ರಾಜ್ಯಪಾಲ ಥಾವರಚಂದ್ ಅವರು ಮುರ್ಡೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುರುಡೇಶ್ವರ

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಕುಟುಂಬಸ್ಥರೊಂದಿಗೆ ಉತ್ತರ ಕನ್ನಡದ ಧಾರ್ಮಿಕ ಸ್ಥಳಗಳ ಪ್ರವಾಸ ನಡೆಸಿದರು. ಶುಕ್ರವಾರ ಬೆಳಗ್ಗೆ ವೇಳೆಗೆ ಝಡ್ ಪ್ಲಸ್ ಭದ್ರತೆಯೊಂದಿಗೆ ಅವರು ಮುರುಡೇಶ್ವರಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿತ್ತು.ಮುರುಡೇಶ್ವರ ದೇವಸ್ಥಾನದಿಂದ ಮಹಾದ್ವಾರದವರೆಗಿನ ಎರಡೂ ರಸ್ತೆ ಮಾರ್ಗವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿತ್ತು. ಎಲ್ಲಾ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ರಸ್ತೆಯುದ್ದಕ್ಕೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಎಲ್ಲಾ ಒಳ ಸಂಪರ್ಕ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಲಾಗಿದ್ದು, ಈ ವೇಳೆ ಒಂದು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆ ಕೆಲ ಪ್ರವಾಸಿಗರು ಅಸಮಾಧಾನಗೊಂಡರು.​ಗೆಹ್ಲೋಟ್ ಕುಟುಂಬಸ್ಥರಿಂದ ಪೂಜೆ

CHETAN KENDULI

ಮಾತ್ಹೋಬಾರ ಮುರುಡೇಶ್ವರನಿಗೆ ರಾಜ್ಯಪಾಲರು ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು. ಕೆಲ ಕಾಲ ದೇವಸ್ಥಾನದ ಒಳಗೆ ಕುಳಿತು ವಿಶ್ರಾಂತಿ ಪಡೆಯಲು ವಿಶೇಷ ಆಸನದ ವ್ಯವಸ್ಥೆ ಮಾಡಿದ್ದರು. ದೇವರ ಪೊಜೆ ಬಳಿಕ ಮುರುಶ್ವರಕ್ಕೆ ಗಣ್ಯರು ಭೇಟಿ ನೀಡುವ ವೇಳೆ ದೇವಸ್ಥಾನದಲ್ಲಿ ದಾಖಲಿಸುವ ಗಣ್ಯರ ಭೇಟಿ ಪುಸ್ತಕಕ್ಕೆ ಸಹಿ ಹಾಕಿದರು. ನಂತರ ಪ್ರಸಾದ ಪಡೆದರು.

ಈ ವೇಳೆ ದೇವಸ್ಥಾನದ ಸಮಿತಿಯಿಂದ ರಾಜ್ಯಪಾಲರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು. ದೇವಸ್ಥಾನದ ಪ್ರಾಂಗಣಕ್ಕೆ ಬಂದ ಬಳಿಕ ಎದುರಿನ ಗೋಪುರದೊಳಗೆ ಲಿಫ್ಟ್ ಮುಖಾಂತರ ಗೋಪುರದ ತುದಿಗೆ ತೆರಳಿ ಮುರುಡೇಶ್ವರದ ಸುಂದರ ಸಮುದ್ರ ತೀರದ ಸೌಂದರ್ಯವನ್ನು ವೀಕ್ಷಿಸಿದರು. ಬಳಿಕ ಬೃಹತ್ ಶಿವನ ಮೂರ್ತಿಯ ವೀಕ್ಷಣೆಗೆ ಕಾರಿನಲ್ಲಿ ತೆರಳಿದ ಅವರು, ಅಲ್ಲಿಯೂ ಸಹ ಕೆಲಕಾಲ ಓಡಾಡಿ ಮುರುಡೇಶ್ವರದ ಸೌಂದರ್ಯವನ್ನು ಸವಿದರು. ಬಳಿಕ ಮುರುಡೇಶ್ವರ ಆರ್‌ಎನ್‌ಎಸ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿ ಅಲ್ಲಿಂದ ನೇರವಾಗಿ ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಗೋಕರ್ಣಕ್ಕೆ ತೆರಳಿದರು.

Be the first to comment

Leave a Reply

Your email address will not be published.


*