ವಿಜಯಪುರ::(ಸೆ.30) ರಾಜ್ಯಕ್ಕೆ ಕೃಷ್ಣಾ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 2010ರಲ್ಲಿ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಬಂದಿದೆ.
2013ರಲ್ಲಿ ಆಂಧ್ರ ಪ್ರದೇಶದಿಂದಾಗಿ ಆಲಮಟ್ಟಿ ಎತ್ತರಕ್ಕೆ ತಡೆ ಮಾಡಿತು. ಸುಪ್ರೀಂಕೋರ್ಟ್ ನಲ್ಲಿ ನೀರು ಹಂಚಿಕೆ ವಿಚಾರವಾಗಿ ಪಿಟಿಷನ್ ಹಾಕಿದೆ. ಕಳೆದ 6 ವರ್ಷಗಳಿಂದ ಆಲಮಟ್ಟಿ ಎತ್ತರ ಮಾಡಿ ನಮ್ಮ ಪಾಲಿನ ನೀರನ್ನು ಹಿಡಿದುಕೊಳ್ಳಲು ಆಗಲಿಲ್ಲ. ಕೃಷ್ಣಾ ನ್ಯಾಯಾಧಿಕರಣಕ್ಕೆ ಸರಿಯಾದ ಕಾನೂನು ಮಾರ್ಗದರ್ಶನ ಇಲ್ಲ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆದ್ರೆ ಅದು ಸಂಪೂರ್ಣ ಸರಿಯಲ್ಲ ಎನ್ನುತ್ತಾ ನಾನು ನಿನ್ನೆ ಈ ಬಗ್ಗೆ ಮುಖ್ಯಕಾರ್ಯದರ್ಶಿ ಗಳಿಗೆ ಮಾಹಿತಿ ನೀಡಿದ್ದೇನೆ. ವಾಟ್ಸ್ ಪ್ ಮೂಲಕ ಅದನ್ನು ಕಳುಹಿಸಿದ್ದೇನೆ. ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇನೆ. ಆದಷ್ಟು ಬೇಗ ನಾವು ಕಾನೂನು ಹೋರಾಟದ ತಂಡವನ್ನು ಸನ್ನದ ಮಾಡ ಬೇಕಿದೆ ಎಂದು ಹೇಳಿದ್ರು.
ಕೃಷ್ಣಾ ನದಿ ನೀರು ವ್ಯಾಜ್ಯ ಉತ್ತರ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದೆ. ಶೇ. 60% ನೀರಾವರಿ ಕಾಮಗಾರಿಗಳು ಕೃಷ್ಣಾ ನದಿ ವ್ಯಾಪ್ತಿಯಲ್ಲಿವೆ. ರಾಜ್ಯ ಸರ್ಕಾರ ಈ ವ್ಯಾಜ್ಯವನ್ನು ಬೇಗ ಇತ್ಯರ್ಥ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಸಾಧ್ಯವಾದ್ರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ.. ಅಕ್ಟೋಬರ್ 18ರ ನಂತರ ಸುಪ್ರೀಂಕೋರ್ಟ್ ತೀರ್ಪು ಬರಲಿದೆ ಆದ್ದರಿಂದ ರಾಜ್ಯ ಸರ್ಕಾರ ಮಹಾರಾಷ್ಟ್ರದ ಜೊತೆ ಮಾತುಕತೆ ನಡೆಸಬೇಕು, ಕೇಂದ್ರ ಸರ್ಕಾರ ಮುಂದೆ ಹೋಗಿ ರಾಜ್ಯ ಸರ್ಕಾರ ಮನವಿ ಮಾಡಬೇಕು, ಅದ್ರಂತೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಾಡಿದಂತೆ ಇಲ್ಲಿಯೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು, ನೋಟಿಪಿಕೇಷನ್ ಮೂಲಕ ಸುಪ್ರೀಂಕೋರ್ಟ್ ಆದೇಶ ಪಾಲನೆ ಜೊತೆಗೆ ನೀರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ರು
