ವಿದ್ಯಾರ್ಥಿಗಳು ಮತದಾನದ ಮಹತ್ವ ಅರಿಯಬೇಕು : ಟಿ.ಭೂಬಾಲನ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಶಾಲಾ ಮಕ್ಕಳಿಗೆ ಪಾಠ ಮಾಡಿದ ಸಿಇಓ

ಗಣಿತ ವಿಷಯಕ್ಕೆ ಸಂಬಂಧಿಸಿದ ತ್ರಭುಜಕ್ಕೆ ಸಂಬಂಧಿಸಿದ ಪ್ರಯೇಮಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಅವರಿಂದ ಬಂದ ಉತ್ತರದಿಂದ ತೃತ್ತಿಗೊಂಡು ಶಾಲಾ ಆಡಳಿತ ಹಾಗೂ ಕಲಿಕಾ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುವದರ ಜೊತೆಗೆ ವಿದ್ಯಾರ್ಥಿಗಳೇ ತಯಾರಿಸಿದ ವಿಜ್ಞಾನ ಪರಿಕರಣಗಳನ್ನು ಜಿ.ಪಂ ಟಿ.ಭೂಬಾಲನ್ ವೀಕ್ಷಿಸಿದರು.

ಬಾಗಲಕೋಟೆ: ಪ್ರಜಾಪ್ರಭುತ್ವದ ಅಡಿಯಲ್ಲಿ ಇರುವ ನಮ್ಮ ದೇಶದ ಆಡಳಿತ ಗುಪ್ತ ಮತದಾನ ಮೂಲಕ ಆಯ್ಕೆಯಾದವರಿಂದ ನಡೆಯುತ್ತಿದ್ದು, ಮತದಾನ ಮತ್ತು ಚುನಾವಣೆಯ ಮಹತ್ವ ಅರಿಯುವುದು ಅಗತ್ಯವಾಗಿದೆ ಎಂದು ಜಿ.ಪಂ ಸಿಇಓ ಟಿ.ಭೂಬಾಲನ್ ತಿಳಿಸಿದರು.

ನವನಗರದ ಆದರ್ಶ ವಿದ್ಯಾಲಯದಲ್ಲಿಂದು ಜಿಲ್ಲಾಡಳಿತ, ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶವಾದ ಭಾರತದಲ್ಲಿ ಪ್ರಜೆಗಳೇ ಪ್ರಜೆಗಳಿಗಾಗಿ ಪ್ರಜೆಗಳಿಂದ ಆಡಳಿತ ನಡೆಸುವ ವ್ಯವಸ್ಥೆ ಇದ್ದು, ಚುನಾವಣೆಗಳಲ್ಲಿ ಗುಪ್ತ ಮತದಾನದಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯು 1950ರಲ್ಲಿ ಭಾರತ ಗಣರಾಜ್ಯವಾದ ದಿನದಂದು ಜಾರಿಯಾಗಿದ್ದರಿಂದ ಅಂದೇ ಚುನಾವಣಾ ಆಯೋಗ ರಚನೆಗೊಂಡ ದಿನವನ್ನು ಮತದಾರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಪ್ರತಿಯೊಬ್ಬ ಮಕ್ಕಳು ಮತದಾನದ ಮಹತ್ವ ಚುನಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪಾಲಕರಿಗೆ ನೆರೆಹೊರೆಯವರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಮಕ್ಕಳಿಗೆ ಮತದಾನ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ತಾಲೂಕಾ ಮಟ್ಟದ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ನಡೆಯಲಿರುವ ಸ್ಪರ್ಧೆಯಲ್ಲಿ ಆಯ್ಕೆಗೊಂಡು ರಾಜ್ಯ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತರಬೇಕೆಂದರು. ಉತ್ತರ ಕರ್ನಾಟಕ ಭಾಗದಲ್ಲಿಯೇ ಬಾಗಲಕೋಟೆ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಚುನಾವಣೆ ಮತ್ತು ಮತದಾನದ ಪ್ರಕ್ರಿಯೆಯ ಈ ಕಾರ್ಯಕ್ರಮವು ರಾಜ್ಯಕ್ಕೆ ಪ್ರಥಮ ಬರಬೇಕಾದರೆ ತಮ್ಮೆಲ್ಲರ ಶ್ರಮ ಅವಶ್ಯವಾಗಿದೆ ಎಂದರು.

ಪ್ರಾರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಎಂ.ಎಸ್‍ನ ಯೋಜನಾ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಅವರು ಮಕ್ಕಳು ಚುನಾವಣೆ ಎಂದರೇನು, ಮತದಾನ ಯಾಕೆ ಮಾಡಬೇಕು. ಅದರಿಂದಾಗು ಪ್ರಯೋಜನಗಳನ್ನು ಅರಿತು ಪಾಲಕರಿಗೆ ಹಾಗೂ ಗ್ರಾಮದ ಜನರೆಲ್ಲರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕು. 18 ವರ್ಷದ ವಯೋಮಾನದವರಿಗೆ ಮತ ಚಲಾವಣೆಯ ಹಕ್ಕಿನ ಪತ್ರವನ್ನು ಪಡೆಯಲು ತಿಳಿಸಬೇಕು. ಮುಂದಿನ ಪ್ರಜೆಗಳಾಗುವ ತಾವು ಮತದಾನ ಮತ್ತು ಚುನಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಎಸ್.ಎಸ್.ಬಿರಾದಾರ, ಉಪನಿರ್ದೇಶಕ (ಅಭಿವೃದ್ದಿ) ಬಿ.ಕೆ.ನಂದನೂರ, ನೋಡಲ್ ಅಧಿಕಾರಿ ಡಿ.ಎಂ.ಯಾವಗಲ್ಲ, ವಿಷಯ ಪರಿವೀಕ್ಷಕರಾದ ಎಸ್.ಎಸ್.ಹಾಲವರ, ಎಂ.ಎನ್.ಬಾಳಿಕಾಯಿ, ಮುಖ್ಯ ಗುರು ಆರ್.ಎಂ.ಮಕಾನದಾರ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*