ನವಜಾತ ಶಿಶು ಅದಲು ಬದಲಾಗಿರುವ ಪ್ರಕರಣ:  ಡಿಎನ್​ಎ ಮಾದರಿ ಹೈದರಾಬಾದ್​ ಲ್ಯಾಬ್​ಗೆ ರವಾನೆ 

ವರದಿ-ಕುಮಾರ ನಾಯ್ಕ ,ಉಪಸಂಪಾದಕರು

ರಾಜ್ಯ ಸುದ್ದಿಗಳು 

ಮಂಗಳೂರು

ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲಾಗಿದೆ ಎಂಬ ಪೋಷಕರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಹಾಗು ತಂದೆ ತಾಯಿಯ ಡಿಎನ್‌ಎ ತಪಾಸಣೆಗೆ ನ್ಯಾಯಾಲಯ‌ ಅನುಮತಿ ನೀಡಿತ್ತು. ಈ ಹಿನ್ನೆಲೆ ಮಂಗಳವಾರ ಪೋಷಕರು ಹಾಗು ಮಗುವಿನ ಡಿಎನ್‌ಎ ಸ್ಯಾಂಪಲ್ ಪಡೆಯಲಾಗಿದ್ದು, ತಪಾಸಣೆಗಾಗಿ ಹೈದರಾಬಾದ್‌ನ ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ತಮ್ಮ ಮಗು ಅದಲು ಬದಲು ಆಗಿದೆ ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಾ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣ ದೂರು ದಾಖಲಾಗಿತ್ತು.

CHETAN KENDULI

ನ್ಯಾಯಾಲಯ ನೀಡಿರುವ ಆದೇಶದ ಅನ್ವಯ ಮಂಗಳವಾರ ಮಗು ಹಾಗು ತಂದೆ-ತಾಯಿಯ ಡಿಎಎನ್ ತಪಾಸಣೆ ನಡೆಯಿತು. ಬಳಿಕ ಅದರ ಸ್ಯಾಂಪಲ್​​ನ್ನು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೂರು ತಿಂಗಳೊಳಗೆ ಇದರ ವರದಿ ಬರಲಿದ್ದು, ಈ ವರದಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

 

ಕುಂದಾಪುರದ ಮಹಿಳೆ ಹೆರಿಗೆಗೆಂದು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೆರಿಗೆಯ ಸಂದರ್ಭ ಹೆಣ್ಣು ಮಗು ಎಂದು ದಾಖಲೆಯಲ್ಲಿ ನಮೂದಿಸಿ, ಬಳಿಕ ಗಂಡು ಮಗುವನ್ನು ನೀಡಿದ್ದರು ಎಂದು ಪೋಷಕರು ಆರೋಪಿದ್ದರು. ಬಳಿಕ ಪೋಷಕರು ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

Be the first to comment

Leave a Reply

Your email address will not be published.


*