ವೇತನ ಸಮಸ್ಯೆ: ತಾಲ್ಲೂಕಾಸ್ಪತ್ರೆ ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ ..!!!

ವರದಿ: ಸುಚಿತ್ರಾ ನಾಯ್ಕ, ಹೊನ್ನಾವರ

ಜಿಲ್ಲಾ ಸುದ್ದಿಗಳು

ಹೊನ್ನಾವರ:

ಸೋಮವಾರ ಹೊನ್ನಾವರ ತಾಲೂಕಿನ ಡಯಾಲಿಸಿಸ್ ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳು ಸೋಮವಾರದಿಂದ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

CHETAN KENDULI

ಬಡರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಘಟಕ ಬಂದ್ ಆದರೆ ನಮ್ಮ ಗತಿ ಏನು ಎಂದು ರೋಗಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಯಾಲಿಸಿಸ್ ಘಟಕದ ಸಿಬ್ಬಂದಿಗಳಿಗೆ ಜೂನ್, ಜುಲೈ, ಅಗಸ್ಟ್, ಸಪ್ಟೆಂಬರ್ ತಿಂಗಳ ವೇತನ ಪಾವತಿಯಾಗಿಲ್ಲ. ಹಲವಾರು ಬಾರಿ ಮನವಿ ಮಾಡಿಕೊಂಡರು ಕೇವಲ ಬಾಯಿ ಮಾತಿನ ಭರವಸೆಯಾಗುತ್ತಿದೆ, ಕಾರ್ಯ ರೂಪಕ್ಕೆ ಬರುತ್ತಿಲ್ಲ . ಇನ್ನೂ ಮುಂದೆ ನಮ್ಮಿಂದ ಸಾಧ್ಯವಿಲ್ಲ . ಸಂಬಳವಿಲ್ಲದೇ ಕೆಲಸ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಸೋಮವಾರ ಡಯಾಲಿಸಿಸ್ ಬಂದ್ ಮಾಡುತ್ತೇವೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಸಿಬ್ಬಂದಿಗಳು ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ನಮಗೆ ವಿಆರ್ ಎಸ್ ಕಂಪನಿ ನೀಡುವಷ್ಟೇ ಸಂಬಳ ಶನಿವಾರದೊಳಗೆ ನೀಡಿದರೆ ನಾವು ಮುಂದುವರೆಯುತ್ತೇವೆ. ಸಂಬಳ ನೀಡದಿದ್ದರೆ ಸೋಮವಾರ ಹೊನ್ನಾವರದಲ್ಲಿ ಡಯಾಲಿಸಿಸ್ ಘಟಕ ಬಂದ್ ಮಾಡಿ, ಕಾರವಾರದಲ್ಲಿ ಜಿಲ್ಲೆಯ ಎಲ್ಲಾ ನೌಕರರು ಸೇರಿ ಮುಷ್ಕರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ ಅಂದಾಜು 29 ಡಯಾಲಿಸಿಸ್ ಚಿಕಿತ್ಸೆ ಪಡೆಯುವ ರೋಗಿಗಳಿದ್ದು ಡಯಾಲಿಸಿಸ್ ಘಟಕ ಬಂದ್ ಆದರೆ ಈ ರೋಗಿಗಳಿಗೆ ತುಂಬಾ ಸಮಸ್ಯೆಯಾಗಲಿದೆ .

ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಇದ್ದು ಅದರ ಸಿಬ್ಬಂದಿಗಳಿಗೆ 6 ತಿಂಗಳುಗಳ ಕಾಲ ವೇತನ ಮತ್ತು ಭತ್ಯೆ ಸಿಗದೆ ಇದರ ಕಾರಣದಿಂದಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ರೀತಿಯಾಗಿ ಮುಂದುವರೆದಲ್ಲಿ ಡಯಾಲಿಸಿಸ್ ಘಟಕವನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ. ಅಥವಾ ಸಿಬ್ಬಂದಿಗಳ ಕೊರತೆಯಾದಲ್ಲಿ ಡಯಾಲಿಸಿಸ್ ಮಾಡುವುದು ಕಷ್ಟವಾಗುತ್ತದೆ.

ಅಧಿಕಾರಿಗಳು , ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ನ್ಯಾಯ ಒದಗಿಸುವ ಮೂಲಕ ಡಯಾಲಿಸಿಸ್ ರೋಗಿಗಳಿಗೆ ನೆರವಾಗಬೇಕಿದೆ.

Be the first to comment

Leave a Reply

Your email address will not be published.


*