ಅರಣ್ಯ ಭೂಮಿ ಹೋರಾಟಗಾರ ವೇದಿಕೆಯಿಂದ ವವಿಶೇಷವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ವರದಿ: ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು

ಶಿರಸಿ:

CHETAN KENDULI

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ 75 ನೇ ಸ್ವಾತಂತ್ರೋತ್ಸವವನ್ನು ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ..? ಎಂಬ ಘೋಷಣೆಯೊಂದಿಗೆ ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಆ.15ರ ಬೆಳಿಗ್ಗೆ 8:30 ಕ್ಕೆ ಶ್ರದ್ಧೆ ಮತ್ತು ಗೌರವ ಪೂರ್ವಕವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುವುದೆಂದು ವೇದಿಕೆ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭೂಮಿ ಹಕ್ಕನ್ನು ಸಂವಿಧಾನಾತ್ಮಕವಾದ ಹಕ್ಕು ಎಂದು ಪ್ರತಿಪಾದಿಸುವ ಹಾಗೂ ಅರಣ್ಯವಾಸಿಗಳ ಸಮಸ್ಯೆಗಳನ್ನು ಸ್ವಾತಂತ್ರ್ಯೋತ್ಸವದಂದು ಸರಕಾರದ ಗಮನ ಸೆಳೆಯಲಾಗುವುದೆಂದು ಅವರು ಹೇಳಿದರು.

ಆಸಕ್ತರು ವಿಶಿಷ್ಟ ರೀತಿಯಲ್ಲಿ ಆಚರಿಸುವ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*