ಮಂಗಳೂರು: ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ…!

ವರದಿ: ಕುಮಾರ್ ನಾಯ್ಕ, ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮಂಗಳೂರು:

CHETAN KENDULI

ಮಂಗಳೂರಿನ ಸೈಂಟ್ ಅಲೋಶಿಯಸ್ ಗೋನ್ಝಾಗ್ ಸ್ಕೂಲ್ ನ ಹಾಲ್‌ನಲ್ಲಿ ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ,ಪೊಲೀಸರು ಹೆತ್ತವರಿಗೆ ಸೆಲ್ಯೂಟ್ ಮಾಡಬೇಕು, ಆದರೆ ದುಷ್ಟರಿಗೆ, ಸಮಾಜದ್ರೋಹಿಗಳಿಗೆ ವೀರಭದ್ರನ ಅವತಾರ, ದುರ್ಗಾಮಾತೆಯ ಅವತಾರ ತಾಳಬೇಕು ಅಂದರು.

ಚಲನಚಿತ್ರಗಳಲ್ಲಿ ಪೊಲೀಸರನ್ನು ಧೈರ್ಯವಂತರನ್ನಾಗಿ ಮಾಡಿ, ಸತ್ಯ- ನ್ಯಾಯ- ಧರ್ಮದ ವಿಚಾರದಲ್ಲಿ ನಡೆಯುವಂತರಾಗಿ ಮಾಡಿ. ಕೆಲವು ಚಿತ್ರಗಳಲ್ಲಿ ಪೊಲೀಸರ ಶೌರ್ಯದ ಬಗ್ಗೆ ತೋರಿಸುತ್ತದೆ. ಇನ್ನೂ ಕೆಲವು ಚಿತ್ರಗಳಲ್ಲಿ ಪೊಲೀಸರು ಹಾಸ್ಯದ ಸರಕು ಆಗುತ್ತಿರುವುದು ದುಃಖದ ವಿಚಾರ. ಮುಂದೆ ಪೊಲೀಸರನ್ನು ಹಾಸ್ಯದ ಸರಕನ್ನಾಗಿ ಮಾಡಬಾರದು ಎಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು. ನಮ್ಮ ಕ್ಷೇತ್ರಕ್ಕೆ ಬರುವ ಹಲವು ಮಕ್ಕಳನ್ನು ಭವಿಷ್ಯದಲ್ಲಿ ಮುಂದಿನ ಗುರಿ ಏನು ಅಂತಾ ಕೇಳಿದರೆ ತುಂಬಾ ಮಂದಿಯ ಉತ್ತರ ಪೊಲೀಸ್ ಅಂತಾ ಇರುತ್ತದೆ. ಆದರೆ ಕಾಲ ಕ್ರಮೇಣ ಪೊಲೀಸರ ಕಠಿಣ ಕೆಲಸ ನೋಡಿ ಪೊಲೀಸ್ ಬದಲು ಆರಾಮಾಗಿ ಮಾಡುವ ಉದ್ಯೋಗಕ್ಕೆ ಹೋಗುತ್ತಾರೆ. ಪೊಲೀಸ್ ಯೂನಿಫಾರ್ಮ್‌ಗೆ ಬಹಳ ಮಹತ್ವವಿದ್ದು, ಯುವಕ- ಯುವತಿಯರು ಶಿಷ್ಟರ ರಕ್ಷಣೆಯ, ದುಷ್ಟರ ಶಿಕ್ಷಣೆಯ ಪೊಲೀಸ್ ಕೆಲಸವನ್ನು ಆಯ್ಕೆ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಾಣೆ ಋಷಿಕೇಶ್ ಭಗವಾನ್, ಎಎನ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧೀಕ್ಷಕ ನಿಖಿಲ್, ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳ ಸುಮಾರು 206 ಶಿಬಿರಾರ್ಥಿಗಳು ಒಂದು ತಿಂಗಳ ಕಾಲ ನಡೆ‍ದ ತರಬೇತಿಯಲ್ಲಿ ಭಾಗವಹಿಸಿದ್ದರು. ಪೊಲೀಸ್ ದೈಹಿಕ ನೇಮಕಾತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ತರಬೇತಿ ನೀಡಲಾಗಿದೆ.

Be the first to comment

Leave a Reply

Your email address will not be published.


*