ಇನ್ನೂ ವಿಜಯಪುರ ಜಿಲ್ಲೆಯ ಆಲಮಟ್ಟಿ ಅಣೆಕಟ್ಟು 524ಕ್ಕೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ 75.533 ಲಕ್ಷ ಎಕರೆ ಪ್ರದೇಶ ಮುಳುಗಡೆಯಾಗುತ್ತೆ.ಈಗಾಗಲೇ ಕೆನಾಲ್ ನೆಟವರ್ಕ್ ಗೆ ಹಣ ಬಿಡುಗಡೆಯಾಗಿದೆ. ಅವಾರ್ಡ್ ಮಾಡಲು ಹಣ ಬಿಡುಗಡೆ ಮಾಡಲಾಗಿದೆ, 50 ಸಾವಿರ ಕೋಟಿ ವೆಚ್ಚದಲ್ಲಿ ಇದೆಲ್ಲ ಮುಕ್ತಾಯವಾಗಲಿದೆ., 25 ಸಾವಿರ ಕೋಟಿ ಲ್ಯಾಂಡ್ ಗೆ, ಆರ್ ಎಂಡ್ ಆರ್ ಗೆ 5 ಕೋಟಿ ಸೇರಿದಂತೆ ಸುಮಾರು 50 ಕೋಟೆಯಲ್ಲಿ ಎಲ್ಲವೂ ಮುಕ್ತಯವಾಗಲಿದೆ.ಐದು ವರ್ಷಗಳ ಅವಧಿಯಲ್ಲಿ ನೀರು ಸಂಗ್ರಹ ಮಾಡಬಹುದು ಎಂದರು ಮೊದಲ ಎರಡು. ವರ್ಷ ಪುರ್ನವಸತಿ ಕೆಲಸ ಆಗಬೇಕು. ಆಮೇಲೆ ನೀರು ಸಂಗ್ರಹಣೆ ಮಾಡಬೇಕು. 1 ಲಕ್ಷ ಕೋಟಿ ಖರ್ಚಾಗುತ್ತೆ ಅಂತಾ ಕೆಲವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು. ಆಲಮಟ್ಟಿ ಎತ್ತರ ರಾಷ್ಟ್ರೀಯ ಯೋಜನೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ,ನ್ಯಾಷನಲ್ ಯೋಜನೆಗೆ ಒಂದು ಸಾವಿರ ಕೋಟಿ ನೀಡಲಾಗುತ್ತದೆ. ತುಂಗಭದ್ರ ಹಾಗೂ ಕೃಷ್ಣಾ ನದಿ ಯೋಜನೆಗಳು ರಾಷ್ಟ್ರೀಯ ಯೋಜನೆಯಲ್ಲಿ ಸೇರಬಹುದು. ಆದ್ರೆ ಈ ಹಿಂದೆ ರಾಷ್ತ್ರೀಯ ಯೋಜನೆ ಎಂದು ಆಯ್ಕೆಯಾದ ಯೋಜನೆಗಳಿಗೆ ಹಣ ಮಂಜೂರಾಗಿಲ್ಲ ಎಂದು ತಿಳಿಸಿದ್ರು.. ಹಾಗಾಗಿ ಕೇವಲ ಘೋಷಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಂಕಿ ಅಂಶಗಳನ್ನು ವಿವರಿಸುತ್ತೇನೆ. ನೀರಾವರಿ ಯೋಜನೆ ವಿಚಾರದಲ್ಲಿ ಪ್ರತಿಷ್ಠೆ ಇರಬಾರದು. ನಾನು ಯಾವುದೇ ಪ್ರತಿಷ್ಠೆ ಇಲ್ಲದೆ ಮುಖ್ಯಮಂತ್ರಿಗಳು ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಹಿತಿ ನೀಡುತ್ತೇನೆ ಎಂದು ಎಂ.ಬಿ.ಪಾಟೀಲ ಹೇಳಿದ್ರು..
Be the first to comment