ರಾಜ್ಯ ಸುದ್ದಿಗಳು
ದೇವನಹಳ್ಳಿ
ಶಾಲೆ, ಕಾಲೇಜು ಹಂತದಲ್ಲಿ ಮಕ್ಕಳಿಗೆ ದೇಶ ಪ್ರೇಮವನ್ನು ಹುಟ್ಟುಹಾಕಬೇಕು ಎಂದು ಜೇಸಿಐ ಚಪ್ಪರಕಲ್ಲು ಚಂದನ ಘಟಕದ ಅಧ್ಯಕ್ಷ ಜೇಸಿ ನೆರಗನಹಳ್ಳಿ ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ನಲ್ಲಿರುವ ಶ್ರೀನಾರಾಯಣ ಪಿಯು ಕಾಲೇಜು ಆವರಣದಲ್ಲಿ ಕಾಲೇಜು ಮತ್ತು ಜೇಸಿಐ ಚಪ್ಪರಕಲ್ಲು ಚಂದನ ಘಟಕ ವತಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ತ್ರಿವರ್ಣ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುವುದನ್ನು ಅರಿಯಬೇಕು. ಪ್ರತಿಯೊಬ್ಬ ಯುವಕ, ಯುವತಿಯರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳಬೇಕು. ಸಂವಿಧಾನ ರಚನೆ ಸಂದರ್ಭದಲ್ಲಿನ ಚರ್ಚೆಗಳು ಮತ್ತು ಏನೆಲ್ಲಾ ಕ್ರಮಗಳನ್ನು ಅನುಸರಿಸಿದ್ದಾರೆ ಎಂಬುವುದನ್ನು ವಿಷಯ ತಿಳಿದಿರುವವರಿಂದ ಸಮಗ್ರ ಮಾಹಿತಿ ಪಡೆದುಕೊಳ್ಳುವಂತಾಗಬೇಕು. ಗಣರಾಜ್ಯೋತ್ಸವ ದಿನಾಚರಣೆಯನ್ನು ಭಾರತ ದೇಶದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಗಣರಾಜ್ಯೋತ್ಸವ ದಿನದ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಈ ವೇಳೆಯಲ್ಲಿ ಜೇಸಿಐ ಚಪ್ಪರಕಲ್ಲು ಚಂದನ ಘಟಕದ ಉಪಾಧ್ಯಕ್ಷ ಶಿವಾಜಿಗೌಡ, ಶ್ರೀ ನಾರಾಯಣಪಿಯು ಕಾಲೇಜು ಅಧ್ಯಕ್ಷ ಶ್ರೀನಿವಾಸ್, ಪ್ರಾಂಶುಪಾಲ ಪ್ರಶಾಂತ್, ಜೇಸಿಐ ಕಾರ್ಯದರ್ಶಿ ಅಂಬರೀಶ್, ಯೋಜನಾ ನಿರ್ದೇಶಕರಾದ ಎಂ.ಆರ್.ಮುನೇಗೌಡ, ರುದ್ರೇಶ್.ಕೆ, ಹನುಮೇಗೌಡ, ಮಧುಸುಧನ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಇದ್ದರು.
Be the first to comment