ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಪ್ರವಾಸ ಮಂದಿರದಲ್ಲಿ ದಲಿತ ಸಂರಕ್ಷ ಸಮಿತಿ ಮಸ್ಕಿ ತಾಲೂಕ ಘಟಕದ ವತಿಯಿಂದ ಮಸ್ಕಿ ತಾಲೂಕಿನಾದ್ಯಂತ ವಿವಿಧ ಇಲಾಖೆ ಮತ್ತು ಗುತ್ತಿಗೆದಾರರ ಅಕ್ರಮ & ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಪತ್ರಿಕಾಗೋಷ್ಠಿಯನ್ನು ನಡೆಸಿದರು.ಹಾಲಾಪುರ ಗ್ರಾಮಪಂಚಾಯತ್ ವ್ಯಾಪ್ತಿಯ 14ನೇ ಹಾಗೂ 15 ನೇ ಹಣಕಾಸು ಯೋಜನೆಯಡಿ ಸುಮಾರು 40 ಲಕ್ಷ ರೂಪಾಯಿಗಳ ಸರ್ಕಾರದ ಅನುದಾನವನ್ನು ಲಪಟಾಯಿಸಿದ ಭ್ರಷ್ಟ ಅಭಿವೃದ್ಧಿ ಅಧಿಕಾರಿಗಳಾದ ಮುದುಕಪ್ಪ ಹಾಗೂ ಎಂ.ಸಿ ರೆಡ್ಡಿಯವರನ್ನು ಅಮಾನತು ಮಾಡಬೇಕು. ಇದೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿನ್ನಾಪುರ ಗ್ರಾಮದ ಶುದ್ಧಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸುಮಾರು ಎರಡು ವರ್ಷಗಳೇ ಗತಿಸಿವೆ ಆದ್ದರಿಂದ ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಜಲಜೀವನ್ ಮಿಷನ್ ಯೋಜನೆಯು ಮನೆಮನೆಗೆ ನಂದಿಹಾಳ ವ್ಯವಸ್ಥೆಯ ಮಾಡುವ ಕಾಮಗಾರಿಯು ಮಸ್ಕಿ ತಾಲೂಕಿನ ಹಂಚಿನಾಳ, ಶಂಕರ್ ನಗರ ಕ್ಯಾಂಪ್ ,ಹೂವಿನಬಾವಿ, ಕಾಟಗಲ್, ಬಸಾಪುರ. ಕೆ ,ಉದ್ಬಾಳ .ಯು, ಕ್ಯಾತನಟ್ಟಿ, ಕಡಬೂರು, ಸುಂಕನೂರು, ಅಂಕುಶದೊಡ್ಡಿ, ದುರ್ಗಾ ಕ್ಯಾಂಪ್ ಇನ್ನಿತರ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿಯು ತೀರಾ ಕಳಪೆ ಮಟ್ಟದಿಂದ ಕೂಡಿದ್ದು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಕಾಮಗಾರಿಯನ್ನು ನಿರ್ವಹಿಸಿರುವ ಗುತ್ತಿಗೆದಾರರ ಬಿಲ್ಲನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದೆ. ಸಾರ್ವಜನಿಕರ ಸಮಸ್ಯೆ:- ಸಾಗರ್ ಕ್ಯಾಂಪ್ ಹಾಗೂ ಬೆನಕನಾಳ ಗ್ರಾಮಗಳ ನಿವಾಸಿಗಳು ಸುಮಾರು ವರ್ಷಗಳಿಂದ ವಾಸಮಾಡುತ್ತಿರುವ ಬಡಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ, ವಿಧವಾ ವೇತನ ವೃದ್ಯಾಪ ವೇತನ ಸುಮಾರು ತಿಂಗಳಿಂದ ಮಾಸಾಶನ ದೊರೆತಿಲ್ಲ ಕೂಡಲೇ ವಿತರಿಸಬೇಕು.
