ಜಿಲ್ಲಾ ಸುದ್ದಿಗಳು
ಶಿರಸಿ
ನಾನು ಹೆಸರಿಗಷ್ಟೇ ಸ್ಪೀಕರ್ ಆಗಿದ್ದು ,, ಶಾಸನ ಸಭೆಯಲ್ಲಿ ಉಳಿದವರಿಗೆ ಮಾತನಾಡಲು ಅವಕಾಶ ಮಾಡಿಕೊಡುವ ಕೆಲಸ ಎಂದು ವಿಧಾನಸಭಾ ಸ್ಪೀಕರ್ ಕಾಗೇರಿ ಹೇಳಿದ್ದಾರೆ. ರವಿವಾರ ಉತ್ತರ ಕನ್ನಡ ಜಿಲ್ಲೆಯಲ್ಲಿನ ಶಿರಸಿ ಬೆಳ್ಳಿಕೇರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.” ಅನುಭವ ಮಂಟಪ” ದ ಮಾದರಿಯಲ್ಲಿ ಕರ್ನಾಟಕ ವಿಧಾನಸಭೆಯನ್ನು ಮಾಡಬೇಕು ಎನ್ನುವ ಗುರಿ, ಕನಸು ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇಂತಹ ಹಬ್ಬಗಳು ಪ್ರತಿ ಊರಿನಲ್ಲಿಯೂ ನಡೆದರೆ ಅದು ಗ್ರಾಮಸ್ಥರ ಅನುಭವ ಮಂಟಪ ಆಗಲಿದೆ ಎಂದರು. ನಗರ ಸಂಸ್ಕೃತಿಗೆ ಒಗ್ಗಿಕೊಂಡವರು ಊರಿನ ಅಭಿಮಾನ ಮರೆಯುತ್ತಿರುವದು ವಿಷಾದಕರ. ಪ್ರತಿ ವ್ಯಕ್ತಿಗೂ ತನ್ನ ಊರಿನ ಕುರಿತಾದ ಅಭಿಮಾನ ಜಾಗೃತವಾಗಿರಬೇಕು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲ್ಲೂಕಿನ ಬೆಳ್ಳೆಕೇರಿ ಗ್ರಾಮದಲ್ಲಿ ಭಾನುವಾರ ಗಜಾನನ ಯುವಕ ಮಂಡಳಿಯ ನಾಲ್ಕನೆ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೆಳ್ಳೇಕೇರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವೈಯಕ್ತಿ ಹಿತಕ್ಕಿಂತ ಸಾಮೂಹಿಕ ಸಂಕಲ್ಪ ಶಕ್ತಿ ಊರಿನ ಯಶಸ್ಸು, ಅಭಿವೃದ್ದಿ, ಸವಾಲು ಎದುರಿಸಲು ಸಾಧ್ಯವಾಗುತ್ತದೆ.ಗ್ರಾಮದ ಮನೆಗಳಲ್ಲಿರುವ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ಯುವಕ ಮಂಡಳಿಯ ನಾಲ್ಕು ದಶಕಗಳ ಸಂಘ ಶಕ್ತಿ ಹೊತ್ತಿಗೆ ಹಾಗೂ ಬೆಳ್ಳೇಕೇರಿ ಡಾಟ್ ಕಾಮ್ ವೆಬ್ ಸೈಟ್ ಕೂಡ ಬಿಡುಗಡೆಗೊಳಿಸಲಾಯಿತು. ಜಿ.ಆರ್.ಹೆಗಡೆ ಬೆಳ್ಳೇಕೇರಿ ಸ್ವಾಗತಿಸಿದರು. ವಿಘ್ನೇಶ್ವರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್ ಬೆಳ್ಳೇಕೇರಿ ನಿರ್ವಹಿಸಿದರು. ಕಮಲಾಕರ ಭಟ್ಟ ವಂದಿಸಿದರು.
ಊರಿನ ಹಿರಿಯರಾದ ಧನಂಜಯ ಹೆಗಡೆ, ಲಕ್ಷ್ಮೀ ಹೆಗಡೆ, ರಘುಪತಿ ಹೆಗಡೆ, ಲಕ್ಷ್ಮೀ ಭಟ್ಟ, ಅನುಸೂಯಾ ಹೆಗಡೆ, ಗಂಗಾ ಹೆಗಡೆ, ಅರುಂಧತಿ ಹೆಗಡೆ, ಮಹಾಬಲೇಶ್ವರ ಭಟ್ಟ, ಸಾವಿತ್ರಿ ಭಟ್ಟ ಅವರನ್ನು ಗೌರವಿಸಲಾಯಿತು. ಯುವಕ ಸಂಘದ ಅಧ್ಯಕ್ಷ ಎಂ.ಡಿ.ಹೆಗಡೆ ಬೆಳ್ಳೇಕೆರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಘುಪತಿ ಹೆಗಡೆ, ವಿಜ್ಞಾನಿ ಪ್ರಭಾಕರ ಭಟ್ಟ ತಟ್ಟೀಕೈ, ಎಂ.ಎನ್.ಹೆಗಡೆ ಮುಂಡಗೇಸರ, ಆರ್.ವಿ.ಭಾಗವತ ಶಿರಸಿಮಕ್ಕಿ ಇತರರು ಉಪಸ್ಥಿತರಿದ್ದರು.
Be the first to comment