ಜಿಲ್ಲಾ ಸುದ್ದಿಗಳು
ಕುಮಟಾ:
ಪಂಚಾಯತ್ ಪಿ.ಡಿ.ಓ ಪ್ರಶಾಂತ್ ಶೆಟ್ಟಿ ಕಂಪ್ಯೂಟರ್ ಪರೀಕ್ಷೆಗೆ ಹಾಜರಾಗಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಅಪಘಾತ ನಡೆದು ಸಾವನ್ನಪ್ಪಿದ್ದ ಧಾರುಣ ಘಟನೆ ದಂಡಕುಳಿಯಲ್ಲಿ ನಡೆದಿದೆ. ಪರೀಕ್ಷೆಗೆ ಹಾಜರಾಗಲು ಹೋಗುತ್ತಿರುವಾಗ ತಲೆಸುತ್ತು ಬಂದ ಕಾರಣವೋ ಅಥವಾ ಇನ್ನಾವುದೋ ಕಾರಣಕ್ಕೆ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಪರಿಣಾಮ ಬೈಕ್ ಡಿವೈಡರ್ ಗೆ ಗುದ್ದಿದ್ದು , ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು ಅಲ್ಲಿ ನೆರೆದಿದ್ದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸಲಿಲ್ಲ.
ಇಡಗುಂಜಿ ಹಾಗೂ ಸಾಲ್ಕೋಡ ಪಂಚಾಯತ ಜವಾಬ್ದಾರಿ ನಿರ್ವಹಿಸುತ್ತಿದ್ದ ಪಿ.ಡಿ.ಓ ಪ್ರಶಾಂತ ಶೆಟ್ಟಿ ಮೃತ ದುರ್ದೈವಿ. ಹೊನ್ನಾವರದಿಂದ ಕಾರವಾರಕ್ಕೆ ಬೈಕ್ ನಲ್ಲಿ ತೆರಳುತ್ತಿರುವಾಗ ಕುಮಟಾ ತಾಲೂಕಿನ ದಂಡಕುಳಿ ಬಳಿ ಅಪಘಾತ ಸಂಭವಿಸಿ ಯಾವುದೋ ವಾಹನ ಬಡಿದು, ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
Be the first to comment