ರಾಜ್ಯ ಸುದ್ದಿಗಳು
ಮಸ್ಕಿ
ಅಭ್ಯರ್ಥಿಗಳು ಮತಯಂತ್ರದಲ್ಲಿ ನಮೋದಾಗುವ ಹೆಸರುಗಳನ್ನು ಪರಿಶೀಲಿಸಿ ಲೋಪವಿದ್ದಲ್ಲಿ ತಿಳಿಸಿ ಸರಿಪಡಿಸಿಕೊಳ್ಳಿ ಎಂದು ಮಸ್ಕಿಯ ತಹಸಿಲ್ದಾರ್ ಹಾಗೂ ತಾಲೂಕಾ ಚುನಾವಣಾಧಿಕಾರಿಗಳಾಗಿರುವ ಕವಿತಾ ಆರ್ ತಿಳಿಸಿದರು. ಇಂದು ಬೆಳಿಗ್ಗೆ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ,ಮಸ್ಕಿ,ಬಳಗಾನೂರು,ತುರುವಿಹಾಳ ಪಟ್ಟಣ ಹಾಗೂ ಪುರಸಭೆಗಳ ಚುನಾವಣಾ ಪ್ರಯುಕ್ತ ಆಯೋಜಿಸಲಾಗಿದ್ದ ಅಭ್ಯರ್ಥಿಗಳಿಗೆ ಮತಯಂತ್ರದ ಪ್ರಾತೆಕ್ಷಿಕೆ ಪ್ರದರ್ಶಿಸಿ ಅವರು ಮಾತನಾಡಿದರು.
ಈ ವೇಳೆ ಮಾಸ್ಟರ್ ಟ್ರೇನರ್ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರಾಗಿರುವ ಪಂಪನಗೌಡ ಜಿ,ಪಾಟೀಲ್ ಮಾಹಿತಿನೀಡಿದರು.ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕಾ ಚುನಾವಣಾಧಿಕಾರಿಗಳಿಂದ ಬಳಗಾನೂರು ಪಟ್ಟಣ ಪಂಚಾಯ್ತಿ, ಮತ್ತು ಮಸ್ಕಿ ಪುರಸಭೆಯ ಎಲ್ಲ ಅಭ್ಯರ್ಥಿಗಳಿಗೆ ಮತಯಂತ್ರದ ಪ್ರಾತ್ಯಕ್ಷಿತೆಯನ್ನು ತೋರಿಸಿ ಮತದಾನದ ಪ್ರಕ್ರಿಯೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.ಜೊತೆಗೆ ಅಭ್ಯರ್ಥಿಗಳಿಗೆ ಗುರುತಿನ ಚೀಟಿಗಳನ್ನು ನೀಡಲಾಯಿತು.ಆರಕ್ಷಕರು ಬಿಗಿ ಬಂದೋಬಸ್ತನ್ನು ಒದಗಿಸಿದ್ದರು.
ಇದೇ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು, ಟ್ರೇನರ್, ಮಾಸ್ಟರ್ ಟ್ರೇನರ್ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.ಜೊತೆಗೆ ಮತ್ತೋರ್ವ ಮಾಸ್ಟರ್ ಟ್ರೇನರ್ ಮಹಾಂತೇಶ ಮಸ್ಕಿ, ಚುನಾವಣಾಧಿಕಾರಿಗಳಾದ ಶ್ರೀನಿವಾಸ ಯಾಳಗಿ, ಗುಂಡೂರಾವ್ ದೇಸಾಯಿ ,ಆದಪ್ಪ ಹೆಂಬಾ, ಎಇಇ ದಾವುದ್,ಬಳಗಾನೂರು ಪಟ್ಟಣ ಪಂಚಾಯತಿಯ ಮಸ್ಕಿಯ ಪುರಸಭೆ ಅಭ್ಯರ್ಥಿಗಳು ಹಾಗೂ ಏಜೆಂಟರುಗಳು ಇದ್ದರು.
Be the first to comment