ರಾಜ್ಯ ಸುದ್ದಿಗಳು
ಭಟ್ಕಳ
ಭಟ್ಕಳದ ಮುಂಡಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಕಳೆದ ಹಲವಾರು ವರುಷಗಳಿಂದ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಪ್ಪ ನಾಯ್ಕ ಮತ್ತು ಇತರರು ಸೇರಿ ಸರಿಸುಮಾರು 60 ಲಕ್ಷ ರೂಪಾಯಿ ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಿರುತ್ತಾರೆ, ಒಂದೊಮ್ಮೆ ಕೃಷ್ಣಪ್ಪ ನಾಯ್ಕ ತಾನು ಮುಂಡಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಲಿಲ್ಲ , ತಾನು ಪ್ರಾಮಾಣಿಕ ಎಂದು ಜನರಿಗೆ ಸಾಬೀತು ಪಡಿಸುವುದಾದರೆ ಮಾರ್ಚ್ 1 ಶಿವರಾತ್ರಿ ದಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಬಂದು ನನ್ನ ಮತ್ತು ವಿರೇಂದ್ರ ಹೆಗಡೆಯವರ ಸಮ್ಮುಖದಲ್ಲಿ ಕಾಯಿ ಮುಟ್ಟಿ ಆಣೆ ಪ್ರಮಾಣ ಮಾಡಲಿ ಎಂದು ಸಾಮಾಜಿಕ ಹೋರಾಟಗಾರ ರಾಜು ನಾಯ್ಕ ಮುಂಡಳ್ಳಿ ಸವಾಲು ಹಾಕಿದರು. ಧರ್ಮಸ್ಥಳಕ್ಕೆ ಹೋಗಿ ಬರುವ ಸಂಪೂರ್ಣ ಖರ್ಚು ತಾವೇ ಬರಿಸುವುದಾಗಿ ತಿಳಿಸಿದ್ದಾರೆ. ಈ ಸವಾಲನ್ನು ಮುಂಡಳ್ಳಿ ನ್ಯಾಯ ಬೆಲೆ ಅಂಗಡಿ ಗುಮಾಸ್ತ ಕೃಷ್ಣಪ್ಪ ನಾಯ್ಕ ಸ್ವೀಕರಿಸಿ ಶಿವರಾತ್ರಿ ದಿನದಂದು ಪ್ರಮಾಣ ಮಾಡಿ ತಾನು ಪ್ರಾಮಾಣಿಕ ಎಂದು ಜನತೆಗೆ ಸಾಬೀತು ಪಡಿಸುತ್ತಾರೋ ಕಾದುನೋಡಬೇಕು.
ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಗುಮಾಸ್ತರಾದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ನ ಅವ್ಯವಹಾರ ಮತ್ತು ಭ್ರಷ್ಟಾಚಾರ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಂಡಳ್ಳಿ ಪಂಚಾಯತ್ ಸದಸ್ಯರಾದ ರಾಜು ಎಲ್ ನಾಯ್ಕ ಪಂಚಾಯತ್ ವತಿಯಿಂದ ತಹಶೀಲ್ದಾರರು, ಫೂಡ್ ಡಿ.ಡಿ , ಸಹಾಯಕ ಆಯುಕ್ತರು, ಜಿಲ್ಲಾ ಯುವಜನ ಸೇವಾ ಅಧಿಕಾರಿಗಳಿಗೆ ತನಿಖೆ ಮಾಡಿ ಕ್ರಮ ಕೈ ಗೊಳ್ಳುವಂತೆ ಮನವಿ ನೀಡಿ 5 ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ , ಅಧಿಕಾರಿಗಳ ಈ ನಡೆ ನೋಡಿದರೆ ಅಧಿಕಾರಿಗಳು ಮುಂಡಳ್ಳಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ಮೂಡುತದೆ ಎಂದು ಆರೋಪಿಸಿದ್ದಾರೆ. ಎಲ್ಲಾ ಅಧಿಕಾರಿಗಳು ರು 60 ಲಕ್ಷ ಭ್ರಷ್ಟಾಚಾರ ನಡೆಸಿರುವ ಭ್ರಷ್ಟಾಚಾರಿಗಳ ರಕ್ಷಣೆ ಮಾಡಿ ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ತಿಳಿಸಿದ್ದಾರೆ.
ಭಟ್ಕಳದ ಮುಂಡಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಯುವಕ ಮಂಡಲ್ ಮುಂಡಲಿ ಆಗಸ್ಟ್ 19 ,2011 ರಿಂದ ಯುವಕ ಮಂಡಲ ಮುಂಡಲಿ ಯ ಮಾನ್ಯತೆ ನವೀಕರಣಗೊಂಡಿಲ್ಲ , 2016 ರಿಂದ ಯಾವುದೇ ಆಡಿಟ್ ಆಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈಗಾಗಲೇ ಈ ಬಗ್ಗೆ ಫುಡ್ ಡಿ.ಡಿ, ಭಟ್ಕಳ್ ಸಹಾಯಕ ಆಯುಕ್ತರು , ಜಿಲ್ಲಾ ಯುವಜನ ಸೇವಾ ಕ್ರೀಡಾ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ತಿಳಿಸಿದ್ದಾರೆ.
Be the first to comment