ಜಿಲ್ಲಾ ಸುದ್ದಿಗಳು
ಹೊನ್ನಾವರ
ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕದ ನೇತ್ರತ್ವದಲ್ಲಿ, ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಹೆಲ್ತ್ ಸರ್ವಿಸಸ್ ಸೊಸೈಟಿ ಕುಮಟಾ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ತಾಲೂಕಿನ ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಗೌತಮಿ ಎಚ್ ಆರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಮನುಷ್ಯನ ಜೀವಕ್ಕೆ ರಕ್ತ ಬಹಳ ಮುಖ್ಯವಾದದು. ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದ ಕೋರತೆ ಉಂಟಾಗಿ ಸಮಸ್ಯೆಯಾಗಲಿದರು. ಸಂಘಟನೆಯವರು ಎರಡನೆಯ ಬಾರಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂತಹ ಶಿಬಿರ ಏರ್ಪಡಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮಂಗಲದಾಸ ನಾಯ್ಕ ಮಾತನಾಡಿ ನಮ್ಮ ಸಂಘಟನೆಯು ಬಳ್ಕೂರ ರಕ್ತದಾನದ ಗ್ರಾಮವಾಗಿ ಪರಿವರ್ತನೆ ಮಾಡುವ ರೀತಿಯಲ್ಲಿ ಶಿಬಿರ ನಡೆಸಲಾಗುತ್ತಿದೆ. ಎಲ್ಲಾ ದಾನಕಿಂತ ಶ್ರೇಷ್ಠ ದಾನ ರಕ್ತದಾನವಾಗಿದೆ. ಮನುಷ್ಯ ಯಾವುದೆ ಅಂಗಾಗಗಳು ಇಲ್ಲದೆ ಬದುಕಬಹುದು ಆದರೆ. ಮನುಷ್ಯ ರಕ್ತ ಇಲ್ಲದೆ ಒಂದು ಕ್ಷಣ ಬದುಕಿರಲು ಸಾಧ್ಯವಿಲ್ಲಾ. ಎಲ್ಲಾ ದಾನಕಿಂತ ಶ್ರೇಷ್ಠದಾನ ರಕ್ತದಾನ. ಇಂತಹ ಕಾರ್ಯಕ್ರಮ ಮಾದರಿಯಾಗಿದೆ ಎಂದರು.ಈ ವೇಳೆ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಹೆಲ್ತ್ ಸರ್ವಿಸಸ್ ಸೊಸೈಟಿ ಕುಮಟಾ ಇದರ ಡಾ ನಾರಾಯಣ ಮೂಡಲಗಿರಿ, ಸಂಘಟನೆಯ ಬಳ್ಕೂರ ಘಟಕದ ಅಧ್ಯಕ್ಷ ದೇವೆಂದ್ರ ನಾಯ್ಕ, ಸಂಘದ ಪದಾದಿಕಾರಿಗಳು ಸದಸ್ಯರು ಸಿಬ್ಬಂದಿಗಳು ಹಾಜರಿದ್ದರು.
Be the first to comment