ನಾಮ ಫಲಕ ಕಳ್ಳರ ತನಿಖೆಗೆ ಪ್ರಗತಿಪರ ಒಕ್ಕೂಟ ದಂಡಾಧಿಕಾರಿಗೆ ಆಗ್ರಹ 

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು

ಮಸ್ಕಿ

ಕರ್ನಾಟಕರಾಜ್ಯರೈತಸಂಘ ಹಾಗೂ ಹಸಿರು ಸೇನೆ ಹಾಗೂ ಪ್ರಗತಿಪರಒಕ್ಕೂಟದ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಾರ್ಯಾಲಯದ ವರೆಗೆ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಘೋಷಣೆ ಕೂಗುತ್ತಾ ಮೆರವಣಿಗೆ ಜಾಥಾ ಮೂಲಕ ಬಂದು ತಾಲೂಕ ದಂಡಾಧಿಕಾರಿಗೆ ಮನವಿ ಮಾಡಲಾಯಿತು.

CHETAN KENDULI

ಮಸ್ಕಿಯ ಮುದುಗಲ್ ಕ್ರಾಸ್ ಬಳಿಯಲ್ಲಿನ ಐತಿಹಾಸಿಕ ಅಶೋಕ ಶಿಲಾಶಾಸನದ ಸೂಚನಾ ನಾಮ ಫಲಕ ಕಾಣೆಯಾಗಿದ್ದು, ದಿನಾಂಕ 27/01/2022 ರಂದು ಮಸ್ಕಿ ಪಟ್ಟಣದ ಮುದುಗಲ್ ಕ್ರಾಸ್ ಹತ್ತಿರ ಪುರಾತತ್ವ ಇಲಾಖೆಯ ವತಿಯಿಂದ ಅಳವಡಿಸಿದ್ದ ದೇವಾನಾಂ ಪಿಯಾ ಸಾಮ್ರಾಟ ಅಶೋಕನ ಇತಿಹಾಸವನ್ನು ಸೂಚಿಸುವ ನಾಮಫಲಕವನ್ನು ರಾತ್ರೋ ರಾತ್ರಿ ನಾಪತ್ತೆ ಯಾಗಿದ್ದು, ಕಳ್ಳತನವಾಗಿದೆ. ಈ ಕೃತ್ಯ ವೆಸಗಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನೂ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕರಾಜ್ಯರೈತಸಂಘ ಹಾಗೂ ಹಸಿರು ಸೇನೆ ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ತಾಲೂಕಾ ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ತಹಶೀಲ್ದಾರ ಕವಿತಾ.ಆರ್ ನಿಮ್ಮ ಮನವಿಯ ಕರಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದರು.

 

ಇದೇ ಸಂದರ್ಭದಲ್ಲಿತಾಯಪ್ಪ ರೈತ ಸಂಘದಅಧ್ಯಕ್ಷರು,ಶಿವಕುಮಾರ, ಎಸ್. ನಜೀರ್ ತಾಲೂಕಾ ವರದಿಗಾರರು ಮಸ್ಕಿ, ತಿಮ್ಮಣ್ಣ ಭೋವಿ, ಆಲಮಪ್ಪ ಹಿರೇ ಕಡಬೂರು, ಅಶೋಕ ಮುರಾರಿ ಮಸ್ಕಿ, ಮಹಮ್ಮದ್ ಶೆಡ್ಮಿ, ಮಲ್ಲಪ್ಪ ಘೋನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*