ಕಸಹೊತ್ತ ವಾಹನಗಳಿಗೆ ತಡೆ : ರೈತರ ಹೋರಾಟಕ್ಕೆ ತತ್ಕಾಲಿಕ ಬ್ರೇಕ್ 

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

 ಎಂಎಸ್ ಜಿಪಿ ಘನ ತಾಜ್ಯ ವಿಲೇವಾರಿ ಘಟಕದ ವಿರುದ್ಧ ಸಾಗುತ್ತಿರುವ ರೈತರ ಹೋರಾಟಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಶಾಸಕರ ಬೆಂಬಲ ದೊರೆತಿದ್ದು ಶಾಸಕರ ಬೆಂಬಲದೊಂದಿಗೆ ಇಂದು ಧರಣಿ ಆರಂಭವಾಯಿತು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಗಳಾದ ಎಂಟಿಬಿ ನಾಗರಾಜ್ ರವರು ಎಂ ಎಸ್ ಜಿ ಪಿ ಘಟಕದ ಸ್ಥಳ ಪರಿಶೀಲನೆ ನಡೆಸಿದರು ಪರಿಶೀಲನಾ ಸಮಯದಲ್ಲಿ ಸ್ಥಳದ ಮಾಹಿತಿಯನ್ನು ತಾಲ್ಲೂಕಿನ ಶಾಸಕರು ಬಿಎಸ್ಪಿ ಹಿರಿಯ ಮುಖಂಡರಾದ ಪುರುಷೋತ್ತಮ್ ಹಾಗೂ ಸ್ಥಳೀಯ ಗ್ರಾಮಸ್ಥರು ನೀಡಿದರು ಪರಿಶೀಲನೆ ನಡೆಸಿದ ನಂತರ ಹೋರಾಟದ ಸ್ಥಳಕ್ಕೆ ಆಗಮಿಸಿದ ಎಂಟಿಬಿ ನಾಗರಾಜ್ ರವರು ಹೋರಾಟದಲ್ಲಿ ಪಾಲ್ಗೊಂಡಿದ್ದರು ಮುಖಂಡರು ಹಾಗೂ ರೈತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕಾಲಾವಕಾಶವನ್ನು ಕೋರಿದರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಆಶ್ವಾಸನೆ ನೀಡಿದರು ಹಾಗೂ ಎಂ ಎಸ್ ಜಿ ಪಿ ಘಟಕ ವನ್ನು ಮುಚ್ಚಲು ಸಹಕರಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು ದೊಡ್ಡಬಳ್ಳಾಪುರ ತಾಲೂಕಿನ ಶಾಸಕರು ರೈತರಿಗೆ ಮನವೊಲಿಸುವಲ್ಲಿ ಯಶಸ್ವಿಯಾದರು ಧರಣಿ ಸತ್ಯಾಗ್ರಹವನ್ನು ಮುಂದೂಡಲಾಯಿತು

CHETAN KENDULI

Be the first to comment

Leave a Reply

Your email address will not be published.


*