ಇದು ನನ್ನ ಗೆಲುವಲ್ಲ ನಿಷ್ಠಾವಂತ ಮತದಾರರ ಗೆಲುವು

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ತಿಪ್ಪೂರು ಮತ್ತು ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು ದರ್ಗಜೋಗಹಳ್ಳಿ ಗ್ರಾಮ ಪಂಚಾಯಿತಿಯ ಸ್ವತಂತ್ರ ಅಭ್ಯರ್ಥಿಯಾದ ಏನ್ ಸುರೇಶ್ ಕುಮಾರ್ 345 ಮತಗಳನ್ನು ಪಡೆಯುವುದರ ಮೂಲಕ ಜಯಭೇರಿ ಬಾರಿಸಿದ್ದಾರೆ

CHETAN KENDULI

ಇಂದು ನೂತನ ಸದಸ್ಯರಾದ ಸುರೇಶ್ ಕುಮಾರ್ ರವರನ್ನು ಗ್ರಾಮಸ್ಥರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಗ್ರಾಮದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಮತವನ್ನು ನೀಡಿದ್ದಾರೆ ಅವರಿಗೆ ಎಂದಿಗೂ ಮೋಸವಾಗದಂತೆ ನೋಡಿಕೊಳ್ಳುತ್ತೇನೆ ಮತ್ತು ಗ್ರಾಮ ಪಂಚಾಯತಿಯ ವತಿಯಿಂದ ದೊರೆಯುವ ಎಲ್ಲಾ ರೀತಿಯ ಸೌಲಭ್ಯ ಹಾಗೂ ಅನುಕೂಲಗಳನ್ನು ಪ್ರತಿ ಮತದಾರರಿಗೂ ಸರಿಯಾದ ರೀತಿಯಲ್ಲಿ ತಲುಪಿಸುವ ಕಾರ್ಯ ನಿರ್ವಹಿಸುತ್ತೆನೆ ಎಂದು ತಿಳಿಸಿದರು

Be the first to comment

Leave a Reply

Your email address will not be published.


*