ಬೀದೀ ದೀಪಗಳೇ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಮತ್ತು ಪ್ರಯಾಣಿಕರು…

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಳಗಿನೂರು ಅಭಿತೋಟ ಗ್ರಾಮದಲ್ಲಿ ಬೀದೀ ದೀಪಗಳೇ ಇಲ್ಲದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಪಂಚಾಯತ್ ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಸ್ಥಳೀಯರಲ್ಲಿ ಎಲ್ಲಿ ಅಪಘಾತ ಉಂಟಾಗುವುದೆಂದು ಆತಂಕದಲ್ಲಿ ಸಂಚರಿಸುವುದಾಗಿದೆ.ರಾತ್ರಿಯ ಸಮಯದಲ್ಲಿ ಪ್ರಯಾಣಿಕರು ಸಂಚಾರ ಮಾಡುವಾಗ ಎಷ್ಟೋ ಅಪಘಾತ ಉಂಟಾಗಿದ್ದು, ರಸ್ತೆಯ ಪಕ್ಕದಲ್ಲಿ ದೊಡ್ಡ ಜಲ್ಲಿ ಕಲ್ಲುಗಳು ಹಾಸಿದ್ದು, ಯಾವಾಗ ಹೇಗೆ ಅಪಘಾತ ಸಂಬವಿಸುವುದೋ ಎಂದು ಆತಂಕ ಜನರಲ್ಲಿದೆ. ಅದರಲ್ಲೂ ಮುಖ್ಯವಾಗಿ ಅಪಘಾತ ವಲಯ ಎಂದೇ ಈ ಪ್ರದೇಶಕ್ಕೆ ಹೆಸರನ್ನು ಬಿಂಬಿಸಲಾಗಿದ್ದು, ರೋಡ್ ನಿರ್ಮಾಣವಾದಾಗಿನಿಂದ ಅಪಘಾತಗಳು ಕಡಿಮೆಯಾಗಿದೆಯಾದರೂ ಪ್ರಯಾಣಿಕರು ಸಂಚರಿಸುವಾಗ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದಾರಿ ಹೋಕರಿಗೆ ಅಪಘಾತ ಉಂಟಾಗಿದ್ದು,ಸಣ್ಣ ಪುಟ್ಟ ಗಾಯಗಳಾಗಿದ್ದುಂಟು.

CHETAN KENDULI

ರಾಷ್ಟ್ರೀಯ ಹೆದ್ದಾರಿಯ ಪರಿಸ್ಥಿತಿಯೇ ಹೀಗಾದರೆ ಇನ್ನೂ ಉಳಿದ ಕಡೆ ಯಾವ ಪರಿಸ್ಥಿತಿ ಇದೆ ಎನ್ನುವುದು ಸಾರ್ವಜನಿಕರಿಗೆ ಅರಿವಾಗದೇ ಇರುವ ಸಂಗತಿಯಾಗಿದೆ. ಈ ಪಂಚಾಯತ್ ಸಿಬ್ಬಂದಿಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರೂ ಕೂಡ, ನಿರ್ಲಕ್ಷ್ಯತೆ ತೋರುತ್ತಿದ್ದಾರೆ. ಜನರ ಕುಂದುಕೊರತೆ ಏನು ಎಂದು ಕೇಳಬೇಕಾದ ಪಂಚಾಯತ್ ಸದಸ್ಯರೂ ಕೂಡ ಕ್ಯಾರೆ ಅನ್ನುತ್ತಿಲ್ಲ. ಆಯ್ಕೆಯಾಗಿ ಬಂದ ನಂತರ ಸಾರ್ವಜನಿಕರ ಸಮಸ್ಯೆ ತಿಳಿಯಬೇಕಾದದ್ದು ಇವರ ಕರ್ತವ್ಯವಾದರೂ ಇದರ ಬಗ್ಗೆ ತಾತ್ಸಾರ ಭಾವನೆ ತೋರಿದ್ದಾರೆ.

ಇಲ್ಲಿನ ಪೋಸ್ಟ್ ಆಫೀಸ್ ಇಂದ ಹಿಡಿದು ಸ.ಹಿ.ಪ್ರಾ ಶಾಲೆಯಿರುವ ಮಧ್ಯದಲ್ಲಿ ಕರೆಂಟ್ ಕಂಬಗಳು ಮಾತ್ರ ನೋಡಬಹುದೇ ಹೊರತು, ಬೀದೀ ದೀಪಗಳನ್ನಲ್ಲ. ಇದೇ ರಸ್ತೆಯಲ್ಲಿ ಅನೇಕ ಅಧಿಕಾರಿಗಳು ಸಂಚರಿಸುತ್ತಾರೆ ಆದರೂ ಇವರಿಗೆ ಯಾಕೆ ಈ ಸಮಸ್ಯೆ ತಿಳಿಯುತ್ತಿಲ್ಲ ಎನ್ನುವುದು ಅರ್ಥವಾಗದೇ ಇರುವುದು ಸಂಗತಿಯಾಗಿದೆ.

ಇಲ್ಲಿನ ಸ್ಥಳೀಯರನ್ನು ಕೇಳಿದರೆ, ಪಂಚಾಯತ್ ಗೆ ತಿಳಿಸಿದರೂ ಕೂಡ ಯಾವ ಪಂಚಾಯತ್ ಸಿಬ್ಬಂದಿಗಳು, ಸದಸ್ಯರು ಇದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಸಮಸ್ಯೆ ಏನೆಂದು ಗೊತ್ತಿದ್ದು , ಗೊತ್ತಿಲ್ಲದಂತೆ ಹೋಗುತ್ತಾರೆ ಎನ್ನುವುದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಪಂಚಾಯತ್ ಗಮನಕ್ಕೆ ತಂದು ಬೀದೀ ದೀಪಗಳ ವ್ಯವಸ್ಥೆ ಸಮರ್ಪಕವಾಗಿ ನೀಡುವಂತೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

Be the first to comment

Leave a Reply

Your email address will not be published.


*