ಅಕ್ರಮ ಮರಂ ಸಾಗಾಣಿಕೆ: ಅಕ್ರಮ ಮರಂ(ಕೆಂಪು ಮಣ್ಣು) ಅನ್ನು ರಾಜಾರೋಷವಾಗಿ ಸಾಗಣಿಕೆ ಮಾಡುತ್ತಿರುವ ಗುತ್ತಿಗೆದಾರರಾದ ಅಮ್ಮಾಪುರ, ಶಿವಕುಮಾರ್ ಬುದ್ದಿನ್ನಿ ಹಾಗೂ ಆರ್. ಕೆ ಕನ್ಸ್ಟ್ರಕ್ಷನ್ ಇವರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.ಗೂಂಡಾ ವರ್ತನೆ ಭೂಮಿ ಕಬ್ಜ : ಮಸ್ಕಿ ಹೋಬಳಿಯ ಯರದೊಡ್ಡಿ ಗ್ರಾಮದ ಸರ್ವೆ ನಂಬರ್ 91 ರಲ್ಲಿ ಒಟ್ಟು 86 ಎಕರೆ 1ಗುಂಟೆ ಸರಕಾರಿ ಗಾಯರಾಣ ಭೂಮಿ ಇದ್ದು, ಇದರಲ್ಲಿ 45 ಕರೆಗುಡ್ಡ ಗಾಡು ಪ್ರದೇಶವಾಗಿರುತ್ತದೆ. ಸುಮಾರು 50 ವರ್ಷಗಳಿಂದ ಹುಲುಗಪ್ಪ ತಂದೆ ಬಾಲಪ್ಪ ಎಂಬುವವರು ಅನುಸೂಚಿತ ಜಾತಿಯ ಮಾದಿಗ ಸಮುದಾಯದ ವ್ಯಕ್ತಿ ಸಾಗುವಳಿ ಮಾಡುತ್ತಿದ್ದರು. ಕೆಲವು ಕೌಟುಂಬಿಕ ಸಮಸ್ಯೆಯ ಮೇರೆಗೆ ಬೆಂಗಳೂರಿಗೆ ಗುಳೆ ಹೋಗಿದ್ದರು. ಆ ಅವಕಾಶವನ್ನು ಬಳಸಿ ಮನೆಯವರನ್ನು ಯರದೊಡ್ಡಿ ತಾಂಡದ ಕೆಲವು ಜನರು, ಗೂಂಡಾಗಳು ಬೆದರಿಸಿ ಸಾಗುವಳಿ ಮಾಡುವುದನ್ನು ಬಿಡಿಸಿ ಸೀನು ರಾಥೋಡ್ ಎನ್ನುವವರು ಹುಲುಗಪ್ಪ ಸಾಗುವಳಿ ಮಾಡುತ್ತಿದ್ದಭೂಮಿಯನ್ನುತಮ್ಮಕಬ್ಜಮಾಡಿಕೊಂಡಿರುತ್ತಾರೆ. ಈ ಭೂಮಿಯನ್ನು ಹುಲುಗಪ್ಪ ತಂದೆ ಬಾಳಪ್ಪನಿಗೆ ಮರಳಿ ಕೊಡಿಸುವ ಜವಾಬ್ದಾರಿ ಮಾನ್ಯ ತಹಸೀಲ್ದಾರರು ಕಾರ್ಯವಾಗಿರುತ್ತದೆ. ಆದ್ದರಿಂದ ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಒದಗಿಸಿಕೊಡಬೇಕೆಂದು ದಲಿತ ಸಂರಕ್ಷ ಸಮಿತಿ ಮಸ್ಕಿ ಒತ್ತಾಯಿಸಿದೆ.
ಇದೇ ಸಂದರ್ಭದಲ್ಲಿರಾಜ್ಯ ಉಪಾಧ್ಯಕ್ಷರಾದ ಭೀಮರಾಯ ಬಳಗಾನೂರ, ಜಿಲ್ಲಾಧ್ಯಕ್ಷರಾದ ಬಾಲಸ್ವಾಮಿ ಜಿನ್ನಾಪೂರ, ಜಿಲ್ಲಾ ಉಪಾಧ್ಯಕ್ಷರಾದ ಬಿ. ಮೌನೇಶ ಬಳಗಾನೂರ, ಮಸ್ಕಿ ತಾಲೂಕಾಧ್ಯಕ್ಷರಾದ ಸಿದ್ದಪ್ಪ ಹೂವಿನಭಾವಿ, ಮರಿಸ್ವಾಮಿ ಬೆನಕನಾಳ, ತುರುಮಂದೆಪ್ಪ ಮರಕಮದಿನ್ನಿ, ಖಾಸಿಂ ಮುರಾರಿ, ಆಂಜನೇಯ ಮುರಾರಿ ಲಕ್ಷ್ಮಣ್ ಹಿರೇ ಕಡಬೂರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment