ಶ್ರೀಗಳ ಅಬಯಾಸ್ತದಿಂದ ತೊಟ್ಟಿಲ ಕಾರ್ಯಕ್ರಮ ಯಶಸ್ವಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ತಾಲೂಕಿನ ಮೆದಿಕಿನಾಳ ಗ್ರಾಮದ ಲಿಂ. ಶ್ರೀ ಚನ್ನಮಲ್ಲ ಶಿವಯೋಗಿಗಳ ಮಠದ ಆವರಣದಲ್ಲಿ ಇಂದು ಪುರಾಣದ ಮೊದಲನೇ ದಿನಆದ್ದರಿಂದ ಅತೀ ಹೆಚ್ಚು ಜನ ಸಂದಣಿ ಸೇರುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.
ಮೊದಲಿಗೆ ಶ್ರೀ ಮ.ನಿ.ಪ್ರ. ಡಾ. ಚನ್ನಮಲ್ಲ ಮಹಾಸ್ವಾಮಿ ಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಪ್ರವಚನಕಾರರಾಗಿ ಆಗಮಿಸಿದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ಶಶಿಧರ ಶಾಸ್ತ್ರಿಗಳು ಡೋಣಿ ಗದಗ ಇವರು ಕಾರ್ಯಕ್ರಮದ ಮುಂಭಾಗ ನೆರೆದಿರುವಂತಹ ಸಕಲ ಸದ್ಭಕ್ತರನ್ನು ಸ್ವಾಗತಿಸಿ ಜನಸಾಮಾನ್ಯರ ಮನಮುಟ್ಟುವಂತೆ ಅತೀ ಸರಳ ಭಾಷೆಯಲ್ಲಿ ಪ್ರವಚನವನ್ನು ನೀಡಿದರು. ಪ್ರವಚನದ ಮದ್ಯೆ ಆಡು ಭಾಷೆಯ ಸಂಗೀತವನ್ನು ಶ್ರೀ ಶಿವಾನಂದ ಮಂದೇವಾಲ ಗದಗ ಇವರು ಹಾಡಿದರು ಹಾಗೆಯೇ ಸಂಗೀತಕ್ಕೆ ತಕ್ಕಂತೆ ಶ್ರೀ ಬಸವರಾಜ ಚಳಗೇರಿ ಗದಗ ರವರು ತಬಲವನ್ನು ನುಡಿಸಿದರು.

CHETAN KENDULI

ಇಂದು ತೊಟ್ಟಿಲ ಕಾರ್ಯಕ್ರಮ ವಿದ್ದರಿಂದ ಅತೀ ಸರಳ ರೀತಿಯಲ್ಲಿ ಕಾರ್ಯಕ್ರಮ ನೇರವೇರಿಸಿದರು. ಮೊದಲಿಗೆ ಐದು ಜನ ಮಹಿಳೆಯರನ್ನು ಬಂದು ಒಂದೊಂದೇ ನವಜಾತ ಶಿಶುವನ್ನು ತೊಟ್ಟಿಲಲ್ಲಿ ಹಾಕಿ ಗಂಡು ಮಗು ಇದ್ದರೆ ಚನ್ನಮಲ್ಲ ಎಂದು ಹೆಣ್ಣು ಮಗು ಇದ್ದರೆ ಚೆನ್ನ ಶ್ರೀ ಎಂದು ಶ್ರೀಗಳು ನಾಮಕರಣ ಮಾಡುವ ಮೂಲಕ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಿದರು. ನಂತರ ಯಾರಿಗೆ ಮಕ್ಕಳ ಭಾಗ್ಯ ಸಿಗದವರು ಬಂದು ತಮ್ಮ ಬೇಡಿಕೆ ಈಡೇರಿಸುವಂತೆ ಶ್ರೀಗಳ ಆಶೀರ್ವಾದ ಪಡೆದು ಹುಡಿ ತುಂಬಲಾಯಿತು.
ಕೊನೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚನ್ನಮಲ್ಲ ಸ್ವಾಮಿಗಳು ಕಾರ್ಯಕ್ರಮದ ಕುರಿತು ಕೆಲವೊಂದಿಷ್ಟು ಹಿತ ನುಡಿಗಳನ್ನಾಡಿ ನಂತರ ಇಂದಿನ ಅನ್ನ ಸಂತರ್ಪಣ ದಾನಿಗಳಿಗೆ ಸನ್ಮಾನಿಸಿ ಆಶೀರ್ವದಿಸಿದರು.ಲಿಂ. ಶ್ರೀ ಚನ್ನಮಲ್ಲ ಶಿವಯೋಗಿಗಳ 66ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಡಿಸೆಂಬರ್ 26 ರವರೆಗೆ ಪ್ರತಿದಿನ ಸಂಜೆ 6:30 ರಿಂದ 8:30 ರವರಿಗೆ ಜರಗಲಿದೆ ಪ್ರತಿ ನಿತ್ಯವೂ ಭಾಗವಹಿಸಿ ಎಂದು ಶ್ರೀಗಳು ನೆರೆದಿರುವ ಭಕ್ತರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಚನ್ನಮಲ್ಲ ಮಠದ ಶ್ರೀಗಳು, ವ್ರವಚನಕಾರರು, ಸಂಗೀತ ವೃಂದದವರು, ತಬಲಾಜಿಗಳು, ಗ್ರಾಮದ ಗುರು- ಹಿರಿಯರು, ಮೆದಿಕಿನಾಳ ಗ್ರಾಮದ ಸರ್ವ ಭಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*