ಜಿಲ್ಲಾ ಸುದ್ದಿಗಳು
ಭಟ್ಕಳ
ಸ್ವತಹ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಭಟ್ಕಳ ನಗರದಲ್ಲಿ ಸಂಚರಿಸಿ ಮಾಸ್ಕ್ ಹಾಕದೇ ವ್ಯಾಪಾರ ಮಾಡುವ ಅಂಗಡಿಕಾರರಿಗೆ ಹಾಗೂ ಅಂಗಡಿಗಲ್ಲಿ ವ್ಯಾಪಾರ ಮಾಡುವ ಗಿರಾಕಿಗಳಿಗೆ ಬಿಸಿ ಮುಟ್ಟಿಸಿದರು.ಬೆಳಿಗ್ಗೆ ಮುಖ್ಯ ರಸ್ತೆಯಲ್ಲಿ ಹೊರಟ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ರವಿಚಂದ್ರ, ನಗರ ಠಾಣೆಯ ಇನ್ಸಪೆಕ್ಟರ್ ಪಿ.ಎಂ. ದಿವಾಕರ ಹಾಗೂ ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಎಸ್. ಎನ್., ಸಿಬ್ಬಂದಿಗಳು ಪ್ರತಿ ಅಂಗಡಿಗಳನ್ನು ಪರಿಶೀಲಿಸಿ ಅಂಗಡಿಕಾರರೇ ಮಾಸ್ಕ ಹಾಕದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಲ್ಲಿ 500 ರೂಪಾಯಿ ಹಾಗೂ ಗಿರಾಕಿಗಳು ಮಾಸ್ಕ ಹಾಕದೇ ಇದ್ದಲ್ಲಿ 100 ರೂಪಾಯಿ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಕೇಸು ಹೆಚ್ಚುತ್ತಲೇ ಇದ್ದು, ತಾಲೂಕಿನಲ್ಲಿಯೂ ಸಹ ಕೋವಿಡ್ ಪೀಡಿತರ ಸಂಖ್ಯೆ ಏರುತ್ತಿದೆ. ಜನತೆಗೆ ಮಾಸ್ಕ ಹಾಕಿ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರು ಸರಕಾರದ ಆದೇಶವನ್ನು ನಿರ್ಲಕ್ಷ ಮಾಡುತ್ತಾ ಬಂದಿದ್ದು ಇದು ಮಾರುಕಟ್ಟೆಯಲ್ಲಿ ಕೂಡಾ ಹೊರತಾಗಿಲ್ಲ. ಜನತೆಗೆ ಕಾನೂನಿನ ಅರಿವು ಮೂಡಿಸುವುದಕ್ಕೆ ಹಾಗೂ ಕೋವಿಡ್ ನಿಯಮ ಪಾಲಿಸುವಂತೆ ತಿಳಿಸುವುದಕ್ಕೆ ನಗರದ ಮಾರುಕಟ್ಟೆಯಲ್ಲಿ ಚೆಕಿಂಗ್ ಮಾಡುತ್ತಿದ್ದೇವೆ ಎಂದರು.
ಅಂಗಡಿ ಮಾಲೀಕನ ಗದ್ದಲ:ಮಾರಿಕಟ್ಟೆ ಸಮೀಪ ಇರುವ ಟೈಲರ್ ಅಂಗಡಿಯೊAದರಲ್ಲಿ ಮಾಲೀಕನೇ ಮಾಸ್ಕ್ ಹಾಕದೇ ಇರುವುದನ್ನು ಗಮನಿಸಿದ ಅಧಿಕಾರಿಗಳು ಆತನಿಗೆ 500 ರೂಪಾಯಿ ದಂಡ ವಿಧಿಸಲು ಹೇಳಿದರು. ಇದರಿಂದ ಕೋಪಗೊಂಡ ಆತ ನಾವು ದಂಡ ಕೊಡಲು ಸಿದ್ಧರಿದ್ದೇವೆ ಆದರೆ ನೀವು ದಿನಾ ಬರುತ್ತೀರಾ, ಯಾವಾಗಲೋ ಒಮ್ಮೆ ಬಂದು ದಂಡ ಹಾಕಿದರೆ ನಿಮ್ಮ ಉದ್ದೇಶ ಈಡೇರುತ್ತದೆಯೇ ಎಂದು ವಾಗ್ವಾದಕ್ಕಿಳಿದ. ಆತನಿಗೆ ಬುದ್ಧಿ ಹೇಳಿದ ಅಧಿಕಾರಿಗಳು ಮುಂದೆ ತೆರಳಿದರು.
Be the first to comment