ಜಿಲ್ಲಾ ಸುದ್ದಿಗಳು
ಯಲ್ಲಾಪುರ
ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಕಾಲೇಜುಗಳು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡು ಇಂತಹ ಸಮಾಜ ಕಾರ್ಯಗಳು ಗ್ರಾಮೀಣ ಮಹಿಳೆಯರಿಗೆಹಾಗೂಜನತೆಗೆಮಾರ್ಗದರ್ಶನವಾಗಿವೆ. ಕಿರವತ್ತಿ ಪಂಚಾಯಿತಿ ವತಿಯಿಂದ ಈ ಶಿಬಿರಕ್ಕೆ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡುವುದಾಗಿ ಕಿರವತ್ತಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ವರದಾನಿ ಭರವಸೆ ನೀಡಿದರು.ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದಿಂದ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ 15 ದಿನಗಳ ಬೇಸಿಗೆ ಶಿಬಿರವನ್ನು ಸೋಮವಾರ ಸಂಜೆ ಕಿರವತ್ತಿ ಗ್ರಾ.ಪಂ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ರೆಡ್ಡಿ ಮಾತನಾಡಿ, ಕಿರವತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಡು ಬಡವರು, ಅಶಿಕ್ಷಿತ ಮಹಿಳೆಯರಿಗೆ ಹಾಗೂ ಇತರೆ ಜನರಿಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಶಿಬಿರ ಸಾಕಷ್ಟು ಮಾಹಿತಿಯನ್ನು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಸುನಿಲ್ ಕಾಂಬಳೆ, ರಸೂಲ್ ಮುಜಾವರ್ ವೇದಿಕೆಯಲ್ಲಿದ್ದರು, ಸಾರ್ವಜನಿಕರು, ಮತ್ತು ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.ಶಿಬಿರಾರ್ಥಿ ಹಾಗೂ ಶಿಬಿರದ ಸಂಘಟಕ ಸಂಜಯ್ ಚೌಹಾನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಮಹಿಳೆಯರಿಗೆ ಸಹಾಯವಾಗುವ ಅವರ ಆರೋಗ್ಯದ ಕುರಿತು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಅವರ ನೇತೃತ್ವದಲ್ಲಿ ಸರ್ವೈಕಲ ಕ್ಯಾನ್ಸರ್ ಚೆಕಪ್ ಕ್ಯಾಂಪ್ ನಡೆಸಲು ಪಂಚಾಯತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಅನುಮತಿ ಪಡೆದರು. ಶಾಂತಾರಾಮ ಭಾಗ್ಬತಕರ ನಿರೂಪಿಸಿದರು. ಪಂಚಾಯತಿ ಸಿಬ್ಬಂದಿ ವೆಂಕಟೇಶ ನಾಯ್ಕ ವಂದಿಸಿದರು.
Be the first to comment