ತಾಲೂಕು ಹೋಬಳಿಯ ವಿವಿದೆಡೆ ಕನ್ನಡ ರಾಜ್ಯೋತ್ಸವ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲೂಕಿನ ಕುಂದಾಣ ನಾಡಕಚೇರಿಯಲ್ಲಿ ಸರಳವಾಗಿ ೬೬ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಧ್ವಜಾರೋಹಣ ಮತ್ತು ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಕುಂದಾಣ ನಾಡಕಚೇರಿ ಉಪ ತಹಶೀಲ್ದಾರ್ ಚೈತ್ರಾ ಗೌರವ ಸಲ್ಲಿಸಿದರು. ಗ್ರಾಮ ಲೆಕ್ಕಿಗರಾದ ಲಾವಣ್ಯ, ವಿನಯ್, ಗ್ರಾಮ ಸಹಾಯಕರಾದ ಆನಂದ್, ಶ್ರೀನಿವಾಸ್, ರಾಜು, ಅನಿಲ್, ಲೋಕೇಶ್, ನಾರಾಯಣಪ್ಪ, ಸವಿತಾ, ಗಣಕಯಂತ್ರ ಆಪರೇಟರ್ ವಿಜಯ್, ಊರಿನ ಗ್ರಾಮಸ್ಥರು ಇದ್ದರು.

CHETAN KENDULI

ತಾಲೂಕಿನ ಕುಂದಾಣ ಸರಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾಡಳಿತ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡಲಾಯಿತು. ಈ ವೇಳೆಯಲ್ಲಿ ಶಾಲೆಯ ಮುಖ್ಯೋಪಾದ್ಯಾಯ ರಾಮ್‌ದಾಸ್, ಎಸ್‌ಡಿಎಂಸಿ ಅಧ್ಯಕ್ಷ ಕುಮಾರಾಚಾರಿ, ಸದಸ್ಯರು, ದೇವಗಾನಹಳ್ಳಿ ಮುನಿರಾಜು, ಶಾಲಾ ಶಿಕ್ಷಕರು, ಸಹ ಶಿಕ್ಷಕರು, ಮಕ್ಕಳು ಇದ್ದರು.

ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಸರ್ವ ಸದಸ್ಯರು, ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಣ್ಣ, ಗ್ರಾಪಂ ಸಿಬ್ಬಂದಿಗಳು ಇದ್ದರು. ತಾಲೂಕಿನಾದ್ಯಂತ ಹಾಗೂ ಹೋಬಳಿಯಾದ್ಯಂತ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿ ದೇವಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

Be the first to comment

Leave a Reply

Your email address will not be published.


*