ಆರೋಗ್ಯ
ಪದೇ ಪದೇ ಮರುಕಳಿಸುವ ಪಾಶ್ರ್ವವಾಯು ಆಘಾತವನ್ನು ತಡೆಗಟ್ಟಲು ಕಾರ್ಡಿಯಾಕ್ ಅಕ್ಲೂಡರ್ ಅನ್ನು ಯಶಸ್ವಿಯಾಗಿ ಅಳವಡಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ
90 ವರ್ಷದ ರೋಗಿಗೆ ಲಾಭ ತಂದ ಈ ಅನನ್ಯ ವೈದ್ಯಕೀಯ ತಂತ್ರ
ಬೆಂಗಳೂರು, (ಸೆ: 26): ಪದೇಪದೇ ಮರುಕಳಿಸುವ ಪಾಶ್ರ್ವವಾಯು ಆಘಾತ(ಸ್ಟ್ರೋಕ್)ವನ್ನು ತಡೆಯುವುದಕ್ಕಾಗಿ ಮತ್ತೊಂದು ವೈದ್ಯಕೀಯ ಅದ್ಭುತ ಕಾರ್ಯವನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆ ಕೈಗೊಂಡಿದ್ದು, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಮೊದಲ ಬಾರಿಗೆ ಮಾರ್ಗಭಂಜಕ ತಂತ್ರಜ್ಞಾನವನ್ನು ಬಳಸಿದೆ. 90 ವರ್ಷ ವಯಸ್ಸಿನ ರೋಗಿಯ ಹೃದಯದ ಭಾಗವೊಂದನ್ನು ಮುಚ್ಚಲು ಮತ್ತು ರಕ್ತ ಗಡ್ಡೆ ಕಟ್ಟುವುದನ್ನು ತಡೆಯಲು ಈ ನೂತನ ವೈದ್ಯಕೀಯ ತಂತ್ರವನ್ನು ಮಣಿಪಾಲ್ ಆಸ್ಪತ್ರೆಯ ಹೃದಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಂಜನ್ ಶೆಟ್ಟಿ ಅವರು ಬಳಸಿದ್ದಾರೆ. ಪಾಶ್ರ್ವವಾಯು ಆಘಾತ ಭಾರತದಲ್ಲಿ ಸಾವು ಮತ್ತು ವೈಕಲ್ಯತೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಆಘಾತಕ್ಕೆ ಪ್ರಾಥಮಿಕ ಕಾರಣ ಎಂದರೆ- ಏಟ್ರಿಯಲ್ ಫೈಬ್ರಿಲೇಷನ್ ಆಗಿರುತ್ತದೆ. ಈ ಸ್ಥಿತಿಯಲ್ಲಿ ಹೃದಯದ ಮೇಲ್ಭಾಗದ ಗೂಡು(ಏಟ್ರಿಯಮ್)ಗಳು ಸರಿಯಾಗಿ ಸಂಕುಚಿತವಾಗುವುದಿಲ್ಲ. ಇದರಿಂದ ರಕ್ತ ಗಡ್ಡೆ ಕಟ್ಟುತ್ತದೆ. ಈ ಗಡ್ಡೆಗಳು ದೇಹದ ಯಾವುದೇ ಭಾಗಕ್ಕೆ ತೆರಳಬಹುದಾಗಿರುತ್ತದೆ. ಇದು ಮೆದುಳಿನ ರಕ್ತ ಪೂರೈಕೆಗೆ ಅಡ್ಡಿವುಂಟು ಮಾಡಿದಾಗ ಪಾಶ್ರ್ವವಾಯುವಿಗೆ ದಾರಿಯಾಗುತ್ತದೆ.
Be the first to comment