ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ವ್ಯಕ್ತಿ :ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲು..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಹೊನ್ನಾವರ

ಇಡಗುಂಜಿ ಕ್ರಾಸ್ ಸಮೀಪ ಇರುವ ವಿನಾಯಕ ವನದ ಪಕ್ಕದ ಕಚ್ಚಾ ರಸ್ತೆಯಲ್ಲಿ ಗುಣವಂತೆಯ ಜಗದೀಶ ಶಂಭು ಗೌಡ ತನ್ನ ದ್ವಿಚಕ್ರ ವಾಹನದಲ್ಲಿ ಭಟ್ಕಳದ ರಿಜ್ವಾನ್ ಎಂಬುವವರಿಂದ ಖರೀದಿಸಿದ ಸುಮಾರು 6000/- ರೂಪಾಯಿ ಮೌಲ್ಯದ 60 ಗ್ರಾಮ ಗಾಂಜಾವನ್ನು ಸ್ಕೂಟಿಯ ಬಾಕ್ಸನಲ್ಲಿಟ್ಟು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.ಕೆಲ ತಿಂಗಳ ಹಿಂದೆ ಈತನು ಮಾಳಕೋಡ ರಸ್ತೆಯ ಬೋಳಕಟ್ಟೆಯಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾಗ ಇದೇ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದ . ಆದರು ತನ್ನ ಹಳೇ ಚಾಳಿಯನ್ನು ಮತ್ತೆ ಮುಂದುವರಿಸಿದ್ದು, ಇದೀಗ ಮತ್ತೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದು ಪೋಲಿಸರ ಅತಿಥಿಯಾಗಿದ್ದಾನೆ.

CHETAN KENDULI

ಹಲವು ವರ್ಷದಿಂದ ತಾಲೂಕಿನಲ್ಲಿ ಗಾಂಜಾ ವಿದ್ಯಾರ್ಥಿಗಳ ಕೈ ಸೇರುತ್ತಿದೆ ಎನ್ನುವ ಅಪವಾದ ಕೇಳುತ್ತಿದ್ದರೂ ಆಗೊಮ್ಮೆ ಈಗಮ್ಮೊ ಇಂತಹ ಪ್ರಕರಣ ಬೇಳಕಿಗೆ ಬರುತ್ತಿದೆ. ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಜಾ ವ್ಯವಹಾರ ಹೊನ್ನಾವರ ತಾಲೂಕಿನಲ್ಲಿ ಜೋರಾಗಿ ನಡೆಯುತ್ತಿದೆಯಾ ಎನ್ನುವ ಅನುಮಾನ ಉಂಟಾಗಿದ್ದು, ಈ ಪ್ರಕರಣದಲ್ಲಿ ಈತನ ಜೊತೆ ಇರುವರೆಲ್ಲರನ್ನು ಪೊಲೀಸರು ಪತ್ತೆ ಮಾಡುವಲ್ಲಿ ತನಿಖೆ ಮುಂದುವರೆಸಿದ್ದಾರೆ.

Be the first to comment

Leave a Reply

Your email address will not be published.


*