ಜಿಲ್ಲಾ ಸುದ್ದಿಗಳು
ಭಟ್ಕಳ್
ಇಂದು (ದಿ. 22.09.2021 ಬುಧವಾರ) ಬಿಜೆಪಿ ಯುವ ಮೋರ್ಚಾ ಭಟ್ಕಳ ಮಂಡಲದ ವತಿಯಿಂದ ಇಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 71 ನೇ ಜನ್ಮದಿನಾಚರಣೆ ಅಂಗವಾಗಿ 20 ದಿನಗಳ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಡಿಯಲ್ಲಿ 6ನೇ ದಿನದ ಕಾರ್ಯಕ್ರಮದ ಅಂಗವಾಗಿ ಭಟ್ಕಳದ ಸೋನಾರಕೇರಿಯ ಕೆರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೋವಿಂದ ನಾಯ್ಕ, ಕ್ಷೇತ್ರ ಪ್ರಭಾರಿಗಳಾದ ಚಂದ್ರು ಎಸಳೆ, ಪರಿಸರ ಸ್ನೇಹಿ ಅಭಿಯಾನದ ಜಿಲ್ಲಾ ಸಂಚಾಲಕರಾದ ನಾಗರಾಜ್ ತೊರ್ಕೆ, ಮಂಡಲದ ಅಧ್ಯಕ್ಷರಾದ ಸುಬ್ರಾಯ ದೇವಾಡಿಗ, ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಮಹೇಂದ್ರ ನಾಯ್ಕ, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀ ರವಿ ನಾಯ್ಕ ಜಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹಾದಿಮನೆ, ಮಾಜಿ ಸೈನಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀ ಶ್ರೀಕಾಂತ ನಾಯ್ಕ, ಕಾನೂನು ಪ್ರಕೋಷ್ಟಾದ ಜಿಲ್ಲಾ ಸಂಚಾಲಕರಾದ ಶ್ರೀ ಸುರೇಶ್ ನಾಯ್ಕ,ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾಯ್ಕ್, S T ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀ ಚಂದ್ರು ಗೊಂಡ, ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀ ಮುಕುಂದ್ ನಾಯ್ಕ,ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಶ್ರೇಯಾ ಮಹಾಲೆ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಭಾಸ್ಕರ್ ದೈಮನೆ ಮತ್ತು ಶ್ರೀ ಮೋಹನ್ ನಾಯ್ಕ, ಪ್ರಮುಖರಾದ ಲಕ್ಷ್ಮೀ ನಾಯ್ಕ, ಪಾಂಡುರಂಗ ನಾಯ್ಕ,ಸಚಿನ್ ಮಹಾಲೆ,ಸಂದೀಪ್ ಶೇಟ್,ವೆಂಕಟೇಶ್ ನಾಯ್ಕ,ವಿವೇಕ ನಾಯ್ಕ, ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ರವೀಶ್ ನಾಯ್ಕ,ಯುವಮೋರ್ಚಾ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.
Be the first to comment