ರಾಜ್ಯಮಟ್ಟದ ಮುದ್ದು ಕೃಷ್ಣ ವಿಡಿಯೋ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ  

ವರದಿ: ಜೀವೋತ್ತಮ್ ಪೈ .ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ:

CHETAN KENDULI

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರುಗಿದ್ದ ಜಿಲ್ಲಾಮಟ್ಟದ ಮುದ್ದುಕೃಷ್ಣ ವಿಡಿಯೋ ಸ್ಪರ್ಧೆಯಲ್ಲಿ ವಿಜೇತರಾದ ಮುದ್ದು ಮಕ್ಕಳಿಗೆ ಆಸರಕೇರಿ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದದ ಸಬಾಭವನದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕ್ರೀಯಾಶೀಲ ಗೆಳೆಯರ ಸಂಘವು ಆಯೋಜಿಸಿತ್ತು ಕಾರ್ಯಕ್ರಮನ್ನು ದೀಪ ಬೇಳಗುದರ ಮೂಲಕ ಉದ್ಘಾಟಿಸಲಾಯಿತು. ವಾರ್ಷಿಕ ವರದಿಯನ್ನು ಶ್ರೀಕಾಂತ ನಾಯ್ಕ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಈರಪ್ಪ ಗರ್ಡಿಕರ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ಇವರು ಮಾತನಾಡಿ ಇಂತಹ ಧಾರ್ಮಿಕ ಆಚರಣೆಗಳು ಚಿಕ್ಕ ವಯಸ್ಸಿನಲ್ಲೆ ಸನ್ಮಾರ್ಗದಲ್ಲಿ ಸಾಗಲು ಸಹಕಾರಿ ಎಂದರು.

ಶ್ರೀ ಮೋಹನ ನಾಯ್ಕ ಅಧ್ಯಕ್ಷರು ಶ್ರೀ ಗುರುರಕೃಪಾ ಪತ್ತಿನ ಸಹಕಾರಿ ಸಂಘ ಇವರು ಮಾತನಾಡಿ ಸಂಘವು ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ವಿಷಯ ಹಾಗೇಯೆ ಭಟ್ಕಳದಂತಹ ಪರಿಸರದಲ್ಲಿ ಇಂತಹ ಕಾರ್ಯಕ್ರಮಗಳು ವಿರಳವಾಗಿವೆ ಇಂತಹ ಕಾರ್ಯಗಳು ಸದಾ ಸಂಘದಿಂದ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು, ಶ್ರೀ ಉಮೇಶ ಮೊಗೇರ,ರಂಗಭೂಮಿ ಕಲಾವಿದರಾದ ಶ್ರಿ ದಾಮೋದರ ನಾಯ್ಕ ಉಪಸ್ಥಿರಿದ್ದರು. ಸಭಾಧ್ಯಕ್ಷತೆಯನ್ನು ಶ್ರೀ ಭಾಸ್ಕರ ನಾಯ್ಕ, ಅಧ್ಯಕ್ಷರು ಕ್ರಿಯಾಶಿಲ ಗೆಳೆಯರ ಸಂಘ ವಹಿಸಿದ್ದರು. ಈ ಸಂಧರ್ಭದಲ್ಲಿ ನಾಗಶ್ರೀ ನಾಯ್ಕ ಇವರಿಗೆ ಕಿಕ್‌ ಬಾಕ್ಸಿಂಗ್‌ನಲ್ಲಿ ಮಾಡಿದ ಸಾಧನೆಗೆ ಸನ್ಮಾನಿಸಲಾಯಿತು. ಅದೇ ರೀತಿ ಶ್ರೀ ಕಾಂತ ನಾಯ್ಕ ‍ಮತ್ತು ತಂಡಕ್ಕೆ, ಸ್ಪಂದನಾ ಚ್ಯಾರಿಟೇಬಲ್‌ ಟ್ರಸ್ಟ್‌, ಸತ್ಯನಾರಾಯಣ ಸ್ಪೊಟ್ಸ್‌ ಕ್ಲಬ್‌ ಮುಂಡಳ್ಳಿ, ಈ ಮೂರು ಸಂಘಟನೆಗಳಿಗೆ ಕೋವಿಡ್‌ 2 ನೇ ಅಲೆಯ ಸಂದರ್ಭದಲ್ಲಿ ಕರೋನಾ ವಾರಿಯರ್ಗಳಾಗಿ ರೋಗಿಗಳಿಗೆ , ಬಡವರಿಗೆ ಊಟ ಉಪಹಾರ, ಪಡಿತರ ಕಿಟ್‌ ನಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಗೌರವಿಸಲಾಯಿತು. ಪ್ರಥಮ ಬಹುಮಾನವನ್ನು ಅದ್ವಿತಾ ಎಸ್‌ ಆಚಾರ್ಯ ಜಾಲಿ,ಭಟ್ಕಳ, ದ್ವಿತಿಯ ಬಹುಮಾನವನ್ನು ನಯತಿ ಅಶ್ವಥ್‌ ಹೆಗಡೆ ಮತ್ತಿಹಳ್ಳಿ ಸಿದ್ದಾಪುರ (ಉ.ಕ), ಆಕಾಂಕ್ಷಾ ಆರ್‌.ಎನ್‌ ಹಾಗೂ ರಿಷಿತಾ ರಾಜೇಷ್‌ 3 ನೇ ಬಹುಮಾನ ಹಂಚಿಕೊಂಡರು. ರಮೇಶ ಖಾರ್ವಿ ‍ಹಾಗೂ ಪಾಂಡುರಂಗ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Be the first to comment

Leave a Reply

Your email address will not be published.


*