ಜಿಲ್ಲಾ ಸುದ್ದಿಗಳು
ಮಸ್ಕಿ
2020-2022ನೇ ಸಾಲಿನ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ( ರಿ)ಬೆಂಗಳೂರು ರಾಜ್ಯ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿಡಾ. ಚಂದ್ರಮೌಳಿ.ಎಸ್.ನಾಯ್ಕರ್ ರವರ “ಸಂಸ್ಕೃತಿ ಸಂಗಮ ಕೃತಿ ಮತ್ತು ಡಾ. ಶಾಮಿದ್ ಅಲಿ ಕರಡಕಲ್ ರವರ ಸತ್ಯಾನ್ವೇಷಣೆ ಕವನ ಸಂಕಲನ ಬಿಡುಗಡೆ ಸಮಾರಂಭ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿಂದ ಪತ್ರಿಕಾ ರಂಗದಲ್ಲಿ ಮಾಡಿದ ಗಣನೀಯ ಸೇವೆ ಮಾಡಿದ ಸಾಧಕರಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಕೊಡಮಾಡಲ್ಪಡುವ ಪತ್ರಿಕೋದ್ಯಮ ರತ್ನ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಎಸ್. ನಜೀರ್ ಮಸ್ಕಿ ಅವರಿಗೆ ಈ ಪ್ರಶಸ್ತಿಯನ್ನು ಡಿಸೆಂಬರ್ ಐದನೇ ತಾರೀಖಿ ನಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ನಡೆಯುವಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ
2020 -22 ನೇ ಸಾಲಿನ ರಾಜ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ ಎಸ್. ನಜೀರ್ ಮಸ್ಕಿ ರವರಿಗೆ ಪತ್ರಿಕೋದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವದು.ಇವರ ಈ ಸಾಧನೆಗೆ ನಾಡಿನೆಲ್ಲೆಡೆಯಿಂದ ಪ್ರಗತಿಪರ ಚಿಂತಕರು, ಹಿತೈಸಿಗಳು, ಸ್ನೇಹಿತರು,ಸಹೃದಯಿ ಪತ್ರಕರ್ತಮಿತ್ರರು, ಸಂಘಟಕರು, ಸಮಾಜಸೇವಕರು ಕನ್ನಡಪರ ಹೋರಾಟಗಾರರು ಶುಭಾಷಯಕೋರಿ ಅವರ ಬೆಳವಣಿಗೆ ಹೀಗೆ ಮುಂದುವರೆಯಲೆಂದು ಹೃದಯತುಂಬಿ ಹರಸಿದ್ದಾರೆ.ಇವರಿಗೆ ಹತ್ತನೆ ತರಗತಿಯಿದ್ದಾಗಲೇ ಹೋರಾಟ ಸಮಾಜ ಸೇವೆ ಹವ್ಯಾಸ ಅಂಬೆಗಾಲಿಡಲಾರಂಭಿಸಿತು. ಅದು ಕ್ರಮೇಣಬೆಳೆದು ಕಾಲೇಜುಹಂತಕ್ಕೂ ಮುಂದುವರೆಯಿತು.
ಪಿ.ಯು.ಸಿ , ಐ.ಟಿ.ಐ, ಡಿಪ್ಲೊಮಾ, ಪದವಿ ಕೋರ್ಸ್ ಹಾಗೂ ಕರ್ನಾಟಕ ಯುವ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಆರೂ ವರ್ಷ ಸೇವೆ, ಜಾಗೃತಿ ಕಿರಣ , ನಿರ್ಭೀತ ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಎಂಟು ವರ್ಷ,ಸಾಯಂಕಾಲ ಎಕ್ಸ್ಪ್ರೆಸ್ , ಭಾರತ ವೈಭವ, ಗಣಿ ನಾಡು , ದಿನ ಪತ್ರಿಕೆ J k ಕನ್ನಡ News , ಹಾಗೂ ಕನ್ನಡ News 1 ಮಾಧ್ಯಮ ದಲ್ಲಿ ನಾಲ್ಕು ವರ್ಷ ಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಇವರಿಗೆ ಜಾಗೃತಿ ಕಿರಣ ಕನ್ನಡ ನಿರ್ಭೀತ ಪಾಕ್ಷಿಕ ಪತ್ರಿಕೆಯ ರಾಯಚೂರು ಜಿಲ್ಲಾ ನಿರ್ಭೀತ ವರದಿಗಾರ ಪ್ರಶಸ್ತಿ”, ಕರ್ನಾಟಕ ಯುವಜಾಗೃತಿವೇಧಿಕೆ 2017 ರಲ್ಲಿ “ಕಾಯಕರತ್ನ ಪ್ರಶಸ್ತಿ”, 2018 ರಲ್ಲಿ ಕರ್ನಾಟಕ ವಿಜಯ ಸೇನೆ ರಾಜ್ಯ ಸಮಿತಿಯಿಂದ ನಿರ್ಮಿತ ವರದಿಗಾರ ನಂದು ಗೌರವಿಸಿ ಸನ್ಮಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಯಚೂರು ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್ (ರಿ) ಇವರಿಂದ ಬಹುರೂಪಿ ಸಿರಿ ಪ್ರಶಸ್ತಿ ಮತ್ತು ಕರ್ನಾಟಕ ಮುಸ್ಲಿಂ ಅಲ್ಪಸಂಖ್ಯಾತರ ಹಕ್ಕು ಹೋರಾಟ ಸಮಿತಿ ವತಿಯಿಂದ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರ ಈ ಸಾಧನೆಯನ್ನು ಗುರುತಿಸಿ ಪತ್ರಿಕೋದ್ಯಮರತ್ನ ರಾಜ್ಯ ಪ್ರಶಸ್ತಿ ನೀಡಿದ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಶ್ರೀ ಎಮ್,ಟಿಪ್ಪುವರ್ಧನ್, ಹಾಗೂ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸಕಲ ಸದಸ್ಯರುಗಳಿಗೆ ಪ್ರಶಸ್ತಿಗೆ ಭಾಜನರಾಗಿರುವ ಎಸ್ ನಜೀರ್ ಮಸ್ಕಿ ರವರು ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
Be the first to comment