ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಸಮೀಪದ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದರಿಂದ, ಆಣೆಕಟ್ಟೆಯ ಹೊರಭಾಗಕ್ಕೆ ನೀರಿನ ಹೊರ ಹರಿವು ಹೆಚ್ಚಳವಾಗುವ ಹಿನ್ನೆಲೆ, ನದಿ ಪಕ್ಕದ ಗ್ರಾಮಸ್ಥರು ಎಚ್ಚರವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ, ಬುಧವಾರ ಸಂಜೆ 7 ಗಂಟೆಗೆ ಅಣೆಕಟ್ಟೆಯಿಂದ 3.80 ಲಕ್ಷ ಕ್ಯೂಸೆಕ್ ನಿಂದ 4 ಲಕ್ಷ ಕ್ಯೂಸೆಕ್ ಗೆ ನೀರಿನ ಹೊರ ಹರಿವು ಹೆಚ್ಚಳವಾಗಲಿದೆ. ಹೀಗಾಗಿ ಅಣೆಕಟ್ಟೆ ಕೆಳಭಾಗದ ಗ್ರಾಮದ ಜನರು ಎಚ್ಚರವಹಿಸಬೇಕು. 4 ಲಕ್ಷ ಕ್ಯೂಸೆಕ್ ನೀರು ಹೊರ ಹರಿದಲ್ಲಿ, ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಸದ್ಯ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ, ನೀರು ತಗ್ಗಿದ ಬಳಿಕ ಬೆಳೆ ಹಾನಿ ಪ್ರಮಾಣ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.
Be the first to comment