ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಇಂದು ಶ್ರೀ ಆರ್ ಎಲ್ ಜಾಲಪ್ಪ ರವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು ತಾಲ್ಲೂಕಿನ ವಿವಿಧ ಭಾಗಗಳಿಂದ ಹಲವಾರು ಸಾರ್ವಜನಿಕರು ದಿವಂಗತ ಆರ್ ಎಲ್ ಜಾಲಪ್ಪ ರವರ ಪಾರ್ಥಿವ ಶರೀರವನ್ನು ನೋಡಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಬಹುಜನ ಸಮಾಜ ಪಾರ್ಟಿಯ ರಾಜ್ಯ ನಾಯಕರಾದ ಪುರುಷೋತ್ತಮ್ ಅಹಿಂದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ ನಂತರ ಮಾತನಾಡಿ ಜಾಲಪ್ಪನವರು ದಲಿತರು ಹಿಂದುಳಿದ ವರ್ಗದವರು ಹಾಗೂ ಕಡುಬಡವರ ದ್ವನಿಯಾಗಿದ್ದರು ದೊಡ್ಡಬಳ್ಳಾಪುರ ತಾಲೂಕಿನ ಹಲವಾರು ಸಮಸ್ಯೆಗಳಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸಿ ತಾಲ್ಲೂಕಿನ ಜನತೆಯ ಅಚ್ಚುಮೆಚ್ಚಿನ ನಾಯಕರಾಗಿದ್ದರು ಉತ್ತಮ ದಲಿತ ನಾಯಕರನ್ನು ಕಳೆದುಕೊಂಡಿದ್ದೇವೆ ಇದು ತುಂಬಲಾರದ ನಷ್ಟ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಜಾಲಪ್ಪ ನವರು ಸ್ವಾಭಿಮಾನಿ ರಾಜಕಾರಣಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಮಂತ್ರಿಗಿರಿಯನ್ನು ಲೆಕ್ಕಿಸದೆ ರಾಜೀನಾಮೆ ನೀಡಿದಂತಹ ವ್ಯಕ್ತಿ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು
Be the first to comment