ಸಹಕಾರ ಸಂಘಗಳಿಂದ ಸಮಾಜದ ಋಣ ತೀರಿಸಿರಿ : ಮೇಲಕಾರ

ವರದಿ:: ಗಿರೀಶ ಜೇವರ್ಗಿ


   ಜೀಲ್ಲಾ ಸುದ್ದಿಗಳು


ಜೇವರ್ಗಿ : ನಮ್ಮ ಸಮಾಜದಲ್ಲಿ ನಡೆಯುವ ಒಳ್ಳೆಯ ಕಾರ್ಯಗಳಿಗೆ ಅಡೆತಡೆ ಉಂಟು ಮಾಡುವವರೆ ಜಾಸ್ತಿ, ಇಂತಹದರಲ್ಲಿ ಪಾವನಗಂಗ ಪತ್ತಿನ ಸಹಕಾರ ಸಂಘದ ಕಾರ್ಯ ಹೆಮ್ಮೆ ಪಡುವಂತದ್ದು ಎಂದು ಕರ್ನಾಟಕ ಯುನಿವರ್ಸಿಟಿ ಧಾರವಾಡ ಪ್ರಾಧ್ಯಾಪಕ ಡಾ|| ಎಸ್.ಕೆ ಮೇಲಕರ ಹೇಳಿದರು.

ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ನಡೆದ ಪಾವನಗಂಗಾ ಕೋಲಿ ಕಬ್ಬಲಿಗ ಸರಕಾರಿ ಮತ್ತು ಅರೆ ಸರಕಾರಿ ನೌಕರರ ಪತ್ತಿನ ಸಹಕಾರ ಸಂಘದ ಐದನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ
ಅವರು ಮಾತನಾಡಿದರು.

ಸಹಕಾರ ಸಂಘಗಳು ಸಮಾಜಮುಖಿಯಾಗಿರಬೇಕು, ಸಂಘದಲ್ಲಿರುವ ಸದಸ್ಯರು ಲಾಭಕ್ಕಾಗಿ ಹಣವನ್ನು ಹೂಡಿಕೆ ಮಾಡದೆ, ಕಷ್ಟದಲ್ಲಿರುವ ಸಮಾಜದ ಜನರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಹೊಂದಿ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಚಿತ್ರಶೇಖರ ತುಂಬಗಿ ಮಾತನಾಡಿ ಸಂಘದ ಸದಸ್ಯರು ಷೇರು, ಲಾಭಾಂಶ ಮುಂತಾದ ಹಲವಾರ ಅಂಕಿ ಅಂಶಗಳನ್ನು ಸಭೆಯ ಮುಂದಿಟ್ಟರು.

ಸಭೆಯಲ್ಲಿ ನಿವೃತ್ತರಿಗೆ, ಷೇರು ಕುಬೇರದಾರರಿಗೆ, ಜೋಕುಮಾರಸ್ವಾಮಿ ದರ್ಶನ ಮಾಡಿಸುವ ಸಮಾಜದ ಮಹಿಳೆಯರಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಮ್.ಎಸ್. ಶಿರವಾಳ, ವಸಂತರಾವ ನರಿಬೋಳ, ಪರಶುರಾಮ ಹಂಚಿನಾಳ, ಪರಶುರಾಮ ನ್ಯಾವನೂರ, ಅಮೃತ ಮಾಲಿ ಪಾಟೀಲ, ಬಸವರಾಜ ಕರ್ನಾಳ, ಹೊಳೆಪ್ಪ ಕೋಳೂರ, ಜಟ್ಟೆಪ್ಪ ತಳವಾರ, ಅಮಲಪ್ಪ ಯರಗೋಳ, ಅಮರಪ್ಪ ಕೂಡಗಿ, ಮಲ್ಲಿಕಾರ್ಜುನ ಕೊಟ್ರಗಸ್ತಿ, ಮಹಾಂತೇಶ ಬಿಎಸ್‍ಎನ್‍ಎಲ್, ಬಸವರಾಜ ಬಸವಪಟ್ಟಣ ಸೇರಿದಂತೆ ಅನೇಕರು ಸಮಾಜದ ಮುಖಂಡರು, ಸಂಘದ ಪದಾಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*