ಐ.ಆರ್.ಬಿ ಕಂಪನಿ ವಿರುದ್ಧ ವಿಶ್ವ ಹಿಂದೂ ಪರಿಷತ್ತ ಬೈಂದೂರ್ ಘಟಕ ಪ್ರತಿಭಟನೆ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಬೈಂದೂರು

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡ ಇದರ ವತಿಯಿಂದ ಟೋಯಿಂಗ್ ವಾಹನದ ಹಿಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗೋವನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಿದವರ ಐ.ಆರ್.ಬಿ ಕಂಪನಿ ವಿರುದ್ದ ಪ್ರತಿಭಟನೆ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆಯಿತು.ವಿ.ಹಿ.ಪ ಬೈಂದೂರು ಘಟಕದ ಸಂಚಾಲಕ ಸುಧಾಕರ ಶೆಟ್ಟಿ ನೆಲ್ಯಾಡಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಆರಂಭಗೊoಡಿರುವ ಚತುಷ್ಪಥ ಹೆದ್ದಾರಿಯಲ್ಲಿ ಗುತ್ತಿಗೆ ಪಡೆದ ಐ.ಆರ್.ಬಿ ಕಂಪೆನಿ ಸಮರ್ಪಕವಾಗಿ ಕಾರ್ಯಾನಿರ್ವಹಿಸುತ್ತಿಲ್ಲ ಹೀಗಾಗಿ ಸಾರ್ವಜನಿಕರ ಆಕ್ರೋಶವಿದೆ.ಮೃತಪಟ್ಟಿರುವ ಜಾನುವಾರುಗಳನ್ನು ಕೂಡ ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಬೀದಿ ದೀಪ,ರಸ್ತೆ ಸಮಸ್ಯೆಗಳನ್ನು ದುರಸ್ಥಿಪಡಿಸದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು..ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾಧ್ಯಕ್ಷ ಶ್ರೀಧರ ಬಿಜೂರು ಮಾತನಾಡಿ ಶಿರೂರು ಟೋಲ್ ಗೇಟ್‌ನಲ್ಲಿ ನಿಗಧಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು ಇವುಗಳನ್ನು ಆದಷ್ಟು ಬೇಗ ಸರಿಪಡಿಸಬೇಕು.ಒಂದೊಮ್ಮೆ ಇವುಗಳನ್ನು ಸರಿಪಡಿಸದಿದ್ದಲ್ಲಿ ವಿ.ಹಿ.ಪ ಹಾಗೂ ವಿವಿಧ ಸಂಘಟನೆಯ ವತಿಯಿಂದ ಶಿರೂರು ಟೋಲ್ ಪ್ಲಾಜಾದ ಮುಂದೆ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಮತ್ತು ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ನೀಡಬೇಕು ಎಂದರು.

CHETAN KENDULI

ವಿ.ಹಿ.ಪ ಬಜರಂಗದಳ ಬೈಂದೂರು ಘಟಕದ ಅಧ್ಯಕ್ಷ ಜಗದೀಶ ಕೊಲ್ಲೂರು ಮಾತನಾಡಿ ಗೋಮಾತೆಗೆ ಗೌರವ ನೀಡುವುದು ಹಿಂದೂ ಸಂಸ್ಕ್ರತಿಯ ಪ್ರತೀಕ.ರಸ್ತೆಯಲ್ಲಿ ಅಪಘಾತ ಹೊಂದುವ ಜಾನುವಾರುಗಳನ್ನು ಸಮರ್ಪಕವಾಗಿ ಗೌರವಿಸಬೇಕು ಎಂದರು.ಈ ಸಂದರ್ಭದಲ್ಲಿ,ವಿ.ಹಿ.ಪ ಬಜರಂಗದಳ ಕಾರ್ಯದರ್ಶಿ ಶ್ರೀನಿವಾಸ ಮೂದೂರು,ಮಾಜಿ ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ,ಬಿಜೆಪಿ ಮುಖಂಡ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಶಿರೂರು ಗ್ರಾ.ಪಂ ಸದಸ್ಯ ರವೀಂದ್ರ ಶೆಟ್ಟಿ ಆರ್‍ಮಕ್ಕಿ, ಐ.ಆರ್.ಬಿ ಮುಖ್ಯಸ್ಥ ಪ್ರಪ್ಪುಲ್ಲ ಕಾಕಡೆ,ಸುದೇಶ್ ಶೆಟ್ಟಿ,ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ,ಬೈAದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಠಾಣಾಧಿಕಾರಿ ಪವನ್ ನಾಯಕ್ ,ಸಮಾಜಸೇವಕ ಸುಬ್ರಹ್ಮಣ್ಯ ಬಿಜೂರು ಹಾಗೂ ವಿ.ಹಿ.ಪ ಬಜರಂಗದಳದ ಮುಖಂಡರು ಹಾಗೂ ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.ಬಳಿಕ ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಹಾಗೂ ಐ.ಆರ್.ಬಿ ಕಂಪೆನಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು.

Be the first to comment

Leave a Reply

Your email address will not be published.


*