ರಾಜ್ಯ ಸುದ್ದಿಗಳು
ಭಟ್ಕಳ:
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕರಾವಳಿಯ ಸಮಾಚಾರ ವೆಬ್ ಪೋರ್ಟಲ್ ಸಂಪಾದಕ , ಪತ್ರಕರ್ತ ಅರ್ಜುನ ಮಲ್ಯ ಮೇಲೆ ಮುಸುಕುದಾರಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಅಖಿಲ ಭಾರತ್ ಜರನಲಿಸ್ಟ್ ಫೆಡರೇಷನ್ ಉತ್ತರ ಕನ್ನಡ ಜಿಲ್ಲಾ ಘಟಕ ಖಂಡಿಸುತ್ತದ್ದೆ ಮತ್ತು ಪತ್ರಕರ್ತ ಅರ್ಜುನ್ ಮಲ್ಯ ಮೇಲೇ ಹಲ್ಲೆ ಮಾಡಿದ ದುಸ್ಕರ್ಮಿಗಳನ್ನು 24 ಗಂಟೆಯೊಳಗೆ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಜರ್ನಲಿಸ್ಟ್ ಉತ್ತರಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ ಆಗ್ರಹಿಸಿದ್ದಾರೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯಲ್ಲಿ ಗುರುವಾರ ಸಂಜೆ 7 ಗಂಟೆಗೆ ನಡೆದಿದೆ. ಕರಾವಳಿ ಸಮಾಚಾರ್ ಎಂಬ ವೆಬ್ ಪೋರ್ಟಲ್ ಸಂಪಾದಕ ಅರ್ಜುನ್ ಮಲ್ಯ ಎಂಬಾತನೇ ಹಲ್ಲೆಗೊಳಗಾದವನಾಗಿದ್ದು, ಭಟ್ಕಳದ ಪುರಸಭೆಯ ಕಟ್ಟಡದಲ್ಲಿರುವ ತನ್ನ ಕಚೇರಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ಬೆಳಕೆ ಬಳಿ ಆರು ಜನರ ಮುಸುಕುದಾರಿಗಳು ರಾಡ್ ಮತ್ತು ಕಟ್ಟಿಗೆ ತುಂಡುಗಳಿಂದ ದಾಳಿ ನಡೆಸಿದ್ದು ಸ್ಥಳೀಯರು ಆಗಮಿಸುತಿದ್ದಂತೆ ಹಲ್ಲೆಕೋರರು ಓಡಿಹೋಗಿದ್ದಾರೆ.
ಹಲ್ಲೆಯಿಂದ ಅರ್ಜುನ್ ಮಲ್ಯ ರವರ ಕೈ ಮುರಿದಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲಿಸರು ಆಗಮಿಸಿದ್ದು ದೂರು ದಾಖಲಾಗಿದೆ.
ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ ಸ್ಥಳಕ್ಕೆ ಆಗಮಿಸಿ ತನಿಖೆ ಕೈ ಕೊಂಡಿದ್ದಾರೆ. ಭಟ್ಕಳದ ಪತ್ರಕರ್ತ ಅರ್ಜುನ್ ಮಲ್ಯ ಮೇಲಿನ ಹಲ್ಲೆ ಖಂಡಿಸಿ ಜೆಲ್ಲೆಯಾದ್ಯಂತ ಅಖಿಲ ಭಾರತ್ ಜರ್ನಲಿಸ್ಟ್ ಫೆಡರೇಷನ್ ಹೋರಾಟ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷ ಕುಮಾರ್ ನಾಯ್ಕ ತಿಳಿಸಿದ್ದಾರೆ.
Be the first to comment