ಹೊನ್ನಾವರ:
ಸಹಪಾಠಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ.
ಕಲ್ಪನಾ ಹೆಗಡೆ ಎಂಬ ಶಿಕ್ಷಕಿ ಹಲ್ಲೆ ನಡೆಸಿದವರು ಎಂದು ತಿಳಿದು ಬಂದಿದೆ. ಇಲ್ಲಿನ ಹೊನ್ನಾವರ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. 6ನೇ ತರಗತಿಯ ವಿದ್ಯಾರ್ಥಿ ತನ್ನ ಸಹಪಾಠಿಗೆ ಲವ್ ಲೆಟರ್ ನೀಡಿದ್ದು, ವಿದ್ಯಾರ್ಥಿಯ ವರ್ತನೆಯಿಂದ ಕೋಪಗೊಂಡ ಶಿಕ್ಷಕಿ ಥಳಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿಯ ನಡೆಯನ್ನು ಪ್ರಶ್ನಿಸಿದ ಪೋಷಕರು ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕಿ ಕ್ಷಮೆಯಾಚಿಸಿದಾರೆ ಎನ್ನಲಾಗಿದೆ.ಮೇಲಾಧಿಕಾರಿಗಳು ಶಿಕ್ಷಕಿ ವಿರುದ್ಧ ಕ್ರಮ ಕೈಗೋಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Be the first to comment