ರಾಜ್ಯ ಸುದ್ದಿಗಳು
ಮಸ್ಕಿ
ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಕೇಂದ್ರ ಶಾಲೆಯಲ್ಲಿ ಇಂದು ಅಮೇಚೂರ್ ಅಸೋಸಿಯೇಷನ್ ವತಿಯಿಂದ ನಡೆಸಲಾದ ಪತ್ರಿಕಾ ಗೋಷ್ಠಿ.ದಿನಾಂಕ 28-11-2021 ರಂದು ಬೆಂಗಳೂರಿನ ಹೆನ್ನಾಗರದಲ್ಲಿ ನಡೆದ ರಾಜ್ಯ ಮಟ್ಟದ ಚಾಂಪಿಯನ್ ಷಿಪ್ ಕ್ರೀಡಾ ಕೂಟದಲ್ಲಿ ರಾಯಚೂರು ಜಿಲ್ಲಾ ಅಮೇಚೂರ್ ಖೋಖೋ ಅಸೋಸಿಯೇಷನ್ ಮತ್ತು ಮಸ್ಕಿ ತಾಲೂಕ ಅಮೇಚೂರ ಖೋಖೋ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳೆಯರಿಗಾಗಿ ನಡೆಸಲಾದ ಖೋಖೋ ತಂಡವು ಆಯ್ಕೆಯಾಗಿದೆ. ಅದರಲ್ಲಿ ಸುಮಾರು 206 ಗಂಡು ಮಕ್ಕಳು 46 ಹೆಣ್ಣು ಮಕ್ಕಳು ಭಾಗವಹಿಸಿದ್ದರು ತಮ್ಮ ಸಾಮರ್ಥ್ಯವನ್ನು ಮೀರಿ ಪ್ರದರ್ಶನ ನೀಡಿದರು.ಅದರಲ್ಲಿ ಉತ್ತಮ 12 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಡಿಸೆಂಬರ್ 3,4, ಮತ್ತು 5 ರ೦ದು ಬೆಂಗಳೂರಿನ ಹೆನ್ನಾಗರದಲ್ಲಿ ನಡೆದ ರಾಜ್ಯ ಮಟ್ಟದ ಚಾಂಪಿಯನ್ ಷಿಪ್ ಗೆ ಕಳುಹಿಸಿ ಕೊಡಲಾಗಿತ್ತು.ಅದರಲ್ಲಿ ರಾಯಚೂರು ಜಿಲ್ಲೆಯ ಪುರುಷ ಹಾಗೂ ಮಹಿಳಾ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದವು ರಾಜ್ಯ ಚಾಂಪಿಯನ್ ಶಿಪ್ ನಲ್ಲಿ ಒಟ್ಟಾರೆ 16 ಜಿಲ್ಲೆಯಿಂದ ಪುರುಷ ಹಾಗೂ 12 ಜಿಲ್ಲೆಯಿಂದ ಮಹಿಳಾ ತಂಡಗಳು ಪ್ರತಿನಿಧಿಸಿದ್ದವು. ಪುರುಷ ವಿಭಾಗದಿಂದ ಒಟ್ಟಾರೆಯಾಗಿ 16 ತಂಡಗಳಿಂದ ನಾಲ್ಕು ಗುಂಪುಗಳಾಗಿ ವಿಂಗಡನೆ ಮಾಡಿ ಅದರಲ್ಲಿ ಉತ್ತಮ ಪ್ರದರ್ಶನ ನೀಡುವ 8 ತಂಡಗಳನ್ನು ಮಾತ್ರ ಮುಂದಿನ ತಿಂಗಳು ರಾಜ್ಯ ಸರ್ಕಾರದ ವತಿಯಿಂದ ಮಂಗಳೂರು, ಉಡುಪಿಯಲ್ಲಿ ನಡೆಸಲ್ಪಡುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕಳುಹಿಸಿ ಕೊಡುವ ಉದ್ದೇಶವನ್ನು ಹೊಂದಿದೆ ಅದರಲ್ಲಿ ನಮ್ಮ ರಾಯಚೂರು ತಂಡವು ಮಂಡ್ಯ, ಮತ್ತು ಚಾಮರಾಜ ನಗರ ತಂಡವನ್ನು ಇನ್ನಿಂಗ್ಸ್ ಅಂತರದಲ್ಲಿ ಸೋಲಿಸಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿಗಿದೆ. ಇಂತಹ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲಾ ತಂಡಕ್ಕೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶಿವಪ್ಪ ಹಸಮಕಲ್. ಶ್ರೀ ಸಂಪತ್,ಮೋಹನ್ ಭಾವಿಮನಿ ರವೀಂದ್ರ.ಕೆ, ಬಸವರಾಜ ಯಾತಗಿರಿ,
ಶ್ರೀ ರಾಮಪ್ಪ ಕರಡಿ , ಶಿವಪ್ಪ ಕುರಿ ದುರುಗಪ್ಪ NMS,ವೀರೇಶ ಶಾರದಾ ಶಾಲೆ ಇವರನ್ನು ಜಿಲ್ಲಾ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಇತ್ಲಿ ಮತ್ತು ತಾಲೂಕ ಅಧ್ಯಕ್ಷರಾದ ಶ್ರೀ ಮೌನೇಶ್ ನಾಯಕ, ಶ್ರೀ ಅಮರೇಶ ಬ್ಯಾಳಿ, ಸಿದ್ದಣ್ಣ ಮೂಳ್ಳೂರು,ಮಸೂದ್ ಪಾಷ, ಮಲ್ಲಿಕಾರ್ಜುನ ಹೀರೇಮಠ ಮು.ಗು.ಶಾರದ ಪ್ರೌಢಶಾಲೆ ಮಸ್ಕಿ, ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಅಭಿನಂದಿಸಿದ್ದಾರೆ.
ಹಾಗೆಯೇ ಅಸೋಸಿಯೇಷನ್ ಕ್ರೀಡಾಕೂಟಕ್ಕೆ ಸಹಾಯ ಹಸ್ತ ನೀಡಿದ ಪ್ರಾಯೋಜಕರಾದಕ್ರೀಡೆ ಸಮವಸ್ತ್ರ ವಿತರಕರು: ಶ್ರೀ ಸಪ್ತಗಿರಿ ಮಿನರಲ್ ವಾಟರ್ ಇಂಡಸ್ಟ್ರೀಸ್,ತರಬೇತಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಿದವರು: ಶ್ರೀ ಪ್ರತಾಪ ಗೌಡ ಪೌಂಡೇಶನ್ ಮಸ್ಕಿ,ಬೆಂಗಳೂರು ಪ್ರಯಾಣದ ವೆಚ್ಚ ಭರಿಸಿದವರು: ಶ್ರೀ ಮಲ್ಲಿಕಾರ್ಜುನ ಇತ್ಲಿ ಮತ್ತು ಶ್ರೀ ರಾಘವೇಂದ್ರ ಅಬಕಾರಿ ಗುತ್ತಿಗೆದಾರರು ಬಳಗಾನೂರು,ತರಬೇತಿಗೆ ಸ್ಥಳಾವಕಾಶ ನೀಡಿದವರು: 1.ಪ್ರಚಾರ್ಯರು ಎಂ. ಡಿ. ಆರ್. ಎಸ್ (ಎಸ್ಸಿ) ವಸತಿ ಶಾಲೆ ಮಸ್ಕಿ,2. ಮುಖ್ಯಗುರುಗಳು ಎನ್. ಏಮ್. ಎಸ್ ಪ್ರೌಡ ಶಾಲೆ ಮಸ್ಕಿವಸತಿ ವ್ಯವಸ್ಥೆ: ಬ್ರಮರಾಂಭ ದೇವಸ್ಥಾನ ಸಮಿತಿಬೆಂಗಳೂರಿನಲ್ಲಿ ನಡೆಸಲಾದ ಕ್ರೀಡೆಗೆ ಪ್ರೋತ್ಸಾಹ ನೀಡಿ ತಮ್ಮ ಸಹಾಯ ಹಸ್ತ ನೀಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
Be the first to comment