ಭಟ್ಕಳ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಗ್ರಹ- ಅರಣ್ಯ ಅಧಿಕಾರಿಗಳ ತೆರವು ಕ್ರಮಕ್ಕೆ ತೀವ್ರ ಖಂಡನೆ

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ್

ಭಟ್ಕಳ ತಾಲೂಕಿನ ಗಾಂಧಿನಗರ ಗ್ರಾಮದ ವಿಧವೆ ಮಹಿಳೆಯೋರ್ವರು ಅರಣ್ಯ ಇಲಾಖೆಯ ಜಾಗದಲ್ಲಿನ ೫೦ ವರ್ಷದ ಹಳೆಯ ಅವರದ್ದೇ ಅಂಗಡಿ ದುರಸ್ತಿ ಮಾಡುವ ವೇಳೆ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ತಡೆಯೊಡ್ಡಿದ್ದಲ್ಲದೇ, ಘಟನೆಯ ಚಿತ್ರೀಕರಣ ಮಾಡುತ್ತಿದ್ದ ನಾಮಧಾರಿ ಸಮಾಜದ ಉಪಾಧ್ಯಕ್ಷರಿಗೆ ಅಧಿಕಾರಿ ದರ್ಪದಿಂದ ಏಕವಚನದಲ್ಲಿ ನಿಂದಿಸಿರುವುದನ್ನು ನಾಮಧಾರಿ ಸಮಾಜ ವಿರೋಧಿಸುತ್ತದೆ ಎಂದು ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ತಿಳಿಸಿದರು.ಅವರು ಭಟ್ಕಳ ಆಸರಕೇರಿ ನಿಚ್ಚಲಮಕ್ಕಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಬಳೆ ಗ್ರಾಮ ಪ೦ಚಾಯತ್ ವ್ಯಾಪ್ತಿಯ ಗಾಂಧಿನಗರದಲ್ಲಿ ನಾಮಧಾರಿ ಸಮಾಜದ ವಿಧವೆ ಮಹಿಳೆಯು ಆಕೆಯ ಗಂಡ ನಡೆಸಿಕೊಂಡು ಬರುತ್ತಿದ್ದ ಅರಣ್ಯ ಜಾಗದಲ್ಲಿರುವ ಸುಮಾರು ೫೦ ವರ್ಷದ ಹಳೆ ಅಂಗಡಿಯು ಬೀಳುವ ಸ್ಥಿತಿಯಲ್ಲಿದ್ದ ಕಾರಣ ಚಾವಣಿ ದುರಸ್ತಿಗೆ ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬಂದು ಅದನ್ನು ತೆರವು ಮಾಡಿದ್ದಾರೆ. ಇದರಿಂದ ಆತಂಕಕ್ಕೊಳಗಾದ ವಿಧವೆ ಮಹಿಳೆಯು ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆಯ ಕುಟುಂಬದ ನಿರ್ವಹಣೆಗೆ ಈ ಅಂಗಡಿಯೇ ಆಧಾರವಾಗಿತ್ತು. ಈಗ ಆಕೆಯ ಪರಿಸ್ಥಿತಿ ಕಷ್ಟದಲ್ಲಿದ್ದು, ಒಂದು ವೇಳೆ ಮಹಿಳೆಗೆ ಏನಾದರು ಅದಲ್ಲಿ ಅದಕ್ಕೆ ನೇರವಾಗಿ ಅರಣ್ಯ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಮತ್ತು ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

CHETAN KENDULI

ಹಳೆಯ ಅಂಗಡಿ ದುರಸ್ತಿ ಮಾಡಲು ಹೋದರೆ ಅವುಗಳನ್ನು ತೆರವು ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಈ ಘಟನೆಯ ದೃಶ್ಯವನ್ನು ಸೆರೆ ಹಿಡಿಯುತ್ತಾ ಅಧಿಕಾರಿಯನ್ನು ಸಾಮಾನ್ಯ ನಾಗರಿಕರಾಗಿ ಪ್ರಶ್ನಿಸಿದ ನಾಮಧಾರಿ ಸಮಾಜದ ಉಪಾಧ್ಯಕ್ಷರಿಗೆ ಏಕವಚನದಲ್ಲಿ ನಿಂದಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದರೆ ಅದು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಂತೆ ಎಂದು ಅವರ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಸಮಾಜಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ದರ್ಪದ ವಲಯ ಅರಣ್ಯಾಧಿಕಾರಿಯನ್ನು ಈ ಕೂಡಲೇ ವರ್ಗಾವಣೆ ಮಾಡಿ ಅವರ ವರ್ತನೆಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಶಾಸಕ ಸುನೀಲ ನಾಯ್ಕ ಅವರಿಗೆ ಆಗ್ರಹಿಸಿದ್ದಾರೆ.

ನಾಮಧಾರಿ ಸಮಾಜದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಮಾಜಿ ಅಧ್ಯಕ್ಷ ಎಮ್.ಬಿ.ನಾಯ್ಕ, ಮುಖಂಡರಾದ ಸುರೇಶ ನಾಯ್ಕ ಮಣ್ಕುಳಿ, ಗಿರೀಶ್ ನಾಯ್ಕ, ಮಂಜುನಾಥ ನಾಯ್ಕ ಪುರವರ್ಗ, ನಾಗೇಂದ್ರ ನಾಯ್ಕ, ವೆಂಕಟರಮಣ ನಾಯ್ಕ, ಗೋವಿಂದ ನಾಯ್ಕ ಮುಂತಾದವರು ಇದ್ದರು.

Be the first to comment

Leave a Reply

Your email address will not be published.


*