೋರಾಟ ನಡೆಯುತ್ತಾ ಬಂದಿದ್ದು ಇತ್ತಿಚಿಗಷ್ಟೇ ಮುದ್ದೇಬಿಹಾಳ ತಾಲೂಕಿನ ಪ್ರವಾಹ ಬೀತಿ ವಿಕ್ಷಿಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರ ಎದುರಿಗೆ ಎಲ್ಲ ದಲಿತರು ತಮ್ಮ ಅಳಲನ್ನು ತೋಡಿಕೊಂಡ ಕೆಲವೇ ಗಂಟೆಗಳಲ್ಲಿ ಪಿಎಸ್‌ಐ ಎಂ.ಬಿ.ಬಿರಾದಾರ ಅವರನ್ನು ದಿಡೀರನೆ ತಾತ್ಕಾಲಿಕ ವರ್ಗಾವಣೆಯನ್ನು ಮಾಡಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದರು. ನಂತರ ಪಿಎಸ್‌ಐ ಪರವಾಗಿ ಬುಧವಾರ ದಲಿತ ಸಂಘಟನೆಗಳು ಮಾಡಿದ ಹೋರಾಟದ ವಿರುದ್ಧವಾಗಿ ಕೆಲವರು ಪ್ರತಿಭಟಿಸಿ ದಲಿತ ಸೇರಿದಂತೆ ಪೊಲೀಸ ಹಿರಿಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪಿಎಸ್‌ಐ ಅವರ ತಾತ್ಕಾಲಿಕ ವರ್ಗಾವಣೆಯನ್ನು ರದ್ದುಪಡಿಸಿ ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ದಲಿತ ಸಂಘಟನೆಗಳು ಗುರುವಾರ ಮತ್ತೆ ಹೋರಾಟಕ್ಕಿಳಿದು ಪಿಎಸ್‌ಐ ಅವರನ್ನು ಕೂಡಲೇ ಅಮಾನತ್ತಿನಲ್ಲಿಟ್ಟು ಅವರು ಮಾಡಿದ ತಪ್ಪಿನ ವಿರುದ್ಧ ಉನ್ನತ ತನಿಖೆಗೆ ಆಗ್ರಹಿಸಿ ಪ್ರತಿಭಟನಾ ರ್‍ಯಾಲಿ ಮಾಡಿದರು.

ಗಡಿಪಾರಿಗೆ ಆಗ್ರಹ:
ಪೊಲೀಸ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳಿದ್ದಾರೆ. ಆದರೆ ಪಿಎಸ್‌ಐ ಎಂ.ಬಿ.ಬಿರಾದಾರ ಅವರಂತಹ ಬ್ರಷ್ಠ ಅಧಿಕಾರಿಗಳಿಂದ ಎಲ್ಲರ ಹೆಸರಿಗೂ ಕಳಂಕ ತಂದಂತಾಗುತ್ತಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ದಲಿತ ಸಂಗಟನೆಗಳಿಂದ ಪೊಲೀಸ ಇಲಾಖೆಯ ವಿರುದ್ಧ ಹೋರಾಟಕ್ಕೆ ಇಳಿದ ಇತಿಹಾಸವಿಲ್ಲ. ಆದರೆ ಎಂ.ಬಿ.ಬಿರಾದಾರ ಅವರ ದುರಾಢಳಿತಕ್ಕೆ ನೊಂದು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿತ್ತು. ಎಂ.ಬಿ.ಬಿರಾದಾರ ಅವರು ಮುದ್ದೇಬಿಹಾಳಕ್ಕೆ ಪಿಎಸ್‌ಐ ಆಗಿ ಬಂದ ಕ್ಷಣದಿಂದಲೂ ತಾಲೂಕಿನಲ್ಲಿ ಅನೇಕ ಅಕ್ರಮಗಳಿಗೆ ಕಡಿವಾಣ ಇಲ್ಲದಂತಾಗಿದೆ. ಇಂತಹ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ಗಡಿಪಾರು ಮಾಡಬೇಕು ಎಂದು ದಲಿತರು ಹಾಗೂ ಪ್ರಗತಿಪರ ಸಂಘಟನೆಗಳು ಆಗ್ರಹಿಸಿದವು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಹರೀಶ ನಾಟೇಕಾರ, ಡಿ.ಬಿ.ಮೂದೂರ, ಸಿ.ಜಿ.ವಿಜಯಕುರ, ಪ್ರಕಾಶ ಚಲವಾದಿ, ಮಲ್ಲು ಜಾಲಗೇರಿ, ಎಚ್.ವಾಯ್.ಚಲವಾದಿ, ಶಂಕರ ಚಲವಾದಿ, ಮಂಜುನಾಥ ಕಟ್ಟಿಮನಿ, ದೇವರಾಜ ಹಂಗರಗಿ, ರಾಮಣ್ಣ ಕಳ್ಳಿದೇವನಹಳ್ಳಿ, ಪಿ.ಎಂ.ಕಾಳೆ ಸೇರಿದಂತೆ ನೂರಕ್ಕೂ ಹೆಚ್ಚು ದಲಿತ ಹಾಗೂ ದಲಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

 

Be the first to comment

Leave a Reply

Your email address will not be published.


*