ಜಿಲ್ಲಾ ಸುದ್ದಿಗಳು
ಭಟ್ಕಳ
ತಾಲೂಕಿನ ಪುರಸಭೆ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನೈಜ್ಯ ಪರಿಶಿಷ್ಠರಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ಪುರಸಭಾ ಅಧ್ಯಕ್ಷರನ್ನೊಳಗೊಂಡಂತೆ ತಾಲೂಕಾ ದಂಡಾಧಿಕಾರಿಗಳು ಹಾಗೂ ಪುರಸಭಾ ಮುಖ್ಯಾಧಿಕಾರಿಗಳ ಮೇಲೆ ಫ್ರಿವೆನ್ಸನ್ ಆಫ್ ಅಟ್ರೋಸಿಟಿ ದಾಖಲಾಗಿದ್ದರು ಸಹ ಈವರೆಗೂ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಠ ಜಾತಿ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಿ ಪೋಲಿಸ್ ಉಪ ಅಧಿಕ್ಷಕರ ಮೂಲಕ ರಾಜ್ಯಪಾಲರಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೆ ಮನವಿಯನ್ನು ಸಲ್ಲಿಸಲಾಯಿತು.ಭಟ್ಕಳ ವ್ಯಾಪ್ತಿಯಲ್ಲಿ ಪರಿಶಿಷ್ಠ ಜಾತಿ ಬುಡಕಟ್ಟು ಜನಾಂಗ ತಿದ್ದುಪಡಿ ಕಾಯ್ದೆ 2016 ರನ್ವಯ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿಗಳಾದ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್, ತಾಲೂಕಾ ಸಹಾಯಕ ಆಯುಕ್ತರು, ತಾಲೂಕಾ ತಹಶೀಲ್ದಾರರು, ಪುರಸಭಾ ಮುಖ್ಯಾಧಿಕಾರಿಗಳ ಮೇಲೆ ದಿನೇಶ ಬಾಬು ಪಾವಸ್ಕರ ಅವರು ಫ್ರಿವೆನ್ಸನ್ ಆಫ್ ಅಟ್ರೋಸಿಟಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆದರೆ ಈವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿರುವುದಿಲ್ಲ. ಪುರಸಭಾ ಅಧ್ಯಕ್ಷರಾದ ಪರ್ವೇಜ್ ಕಾಶಿಮ್ ಅವರು ತಮ್ಮ ಮೇಲೆ ಜಾತಿ ದೌರ್ಜನ್ಯದ ಕೇಸ್ ದಾಖಲಾಗಿದ್ದರು ಕೂಡಾ ಮಾಧ್ಯಮದ ಮುಂದೆ ಬಂದು ಹೇಳಿಕೆಯನ್ನು ಕೊಡುತ್ತಿದ್ದಾರೆ. ಆದರೂ ಕೂಡಾ ಇಲಾಖೆ ಅವರನ್ನು ಬಂಧಿಸದೆ ಜಾಣ ಕುರುಡುತನವನ್ನು ತೋರಿಸುತ್ತಿದೆ. ಈವರೆಗೂ ಆರೋಪಿಗಳು ರಾಜಾರೋಷವಾಗಿ ಬಹಿರಂಗವಾಗಿ ತಿರುಗುತ್ತಿದ್ದರು ಯಾವುದೇ ಆರೋಪಿಯನ್ನು ಬಂಧಿಸಿರುವುದಿಲ್ಲ. ಈ ಎಲ್ಲಾ ಹಿನ್ನೆಲೆಯಿಂದ ಆಕ್ರೋಶಗೊಂಡ ಕರ್ನಾಟಕ ರಾಜ್ಯ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆಯು ಶುಕ್ರವಾರ ದಂಡಿನ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶಂಶುದ್ದೀನ್ ಸರ್ಕಲ್ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯ ಮೂಲಕ ತಾಲೂಕಾ ನಗರ ಠಾಣೆಗೆ ತೆರಳಿ ಮುಖ್ಯಮಂತ್ರಿಯಿಂದ ಹಿಡಿದು ರಾಜ್ಯ ಪಾಲರವರೆಗೂ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾಧ ತುಳಸಿದಾಸ ಪಾವಸ್ಕರ ಅವರು ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ದಲಿತರ ಮೇಲೆನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ. ಮೊನ್ನೆ ನಡೆದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳು ರಾಜಾರೋಷವಾಗಿ ತಿರುಗುತ್ತಿದ್ದು, ಈ ವರೆಗೂ ಯಾರನ್ನೂ ಬಂಧಿಸಿರುವುದಿಲ್ಲ. ಇಂತಹ ಘಟನೆ ಈ ಕೂಡಲೇ ನಿಲ್ಲಬೇಕು. ನಿಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಿರಣ ಶಿರೂರು, ಉಪಾಧ್ಯಕ್ಷ ರವೀಂದ್ರ ಮಂಗಳ, ನಾರಾಯಣ ಶಿರೂರು, ಗಣೇಶ ಹಳ್ಳೆ, ಮಹೇಂದ್ರ ಪಾವಸ್ಕರ, ರವಿ ಮುಕ್ರಿ, ಬೊಮ್ಮಯ್ಯ ಹಳ್ಳೇರ, ಮಾದೇವ ಬಾಕಡ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿರಿದ್ದರು.
Be the first to comment